ಹುಟ್ಟುಹಬ್ಬದ ಪ್ರಯುಕ್ತ ಮಕ್ಕಳಿಗೆ ಪುಸ್ತಕ ವಿತರಣೆ
ಮಾನವಿ,ಆ೧೦-
ಕಾಂಗ್ರೆಸ್ ಮುಖಂಡ ಹಾಗೂ ಚಲುವಾದಿ ಮಹಾಸಭಾದ ತಾಲೂಕು ಅಧ್ಯಕ್ಷರಾದ ಶಿವರಾಜ್ ಉಮಳಿಹೊಸೂರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಪಟ್ಟಣದ ಸರ್ಕಾರಿ ಕೇಂದ್ರ ಪ್ರಾಥಮಿಕ ಕುಂಬಾರವಾಡಿ ಶಾಲೆಯಲ್ಲಿ ಶಿವರಾಜ್ ಉಮಳಿಹೊಸೂರ್ ಅಭಿಮಾನಿ ಬಳಗದ ವತಿಯಿಂದ ಶಾಲೆಯ ಮಕ್ಕಳಿಗೆ ನೋಟ್ ಪುಸ್ತಕ ಸೇರಿದಂತೆ ನಾನಾ ಕಲಿಕಾ ಸಾಮಗ್ರಿಗಳನ್ನು ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಭೀಮಣ್ಣ ಗೊನವಾರ ಶಿವರಾಜ್ ಉಮಳಿ ಹೊಸೂರ್ ಅವರು ಯುವಕರ ಕಣ್ಮಣಿ ಹಾಗೂ ಬಡವರ ಕಣ್ಣೀರು ಒರೆಸುವ ದೊಡ್ಡ ಗುಣ ಅವರಲ್ಲಿ ಇದೆ.
ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅತಿ ಹೆಚ್ಚು ಹೊತ್ತು ನೀಡುತ್ತಾರೆ.ಅದಕ್ಕಾಗಿ ನಾವು ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಬೇಕೆಂದು ಮಕ್ಕಳಿಗೆ ಪುಸ್ತಕವನ್ನು ನೀಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಗುಲಾಮ್ ಸಾಬ್, ಮುಖ್ಯೋಪಾಧ್ಯಾಯರಾದ ಬಸ್ಸಮ್ಮ, ಸಹ ಶಿಕ್ಷಕರಾದ ವಿರುಪಮ್ಮ, ಕುಮಾರಿ ಬಸ್ಸಮ್ಮ, ಹಸೀನಾ ಹಾಗೂ ಅಭಿಮಾನಿ ಬಹಳಗದ ಬಸವ ಊಟಕನೂರ್, ರವಿಕುಮಾರ್,ಸಿದ್ದಾರೂಢ, ಅನಿಲ್ ಉಮಳಿ ಹೊಸೂರ್, ಸುಂದರ್ ಸೇರಿದಂತೆ ಯುವಕರು ಉಪಸ್ಥಿತರಿದ್ದರು.