ನಗರಕ್ಕೆ ಬಸನಗೌಡ ಬಾದರ್ಲಿ ಆಗಮನ : ಅದ್ದೂರಿ ಸ್ವಾಗತ -ಶಿವಕುಮಾರ ಜವಳಿ.
ಸಂಜೆವಾಣಿ ವಾರ್ತೆ.
ಸಿಂಧನೂರು ಆ.೧೦ ನೂತನ ಎಮ್.ಎಲ್.ಸಿ ಬಸನಗೌಡ ಬಾದರ್ಲಿ ಆ.೧೨ (ಸೋಮವಾರ ) ಸಿಂಧನೂರು ನಗರಕ್ಕೆ ಆಗಮಿಸುತ್ತಿದ್ದು ಅದ್ದೂರಿ ಸ್ವಾಗತ ಕ್ಕೆ ಪಕ್ಷದ ವತಿಯಿಂದ ಹಾಗೂ ಅಭಿಮಾನಿಗಳು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಶಿವಕುಮಾರ ಜವಳಿ ಮನವಿ ಮಾಡಿದರು.
ಇಂದು ಸುದ್ದಿ ಗೋಷ್ಟಿ ನಡೆಸಿ ಪತ್ರಿಕಾ ಭವನದಲ್ಲಿ ಮಾತನಾಡಿದರು.ನಗರದ ಪಿ.ಡಬ್ಲ್ಯೂಡಿ. ಕ್ಯಾಂಪ್ ನಲ್ಲಿನ ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡಿ ತೆರೆದ ವಾಹನದಲ್ಲಿ ಡೊಳ್ಳು ,ಭಾಜ ಭಜಂತ್ರಿಯೊಂದಿಗೆ ಅದ್ದೂರಿಯಾಗಿ ಮೆರವಣಿಗೆ ಸಾಗಿ ಕುಷ್ಟಗಿ ರಸ್ತೆಯಲ್ಲಿರುವ ಜನ ಸ್ಪಂದನಾ ಕಾರ್ಯಾಲಯಕ್ಕೆ ಸಾಗಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಮತ್ತು ೧೫ ರಿಂದ ೨೦ ಸಾವಿರ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ವೆಂಕಟೇಶ ರಾಗಲಪರ್ವಿ ಮಾತನಾಡಿ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ರಾಗಿ ,ನೂತನ ಎಮ್.ಎಲ್.ಸಿ ಯಾಗಿ ನಮ್ಮ ಭಾಗದಿಂದ ಆಯ್ಕೆ ಯಾಗಿರುವುದು ಹೆಮ್ಮೆಯ ವಿಷಯ .ಸಿಂಧನೂರು ಹೆಸರನ್ನು ರಾಜ್ಯ ,ರಾಷ್ಟ್ರ ಮಟ್ಟದಲ್ಲಿ ಗುರುತಿಸುವ ಕೆಲಸಕ್ಕೆ ಮುಂದಾಗಿದ್ದಾರೆ.ಕೊರೊನಾ ಕಷ್ಟದ ಸಮಯದಲ್ಲಿ ಸಹಾಯ ಹಸ್ತ ಚಾಚುವ ಕೆಲಸ ,ಉದ್ಯೋಗ ಮೇಳ ,ಆರೋಗ್ಯ ಮೇಳ ಸ್ಪಂದಿಸಿದ್ದಾರೆ ಮತ್ತು ಮುಂದಿನ ಅವಧಿಯಲ್ಲಿ ನಮ್ಮ ಭಾಗದ ಜ್ವಲಂತ ಸಮಸ್ಯೆಗಳ ಕುರಿತಾಗಿ ಧ್ವನಿ ಎತ್ತುವ ಕೆಲಸ ಮಾಡುತ್ತಾರೆ ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಖಾಜಾಸಾಬ ರೌಡಕುಂದ ,ಅಮರೇಶ ಗಿರಿಜಾಲಿ, ವೆಂಕನಗೌಡ ಗಿಣಿವಾರ, ಅಬೀಬ್ ಕಾಜಿ ಉಪಸ್ಥಿತರಿದ್ದರು.