ಕಾಂಪೌಂಡ ನಿರ್ಮಾಣ ಕಾಮಗಾರಿಗೆ ಬಯ್ಯಾಪುರ ಚಾಲನೆ
ಲಿಂಗಸುಗೂರು:ಆ.೧೦-
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಜಿಲ್ಲಾ ಖನಿಜ ನಿದಿಯಡಿ ೨೦ ಲಕ್ಷದ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಕಂಪೌಂಡ ನಿರ್ಮಾಣ ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಪುರ ಚಾಲನೆ ನೀಡಿದರು.
ಪುರಸಭೆ ವ್ಯಾಪ್ತಿಯಲ್ಲಿ ಬರುವ ಹುಲಿಗುಡ್ಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಮಗಾರಿಗೆ ಚಾಲನೆ ನೀಡಿ ನಂತರ ಮಾತನಾಡಿದ ಅವರು, ಕಂಪೌಂಡ ಕಾಮಗಾರಿಗಳು ರಸ್ತೆಗೆ ಹೊಂದಿಕೊಂಡು ನಿರ್ಮಿಸುವುದು ಬೇಡ ರಸ್ತೆ ಅಗಲೀಕರಣ ಕೈಗೆತ್ತಿಕೊಂಡಾಗ ಕಂಪೌಂಡ ಗೋಡೆ ಮತ್ತೆ ತೆರವು ಮಾಡಬೇಕಾಗುತ್ತದೆ. ಇದರಿಂದ ರಸ್ತೆಗೆ ಹೆಚ್ಚಿನ ಪ್ರಮಾಣದಲ್ಲಿ ಜಾಗ ಬಿಟ್ಟು ಕಂಪೌಂಡ ಗೋಡೆ ನಿರ್ಮಿಸಬೇಕು. ಇಲ್ಲದೇ ಹೋದರೆ ಲಕ್ಷಾಂತರ ಹಣ ವ್ಯಯಿಸಿದರು ಉಪಯೋಗಕ್ಕೆ ಬರುವುದಿಲ್ಲ ಇದರಿಂದ ಸಾರ್ವಜನಿಕರ ಹಣ ಫೋಲಾಗುವ ಜೊತೆಗೆ ಯೋಜನೆ ಉದ್ದೇಶ ಸಫಲ ಆಗುವುದಿಲ್ಲ ಇದರ ಬಗ್ಗೆ ಇಂಜಿನಿಯರ್ ಹೆಚ್ಚಿನ ಮುತುವರ್ಜಿ ವಹಿಸಬೇಕೆಂದು ಸಲಹೆ ನೀಡಿದರು.
ಶಾಲಾ ಮಕ್ಕಳು ಅಧ್ಯಯನ ಮಾಡುವಂತಹ ಜಾಗದಲ್ಲಿ ಕೈಗೊಳ್ಳುವ ಕಟ್ಟಡದ ಕಾಮಗಾರಿಗಳನ್ನು ಗುಣಮಟ್ಟದಲ್ಲಿ ಕೈಗೊಳ್ಳಬೇಕು ಇದರಿಂದ ಹೆಚ್ಚಿನ ಬಾಳಿಕೆ ಬರುತ್ತವೆ. ಸರ್ಕಾರದಿಂದ ನಾನಾ ಯೋಜನೆಗಳಲ್ಲಿ ಕಟ್ಟಡ ನಿರ್ಮಾಣ ಕೈಗೆತ್ತೊಕೊಳ್ಳಲಾಗುತ್ತದೆ. ಕಾಮಗಾರಿ ಟೆಂಡರ್ ಪಡೆದ ಏಜೆನ್ಸಿಗಳು ಕಟ್ಟಡಗಳನ್ನು ಗಟ್ಟಿಮುಟ್ಟಾಗಿ ನಿರ್ಮಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ಪಾಮಯ್ಯ ಮರಾರಿ, ಗುಂಡಪ್ಪ ನಾಯಕ, ಭೂಪನಗೌಡ ಕರಡಕಲ್, ಬಸವರಾಜಗೌಡ ಗಣೇಕಲ್, ಟಿಎಪಿಎಂಸಿ ಅಧ್ಯಕ್ಷ ಶಶಿಧರ ಪಾಟೀಲ್ ಆಶಿಹಾಳ, ಮಲ್ಲಣ್ಣ ವಾರದ್. ಸಿದ್ದಪ್ಪ, ಅಭೀಷೇಕ ಪಾಟೀಲ್ ಬಯ್ಯಾಪುರ, ಪರುಶುರಾಮ, ಚನ್ನರೆಡ್ಡಿ ಬಿರದಾರ, ಕ್ಯಾಸಿಯೊಟೆಕ್‌ನ ತಿಪ್ಪಣ್ಣ ಸೇರಿದಂತೆ ಇದ್ದರು.