ಮೈಸೂರು ಪಾದಯಾತ್ರೆಯಲ್ಲಿ ಜೆ.ದೇವರಾಜಗೌಡ ಭಾಗಿ
ಸಿರವಾರ.ಅ೧೦- ಮುಡಾ – ವಾಲ್ಮೀಕಿ ನಿಗಮದಲ್ಲಿ ಆದಂತಹ ಹಗರಣಗಳನ್ನು ಖಂಡಿಸಿ ಮುಖ್ಯಮಂತ್ರಿಗಳ ರಾಜಿನಾಮೆ ಒತ್ತಾಯಿಸಿ ಬೆಂಗಳೂರು- ಮೈಸೂರಿಗೆ ಮಿತ್ರಪಕ್ಷಗಳಾದ ಬಿಜೆಪಿ- ಜೆಡಿಎಸ್ ಜಂಟಿಯಾಗಿ ಹಮ್ಮಿಕೊಂಡಿರುವ ಪಾದಯಾತ್ರೆಯಲ್ಲಿ ರಾಯಚೂರು ಜಿಲ್ಲೆಯ ನಾಯಕರು ಭಾಗವಹಿಸಿದರು.
ಅದರಲ್ಲಿ ಬಿಜೆಪಿ ಸಿರವಾರ ತಾಲೂಕ ಅದ್ಯಕ್ಷ ಜೆ.ದೇವರಾಜಗೌಡ ಹಾಗೂ ಪ್ರಧಾನ ಕಾರ್ಯದರ್ಶಿ ಹೆಚ್.ಕೆ.ಅಮರೇಶ ೩ ದಿನಗಳಿಂದ ಭಾಗವಹಿಸಿ ಬಿಜೆಪಿ ರಾಜ್ಯದ್ಯಕ್ಷ ಬಿ.ವೈ.ವಿಜಯೇಂದ್ರ, ಮೈಸೂರು ಸಂಸದರಾದ ಯದುವೀರ ಒಡೆಯರ್,ಆರ್.ಅಶೋಕ, ಸಿಟಿ ರವಿ, ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಜೊತೆ ಹೆಜ್ಜೆ ಹಾಕುವ ಮೂಲಕ ಬೆಂಬಲ ನೀಡಿದ್ದಾರೆ. ಬಸನಗೌಡ ಮಲ್ಲಟ, ವೆಂಕಟೇಶ ಇದರು.