ಕೊಪ್ಪಳದಲ್ಲಿ ಮೊದಲ ಸಿಎನ್‌ಜಿ ಮದರ್ ಸ್ಟೇಷನ್ ಉದ್ಘಾಟನೆ
ಕೊಪ್ಪಳ,ಆ.೧೦- ಎಜಿಮತ್ತುಪಿ ಪ್ರಥಮ್ ಈಗ ತನ್ನ ಮೊದಲ ಸಿಎನ್‌ಜಿ ಮದರ್ ಸ್ಟೇಷನ್ ಅನ್ನು ಕೊಪ್ಪಳದಲ್ಲಿ ಗ್ರೀನ್ ಕೊಪ್ಪಳ-ಸಿಎನ್‌ಜಿ ರ?ಯಾಲಿ ಜೊತೆಗೆ ಉದ್ಘಾಟಿಸಿರುವುದನ್ನು ಪ್ರಕಟಿಸಿದೆ.
ಹೆಚ್ಚು ಸ್ವಚ್ಛವಾದ ಸಂಚಾರ ಪರಿಹಾರಗಳು, ಶಕ್ತಿ ದಕ್ಷತೆಯ ಕೈಗಾರಿಕಾ ಮತ್ತು ವಾಣಿಜ್ಯ ಮೂಲಸೌಕರ್ಯಗಳನ್ನು ಪೋಷಿಸುವತ್ತ ಮತ್ತು ಈ ಪ್ರದೇಶಗಳಲ್ಲಿ ಮನೆಗಳಿಗೆ ಹೆಚ್ಚು ಸುರಕ್ಷಿತ ಅನಿಲ ಪೂರೈಕೆ ಕೈಗೊಳ್ಳುವತ್ತ ಇದು ಪ್ರಮುಖ ಹೆಜ್ಜೆಯಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರಲ್ಲಿ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ, ಗವಿಮಠ, ಕೊಪ್ಪಳ, ಶ್ರೀಮತಿ ಕಿಶೋರಿ ಬೂದನೂರ್, ರ?ನಾಟಕ ರಾಜ್ಯ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷ ಮತ್ತು ರಜನೀಕಾಂತ್-ವೈಷ್ಣವಿ ಪೆಟ್ರೋಲಿಯಂ ಡೀಲರ್ ಉಪಸ್ಥಿತರಿದ್ದರು.
ಹೊಸಪೇಟೆ-ಹುಬ್ಬಳ್ಳಿ ರಸ್ತೆಯ ಕೊಪ್ಪಳ ಬೈಪಾಸ್‌ನಲ್ಲಿ ನೂತನ ಸಿಎನ್‌ಜಿ ಮದರ್ ಸ್ಟೇಷನ್ ದೊಡ್ಡ ಪ್ರಮಾಣದ ಸಿಎನ್‌ಜಿಯನ್ನು ಇಂಧನ ಸ್ಟೇಷನ್‌ಗಳಿಗೆ ಕ್ಯಾಸ್ಕೇಡ್ ಫಿಲ್ಲಿಂಗ್‌ಗಳ ಮೂಲಕ ಪೂರೈಸಲು ಸಜ್ಜಾಗಿದೆ. ಎಜಿ&ಪಿ ಪ್ರಥಮ್‌ನಿಂದ ಈ ಸೌಲಭ್ಯ ಕರ್ನಾಟಕದಲ್ಲಿ ಎರಡನೇ ಸಿಎನ್‌ಜಿ ಮದರ್ ಸ್ಟೇಷನ್ ಆಗಿದೆ. ಕೊಪ್ಪಳದಲ್ಲಿ ೫ ಸಿಎನ್‌ಜಿ ಸ್ಟೇಷನ್‌ಗಳು ಮತ್ತು ಬಾಗಲಕೋಟೆಯಲ್ಲಿ ೧೪ ಹಾಗೂ ವಿಜಯಪುರದಲ್ಲಿ ೫, ಅನಂತಪುರ ಪ್ರದೇಶದಲ್ಲಿ ೨ ಸಿಎನ್‌ಜಿ ಸ್ಟೇಷನ್‌ಗಳಿಗೆ ಈ ಸ್ಟೇಷನ್ ಬೆಂಬಲ ನೀಡುತ್ತಿದೆ. ಕೊಪ್ಪಳ ಜಿಲ್ಲೆಯಲ್ಲಿ ೪೦,೦೦೦ಕ್ಕೂ ಹೆಚ್ಚಿನ ಸಂಖ್ಯೆಯ ಮನೆಗಳಿಗೆ ಈ ಸಿಎನ್‌ಜಿ ಸ್ಟೇಷನ್ ಅನುಕೂಲ ಮಾಡಿಕೊಡಲಿದೆ. ಗಂಗಾವತಿ, ಕುಷ್ಟಗಿ, ಕಾರಟಗಿ, ತಾವರೆಗೆರೆ, ಯೆಲಬುರ್ಗ, ಕುಕನೂರು ತಾಲೂಕುಗಳನ್ನು ಈ ಯೋಜನೆ ಒಳಗೊಂಡಿದ್ದು, ಈ ಪ್ರದೇಶದಲ್ಲಿ ೫೦ಕ್ಕೂ ಹೆಚ್ಚಿನ ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ.
ಉದ್ಘಾಟನಾ ಕಾರ್ಯಕ್ರಮ ೨೦ ಕಿಲೋ ಮೀಟರ್‌ನ ಗ್ರೀನ್ ಕೊಪ್ಪಳ -ಸಿಎನ್‌ಜಿ ರ?ಯಾಲಿಯನ್ನು ಒಳಗೊಂಡಿದ್ದು, ಇದರಲ್ಲಿ ೩೫ ಕಿಂತ ಅಧಿಕ್ ಸಿಎನ್‌ಜಿ ಚಾಲಿತ ವಾಹನಗಳು ಕಾಣಿಸಿಕೊಂಡಿದ್ದು ಸಾಂಪ್ರದಾಯಿಕ ಇಂಧನಗಳಿಗೆ ಪರಿಸರಸ್ನೇಹಿ ಬದಲಿ ಇಂಧನವಾಗಿ ಸಿಎನ್‌ಜಿಯ ಲಾಭಗಳನ್ನು ಪ್ರೋತ್ಸಾಹಿಸಲಿವೆ. ಈ ರ?ಯಾಲಿ ಎಜಿ&ಪಿ ಪ್ರಥಮ್ ಮದರ್ ಸ್ಟೇಷನ್‌ನಿಂದ ಆರಂಭವಾಗಿ ಪಟ್ಟಣದ ಪ್ರಮುಖ ಪ್ರದೇಶಗಳಾದ ಡಿಸಿ ಕಚೇರಿ, ಬಸವೇಶ್ವರ್ ಸರ್ಕಲ್, ಗವಿಮಠ ರಸ್ತೆ, ಗಡಿಯಾರ ಕಂಬ, ಜವಹರ ರಸ್ತೆ, ಅಶೋಕ್ ಸರ್ಕಲ್, ಬಸ್‌ಸ್ಟಾಂಡ್, ಬನ್ನಿಕಟ್ಟಿ, ಅಶೋಕ್ ಸರ್ಕಲ್, ಗುಂಜ್ ಸರ್ಕಲ್, ಡಿಸಿ ಕಚೇರಿ, ಮದರ್‌ಸ್ಟೇಷನ್(ಅಂತಿಮ ಸ್ಥಳ)ಗಳಲ್ಲಿ ಸಾಗಿ ಆರಂಭದ ಸ್ಥಳದಲ್ಲಿಯೇ ಮುಕ್ತಾಯಗೊಂಡಿತು.
ಈ ಮೈಲುಗಲ್ಲು ಕುರಿತು ಎಜಿ&ಪಿ ಪ್ರಥಮ್‌ನ ಉಪಪ್ರಧಾನ ವ್ಯವಸ್ಥಾಪಕ(ರಾಜ್ಯ ಸಮನ್ವಯಕಾರರು -ಸಾರ್ವಜನಿಕ ಸಂಪರ್ಕ)ರಾದ ಸುನೀಲ್ ರಾಯಂಕಿ ಮಾತನಾಡಿ, “ರಾಜ್ಯದಲ್ಲಿ ಎರಡನೇಯದಾದ ಹಾಗೂ ಕೊಪ್ಪಳದಲ್ಲಿ ಮೊದಲನೇಯದಾದ ಸಿಎನ್‌ಜಿ ಮದರ್ ಸ್ಟೇಷನ್‌ನ ಉದ್ಘಾಟನೆ ಅಪಾರ ಲಾಭ ನೀಡಲಿದೆ.
ಕಂಪನಿಯ ಒಡಿ. ಪ್ರದೀಪ್ ಭಟ್ ಮಾತನಾಡಿ ಕೊಪ್ಪಳದಲ್ಲಿ ಉನ್ನತ ತಂತ್ರಜ್ಞಾನದ ಸೌಲಭ್ಯವನ್ನು ಸ್ಥಾಪಿಸುವತ್ತ ನಾವು ಗಮನ ಕೇಂದ್ರೀಕರಿಸಿದ್ದೇವೆ. ಇದು ನೈಸರ್ಗಿಕ ಅನಿಲವನ್ನು ಭೂಗತ ಅನಿಲ ಕೊಳವೆ ಮಾರ್ಗಗಳು, ಆನ್‌ಲೈನ್ ಕಂಪ್ರೆಸರ್, ಸ್ಟೇಷನರಿ ಕ್ಯಾಸ್ಕೇಡ್‌ಗಳು, ಡಿಸ್ಪೆನ್ಸರ್‌ಗಳು ಮತ್ತು ಮೊಬೈಲ್ ಕ್ಯಾಸ್ಕೇಡ್ ಫಿಲ್ಲಿಂಗ್ ಸೌಲಭ್ಯಗಳ ಮೂಲಕ ಪೂರೈಸಲಿದೆ. ಈ ನಮ್ಮ ಲಭ್ಯವಿರುವ ಅನಿಲವನ್ನು ಮನೆಗಳು, ವಾಣಿಜ್ಯ ಉಪಯೋಗ ಮತ್ತು ಕೈಗಾರಿಕಾ ಬಳಕೆಗಳಿಗೆ ಸೂಕ್ತವಾಗುವಂತೆ ರೂಪಿಸಲಾಗಿದೆ.. ಕೊಳವೆ ಮೂಲಕ ಪೂರೈಕೆಯಾಗುವಂತಹ ಮತ್ತು ಅನೇಕ ಮನೆಗಳಿಗೆ ಅನಿಲದ ಕೊರತೆಯನ್ನು ತುಂಬಲು, ಬೆಂಕಿಯ ಅಪಾಯಗಳನ್ನು ಕಡಿಮೆ ಮಾಡಲು ಮತ್ತು ಕಡಿಮೆ ವೆಚ್ಚದ ಪರಿಹಾರಗಳನ್ನು ನೀಡಲು ಈ ಕ್ರಮ ಕೈಗೊಳ್ಳಲಾಗಿದೆ” ಎಂದರು.
ಮುಖ್ಯ ಅತಿಥಿಗಳಾಗಿದ್ದ ಶ್ರೀಮತಿ ಕಿಶೋರಿ ಬೂದನೂರ್, ರ?ನಾಟಕ ರಾಜ್ಯ ಮಹಿಳಾ ಕಾಂಗ್ರೆಸ್ ನ ಉಪಾಧ್ಯಕ್ಷ ಮತ್ತು ರಜನೀಕಾಂತ್ – ವೈಷ್ಣವಿ ಪೆಟ್ರೋಲಿಯಂ ಡೀಲರ್ ಅವರು ಕಾರ್ಯಕ್ರಮದಲ್ಲಿ ತಮ್ಮ ಚಿಂತನೆಗಳನ್ನು ಹಂಚಿಕೊಂಡು ಮಾತನಾಡಿ, “ಕೊಪ್ಪಳದಲ್ಲಿ ಸಿಎನ್‌ಜಿ ಮದರ್ ಸ್ಟೇಷನ್‌ನ ಉದ್ಘಾಟನೆ ನಮ್ಮ ಪ್ರದೇಶದಲ್ಲಿ ಪ್ರಮುಖ ಕ್ಷಣವಾಗಿದೆ. ನಮ್ಮ ಸಮುದಾಯದಲ್ಲಿ ಸಿಎನ್‌ಜಿ (ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್) ಲಭ್ಯವಾಗುವಂತೆ ಮಾಡುವ ಎಜಿ&ಪಿ ಪ್ರಥಮ್‌ನ ಪ್ರಯತ್ನಗಳು ಶ್ಲಾಘನೀಯ. ?” ಎಂದರು. ಇದೆ ಶುಭ ಸಂರ?ಭದಲ್ಲಿ ೩ ಹೊಸ ಆಟೋಗಳನ್ನು ಗ್ರಾಹಕರಿಗೆ ವಿತರಣೆ ಮಾಡಿದರು.
ಸಂಸ್ಥೆಯು ಈಗಾಗಲೇ ಬಾಗಲಕೋಟೆ, ಕೊಪ್ಪಳ ಮತ್ತು ರಾಯಚೂರು ನಗರಗಳಲ್ಲಿ/ಪ್ರದೇಶಗಳಲ್ಲಿ ೨೫ ಸಿಎನ್‌ಜಿ ಸ್ಟೇಷನ್‌ಗಳನ್ನು ಆರಂಭಿಸಿದ್ದು, ೨೦೨೪ರ ಅಂತ್ಯದ ಹೊತ್ತಿಗೆ ಇನ್ನೂ ೬ ಸ್ಟೇಷನ್‌ಗಳನ್ನು ಆರಂಭಿಸುವ ಯೋಜನೆ ಹೊಂದಿದೆ. ಸಿಎನ್‌ಜಿ ಮದರ್ ಸ್ಟೇಷನ್ ಸೌಲಭ್ಯವನ್ನು ಯಶಸ್ವಿಯಾಗಿ ಆರಂಭಿಸುವುದರೊಂದಿಗೆ, ನೈಸರ್ಗಿಕ ಅನಿಲದ ಲಭ್ಯತೆ ಹೆಚ್ಚಲಿದ್ದು, ಪೈಪ್‌ಲೈನ್ ಜಾಲದ ಮೂಲಕ ಪ್ರಸ್ತುತ ೬೭ ಕಿಲೋಮೀಟರ್‌ಗಳ ಕಾರ್ಯಾಚರಣೆ ಹೊಂದಿರುವ ಸ್ಟೀಲ್ ಪೈಪ್‌ಲೈನ್‌ನಲ್ಲಿ ಅನಿಲ ಹರಿಯಲು ಅವಕಾಶ ಲಭಿಸಲಿದೆ. ೨೦೨೪ರ ಡಿಸೆಂಬರ್ ಹೊತ್ತಿಗೆ ಒಟ್ಟಾರೆಯಾಗಿ ೮೨ ಕಿಲೋಮೀಟರ್ ಪೈಪ್‌ಲೈನ್(ಭವಿಷ್ಯದ ಯೋಜನೆಗಳು) ಕಾರ್ಯಾಚರಣೆ ಕೈಗೊಳ್ಳುವ ನಿರೀಕ್ಷೆ ಇದೆ.