ವಿದ್ಯಾರ್ಥಿ ಜೀವನದಲ್ಲಿ ತಾಳ್ಮೆ- ಸಹನೆ ಮುಖ್ಯ- ಲಕ್ಷ್ಮಣಯಾದವ
ಸಿರವಾರ.ಅ೧೦-
ವಿದ್ಯಾರ್ಥಿಗಳ ತಮ್ಮ ಜೀವನದಲ್ಲಿ ಸಮಯ ಪಾಲನೆಯನ್ನು ಮಾಡುವ ಜೊತೆಗೆ ತಾಳ್ಮೆ, ಸಹನೆ, ಗುರಿಗಳನ್ನು ಅಳವಡಿಸಿಕೊಳಬೇಕು ಎಂದು ಪ್ರಥಮ ದರ್ಜೇ ಕಾಲೇಜಿನ ಉಪನ್ಯಾಸಕರಾದ ಲಕ್ಷ್ಮಣ ಯಾದವ ಹೇಳಿದರು. ಪಟ್ಟಣದ ಶ್ರೀ ಅಮರೇಗೌಡ ಪಾಟೀಲ್ ಬಯ್ಯಾಪುರ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ ಸಿರಿವಾರ ವತಿಯಿಂದ ಹಮ್ಮಿಕೊಂಡಿದ ೨೦೨೩-೨೪ನೇ ಸಾಲಿನ ರಾಷ್ಟ್ರೀಯ ಯೋಜನೆಯ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಎನ್‌ಎಸ್‌ಎಸ್ ಶಿಬಿರಾರ್ಥಿಗಳಿಗೆ ಕರ್ತವ್ಯಗಳನ್ನು ಮತ್ತು ತಾಳ್ಮೆಯನ್ನು ಕಳಿಸುತ್ತದೆ. ಜವಾಬ್ದಾರಿಯನ್ನು ಯಾವ ರೀತಿ ಸದಾ ನಿಭಾಯಿಸಬೇಕು ಮತ್ತು ಉತ್ತಮ ನಡವಳಿಕೆಗಳನ್ನು ಹಾಗೆ ಹೃದಯಕ್ಕೆ ತಟ್ಟುವ ಸಂಬಂಧಗಳನ್ನು ಅಂದರೆ ಸ್ನೇಹ ಸಹೋದರತೆ ಭಾವನೆ ಸಂಸ್ಕಾರ ಸಹೃದಯದ ಭಾವನೆಯನ್ನು ಕಳಿಸುವುದೇ ಎನ್‌ಎಸ್‌ಎಸ್ ಶಿಬಿರ ಮಾಡುತ್ತದೆ. ಮನುಷ್ಯ ಜೀವನದಲ್ಲಿ ಏರಿಳಿತಗಳು ಬರುವುದು ಸಹಜ. ಆದರೆ ಸುಖವೇ ಬರಲಿ ದು:ಖವೇ ಬರಲಿ ಯಾವಾಗಲೂ ತಾಳ್ಮೆ, ಸಹನೆಯಿಂದ ಬಾಳಬೇಕಾಗುತ್ತದೆ. ಬೇರೆ ವಿಚಾರಗಳನ್ನು ಬಿಡಬೇಕು. ವಿದ್ಯಾಭ್ಯಾಸದ ಬಗ್ಗೆ ಮಾತ್ರ ಯೋಚನೆ ಮಾಡಿ, ಎಲ್ಲಾರೋಂದಿಗೆ ಉತ್ತಮ ಸಂಬಂದ ಇಟ್ಟುಕೊಳಬೇಕು.ಎಂದರು. ಈ ಸಂದರ್ಭದಲ್ಲಿ ಶಿಬಿರದ ವರದಿಯನ್ನು ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿ ಪಿ ಪ್ರವೀಣ್ ಕುಮಾರ್ ಅವರು ಮಂಡಿಸಿದರು. ಉಪನ್ಯಾಸಕರಾದ ನರಸಪ್ಪ ಯಲ್ಲಪ್ಪ ಎಲ್ಲಾ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.