ಹಾಸ್ಟೆಲ್ ಛಾವಣಿ ಪ್ಲಾಸ್ಟರ್ ಬಿದ್ದು ೩ ವಿದ್ಯಾರ್ಥಿಗಳಿಗೆ ಗಾಯ
ರಾಯಚೂರು,ಆ.೧೦ – ರಾಯಚೂರು ತಾಲ್ಲೂಕಿನ ಉಡಮಗಲ್ ಖಾನಪೂರ ಬಿಸಿಎಂ ವಸತಿ ನಿಲಯದ ಮೇಲ್ಬಾವಣಿ ಮಳೆಯಿಂದ ತೇವಗೊಂಡ ಪರಿಣಾಮ ಪ್ಲಾಸ್ಟರ್ ತುಕಡಿಗಳು ಬಿದ್ದು ೩ ಜನ ವಿದ್ಯಾರ್ಥಿಗಳು ಗಾಯಗೊಂಡಿದ ಘಟನೆ ನಿನ್ನೆ ಸಂಜೆ ಜರುಗಿದೆ.
ಮಳೆ ಬಂದಾಗ ನೀರು ಸರಿಯಾಗಿ ಹರಿದು ಮುಂದೆ ಹೋಗದಿರುವುದರಿಂದ ಕೋಣೆ ಮೇಲ್ಪಾವಣಿಯ ಪ್ಲಾಸ್ಟರ್ ಬಿದ್ದಿದೆ.
ಈ ವಸತಿ ನಿಲಯದಲ್ಲಿ ೩ ಕೋಣೆಗಳು ಇದ್ದು, ಒಂದು ಕೋಣೆಯಲ್ಲಿ ಪ್ಲಾಸ್ಟರ್ ತುಕಡಿ ಬಿದ್ದಿದೆ. ಪ್ಲಾಸ್ಟರ್ ಮಾಡಿದ ಮೇಲೆ ಸರಿಯಾಗಿ ಕ್ಯೂರಿಂಗ್ ಆಗದಿರುವುದರಿಂದ ಅದು ಗಟ್ಟಿಯಾಗಿ ನಿಲ್ಲುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಈ ಕುರಿತು ವಸತಿ ನಿಲಯದ ವಾರ್ಡನ್ ಆಂಜನೇಯ ಹೇಮರೆಡ್ಡಿ ಮಾತನಾಡಿ, ನಿನ್ನೆ ಸಂಜೆ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದರು. ಮಳೆಯಿಂದ ಏಕಾಏಕಿ ಮೇಲ್ಪಾವಣಿಯ ಪ್ಲಾಸ್ಟರ್ ತುಕಡಿಗಳು ವಿದ್ಯಾರ್ಥಿಗಳಾದ ಗುರುವೇಶ, ಕಾರ್ತಿಕ್, ಕಿರಣ್ ಎಂಬ ವಿದ್ಯಾರ್ಥಿಗಳ ಕೈಗಳ ಮೇಲೆ ಬಿದ್ದು ಪೆಟ್ಟಾಗಿ ರಕ್ತ ಬರುತ್ತಿತ್ತು. ತಕ್ಷಣ ವಿದ್ಯಾರ್ಥಿಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ನಗರದ ರಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿದೆ. ಯಾವುದೇ ಬಯವಿಲ್ಲ ಎಂದ ಅವರು, ಈ ಘಟನೆ ಬಗ್ಗೆ ಜಿಲ್ಲಾ ಹಾಗೂ ತಾಲ್ಲೂಕು ಅಧಿಕಾರಿಗಳಿಗೆ ಮಾಹಿತಿ ನೀಡುತ್ತೇವೆ.