ಪಿಐ ಅಶೋಕ್ ಸದಲಗಿ ಅಮಾನತ್ತಿಗೆ ಆಗ್ರಹ
ರಾಯಚೂರು, ಆ. ೧೦- ದೇವದುರ್ಗ ಪೊಲೀಸ್ ಠಾಣೆ ಬಳಿ ಸಂಗ್ರಹಿಸಿದ್ದ ಜಪ್ತಿ ಮರಳು ವಿಲೇವಾರಿಗೆ ಕಾರಣವಾಗಿರುವ ಪೊಲೀಸ್ ಆರಕ್ಷಕರ ನಿರೀಕ್ಷಕ ಅಶೋಕ್ ಸದಲಿಗಿ ಅವರನ್ನು ತಕ್ಷಣ ಅಮಾನತ್ತು ಮಾಡಬೇಕೆಂದು ಸಾಮಾಜಿಕ ಕಾರ್ಯಕರ್ತ ಶರಣಪ್ಪ ರೆಡ್ಡಿ ಒತ್ತಾಯಿಸಿದ್ದಾರೆ.
ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ದೇವದುರ್ಗ ವ್ಯಾಪ್ತಿಯಲ್ಲಿ ಸಂಗ್ರಹಿಸಿದ್ದ ನೂರಾರು mನ್ ಮರಳನ್ನು ಜಪ್ತಿ ಮಾಡಿ ದೇವದುರ್ಗ ಪೊಲೀಸ್ ಠಾಣೆ ಹಿಂಭಾಗದಲ್ಲಿ ಸಂಗ್ರಹಿಸಲಾಗಿತ್ತು. ಆದರೆ ಪೊಲೀಸ್ ಠಾಣೆ ಹಿಂಭಾಗದಲ್ಲಿದ್ದ ಮರಳು ಸಂಪೂuವಾಗಿ ಖಾಲಿಯಾಗಿದೆ. ಈ ಮರಳನ್ನು ಗಣಿ ಇಲಾಖೆ ಅನುಮತಿಯಿಲ್ಲದೆ ಇನ್ಸ್‌ಪೆಕ್ಟರ್ ಅಶೋಕ್ ಸದಲಗಿ ಅವರು ಕಾನೂನುಬಾಹಿರವಾಗಿ ವಿಲೇವಾರಿ ಮಾಡಿದ್ದಾರೆ ಎಂದು ಶರಣಪ್ಪ ಆರೋಪಿಸಿದ್ದಾರೆ.
ಪೊಲೀಸ್ ಠಾಣೆ ಸುಪರ್ದಿನಲ್ಲಿರುವ ಮರಳನ್ನು ಪೊಲೀಸರಿಗೆ ರಕ್ಷಣೆ ಮಾಡಲಾಗಿಲ್ಲ. ಸ್ವತಃ ಪೊಲೀಸರೇ ಈ ಮರಳು ದಾಸ್ತಾನುನನ್ನು ವಿಲೇವಾರಿ ಮಾಡಿದ್ದಾರೆ ಎಂದು ಆರೋಪಿಸಿದ ಅವರು ಗಣಿ ಇಲಾಖೆಯಿಂದ ಮರಳು ವಿಲೇವಾರಿಗೆ ಅನುಮತಿ ನೀಡಿಲ್ಲ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಪುಷ್ಪಲತಾ ಅವರು ಪತ್ರದ ಮೂಲಕ ಸ್ಪಷ್ಟಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಗಣಿ ಇಲಾಖೆ ಅಧಿಕಾರಿಗಳ ಅನುಮತಿಯಿಲ್ಲದೆ ಜಿಲ್ಲಾ ಮರಳು ಸಮಿತಿಯವರ ಅಧ್ಯಕ್ಷರ ಗಮನಕ್ಕೂ ತಾರದೆ ಈ ಮರಳನ್ನು ದೇವದುರ್ಗ ಠಾಣೆ ಇನ್ಸ್ ಪೆಕ್ಟರ್ ಅಶೋಕ್ ಸದಲಗಿ ವಿಲೇವಾರಿ ಮಾಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಡಿವೈಎಸ್ ಪಿ ನೇತೃತ್ವದಲ್ಲಿ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಆದರೆ ಈ ಘಟನೆ ಕುರಿತಂತೆ ಯಾವುದೇ ತನಿಖೆ ಅವಶ್ಯಕತೆಯೇ ಇಲ್ಲ ನೇರವಾಗಿ ಪೊಲೀಸ್ ವರಿಷ್ಠಾಧಿಕಾರಿಗಳು ಇನ್ಸ್‌ಪೆಕ್ಟರ್ ಸದಲಗಿ ಅವರನ್ನು ತಕ್ಷಣ ಅಮಾನತ್ತು ಮಾಡಬೇಕೆಂದು ಶರಣಪ್ಪ ರೆಡ್ಡಿ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.