ಡೆಂಗ್ಯೂ ಜ್ವರ ಪತ್ತೆ-ಅಧಿಕಾರಿಗಳ ಭೇಟಿ
ಲಿಂಗಸುಗೂರು.ಆ.೧೦-
ಲಿಂಗಸಗೂರು ತಾಲೂಕಿನ ನೀರಲಕೇರಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಅಡವಿಬಾವಿ ಗ್ರಾಮದಲ್ಲಿ ೬ ಶಂಕಿತ ಡೆಂಗ್ಯೂ ಪ್ರಕರಣಗಳು ಕಂಡು ಬಂದ ಕಾರಣ ಆರೋಗ್ಯ ಇಲಾಖೆಯ ತಾಲೂಕ ಆರೋಗ್ಯ ಅಧಿಕಾರಿ ಅಮರೇಶ್ ಪಾಟೀಲ್ ಅವರೊಂದಿಗೆ ಆರೋಗ್ಯ ಸಿಬ್ಬಂದಿಗಳು ಮನೆ ಮನೆಗೆ ಭೇಟಿ ನೀಡಿ ಮುಂಜಾಗ್ರತೆ ಕ್ರಮಗಳ ಮಾಹಿತಿ ಹಾಗೂ ಮನೆಯ ಒಳಾಂಗಣ ಹಾಗೂ ಹೊರಾಂಗಣ ದಲ್ಲಿನ ನೀರಿನ ತಾಣಗಳಲ್ಲಿನ ಲಾರ್ವಾ ಸಮೀಕ್ಷೆ ಕಾರ್ಯ ನಡೆಸಲಾಯಿತು.
ಈಗಾಗಲೇ ಅಡವಿಬಾವಿ ಗ್ರಾಮದಲ್ಲಿ ಆರು ಶಂಕಾಸ್ಪದ ಡೆಂಗಿ ಜ್ವರಗಳು ಪತ್ತೆಯಾಗಿದ್ದು ಇದರಲ್ಲಿ ಇಬ್ಬರು ಬಳ್ಳಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇನ್ನು ಕೆಲವರು ಲಿಂಗಸಗೂರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಡೆಂಗು ಗೆ ಸಂಬಂಧಿಸಿದಂತೆ ೧೦ ಜನ ಡೆಂಗು ಶಂಕಿತರ ಸ್ಯಾಂಪಲ್ ಗಳನ್ನು ರಾಯಚೂರಗೆ ಪರೀಕ್ಷೆಗಾಗಿ ಕಳುಹಿಸಲಾಗಿದ್ದು ವರದಿ ಬಂದ ನಂತರ ಖಚಿತ ಮಾಹಿತಿ ದೊರೆಯಲ್ಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.
ಆರೋಗ್ಯ ಇಲಾಖೆ ಗ್ರಾಮ ಪಂಚಾಯಿತಿ,ಮತ್ತು ಶಾಲಾ ಶಿಕ್ಷಕರ ಸಹಯೋಗದಲ್ಲಿ ಅಡವಿಬಾವಿ ಗ್ರಾಮದಲ್ಲಿ ಮನೆ ಮನೆಗೆ ಭೇಟಿ ನೀಡಿ ಡೆಂಗ್ಯೂ ಜಾಗೃತಿ ಜಾಥಾ ಮೂಡಿಸಲಾಯಿತು.
ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ:ಶಿವಕುಮಾರ್ ನಾರಾ.ತಾಲೂಕು ಆರೋಗ್ಯಾಧಿಕಾರಿ ಡಾ, ಅಮರೇಶ್ ಪಾಟೀಲ್.ಈಚನಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ, ಸಂಗನಗೌಡ ಡಿಗ್ಗಿ, ಆರೋಗ್ಯ ಶಿಕ್ಷಣಾಧಿಕಾರಿ ಪ್ರಾಣೇಶ್,ಡೆಂಗೀ ಪ್ರಕರಣದ ಮನೆಗಳಿಗೆ ಭೇಟಿ ಮಾಡಿ ಆರೋಗ್ಯ ಶಿಕ್ಷಣ, ನಾವು ಕುಡಿಯಲು ಬಳಸುತ್ತಿರುವ ನೀರು ಕಲುಷಿತ ವಾತಾವರಣಗಳ ಬಗ್ಗೆ ಸಮಗ್ರ ಮಾಹಿತಿ ತಿಳಿಸಿದರು. ಇದೇ ಸಂದರ್ಭದಲ್ಲಿ ಮುಂಜಾಗ್ರತ ಕ್ರಮವಾಗಿ ಗ್ರಾಮಸ್ಥರ ಸಭೆ ಮಾಡಿ ಸಾರ್ವಜನಿಕರ ಸಹಕಾರ ಕೋರಿದರು.ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹೇಶ್. ಕಾರ್ಯದರ್ಶಿ ಈಶ್ವರಪ್ಪ. ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಬಸವರಾಜ. ಜಗದೀಶ್. ಶಿವಕುಮಾರ್. ಶಿಕ್ಷಕಿಯರಾದ ಸಿದ್ದಮ್ಮ, ಪ್ರಿಯಾಂಕಾ. ವಿಜಯಲಕ್ಷ್ಮಿ, ಐಶ್ವರ್ಯ, ಆಶಾಕಾರ್ಯಕರ್ತರು,ವಿದ್ಯಾರ್ಥಿಗಳು ಭಾಗವಹಿಸಿದ್ದರು.