ಟಾಟಾ ಏಸ್ ಡಿಕ್ಕಿ ಪಾದಯಾತ್ರೆ ಹೊರಟಿದ್ದ ತಾಯಿ ಸಾವು,ಮಗಳು ಗಂಭೀರ
ರಾಯಚೂರು,ಆ.೧೦- ಪಾದಯಾತ್ರೆ ಹೊರಟಿದ್ದ ತಾಯಿ-ಮಗಳಿಗೆ ಟಾಟಾಏಸ್ ವಾಹನ ಡಿಕ್ಕಿ ಹೊಡೆದು ತಾಯಿ ದಾರುಣವಾಗಿ ಮೃತಪಟ್ಟರೆ, ಮಗಳು ಗಂಭೀರ ಗಾಯಗೊಂಡಿರುವ ದಾರುಣ ಘಟನೆ ಲಿಂಗಸೂಗೂರು ತಾಲೂಕಿನ ನಾಗಲಾಪೂರು ಗ್ರಾಮ ಹೊರವಲಯದಲ್ಲಿ ಅಪಘಾತ ಸಂಭವಿಸಿದೆ.
ವ್ಯಾಸ ನಂದಿಹಾಳ ಗ್ರಾಮದ ನಿವಾಸಿ ಭಾಗ್ಯಮ್ಮ (೩೫) ಅಪಘಾತದಲ್ಲಿ ಮೃತಪಟ್ಟವರು.ತಲೆಗೆ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಭಾಗ್ಯಮ್ಮಳ ಮಗಳ ಸ್ಥಿತಿ ಚಿಂತಾಜನಕವಾಗಿದೆ.
ಛತ್ತರದ ಹನುಮಾನ್ ದೇವಸ್ಥಾನಕ್ಕೆ ತಾಯಿ-ಮಗಳು ಇಬ್ಬರೂ ಪಾದಯಾತ್ರೆ ಹೊರಟಿದ್ದರು. ಈ ವೇಳೆ ವೇಗವಾಗಿ ಬಂದ ವಾಹನವು ಇವರಿಬ್ಬರಿಗೂ ಗುದ್ದಿದೆ. ಕೆಳಗೆ ಬಿದ್ದವರೇ ಗಂಭೀರ ಗಾಯಗೊಂಡಿದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಮುದಗಲ್ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.