ನಗರಸಭೆ ಕಾರ್ಮಿಕರ ಬಾಕಿ ವೇತನ ಪಾವತಿಗೆ ಆಗ್ರಹ
ರಾಯಚೂರು.ಆ೧೦:ನಗರಸಭೆಯಲ್ಲಿ ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿರುವ ಆಫ್ಸರ ಅಲಿ ಎಂಬ ಯುವಕ ಏಳು ತಿಂಗಳಿನಿಂದ ವೇತನ ಆಗಿಲ್ಲದಿರುವುದರಿಂದ ಮನನೊಂದು ಸಾವಿಗೆ ಶರಣಾಗಲು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವರದಿಯಾಗಿರುವುದು ಅತ್ಯಂತ ಅಘಾತ ಕಾರಿ ಹಾಗೂ ಆತಂಕ ಸಂಗತಿಯಾಗಿದೆ. ಈ ಬಗ್ಗೆ ಎಐಯುಟಿಯುಸಿಜಿಲ್ಲಾ ಸಮಿತಿ ತೀವ್ರ ಕಳವಳ ವನ್ನು ವ್ಯಕ್ತಪಡಿಸಿದ್ದು, ತಕ್ಷಣ ಬಾಕಿ ವೇತನ ಪಾವತಿಸುವಂತೆ ನಗರಸಭೆಯನ್ನು ಒತ್ತಾಯಿಸಿದೆ.
ಸುಮಾರು ೨೮ ಕಾರ್ಮಿಕರು ಎಲೆಕ್ಟ್ರಿಷಿಯನ್ ಹಾಗೂ ಸಹಾಯಕರು ಕಳೆದ ೭ ತಿಂಗಳನಿಂದ ವೇತನ ಇಲ್ಲದಿರುವ ಬಗ್ಗೆ ಈಗಾಗಲೇ ಗಮನಕ್ಕೆ ತಂದರೂ ವೇತನ ಪಾವತಿಸದಿರುವ ಕ್ರಮವು ಅತ್ಯಂತ ಖಂಡನೀಯ. ನಗರಸಭೆ ಹಾಗೂ ಜಿಲ್ಲಾಡಳಿತವು ೭ ತಿಂಗಳು ವೇತನ ಬಾಕಿ ಉಳಿಸಿರುವ ಗುತ್ತಿಗೆ ಎಜೇಂನ್ಸಿಯು ವೇತನ ಪಾವತಿ ಕಾಯ್ದೆ ಹಾಗೂ ಕನಿಷ್ಠ ವೇತನ ಕಾಯ್ದೆ ಉಲ್ಲಂಘಿಸಿದ್ದು ಟೆಂಡರ್ ಉಲ್ಲಂಘನೆ ಆಗಿರುತ್ತದೆಯಾದ್ದರಿಂದ ಸದರಿ ಏಜೆಂನ್ಸಿ ಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಮೂಲ ಮಾಲೀಕರಾಗಿರುವ ನಗರಸಭೆಯು ತಕ್ಷಣವೇ ವೇತನ ಪಾವತಿ ಮಾಡಬೇಕೆಂದು ಜಿಲ್ಲಾ ಸಮಿತಿಯು ಒತ್ತಾಯಿಸುತ್ತದೆ.
ಕಾರ್ಮಿಕ ಇಲಾಖೆಯು ಸದರಿ ಪ್ರಕರಣವನ್ನು ಸ್ವಯುಂ ದಾಖಲು ಮಾಡಿಕೊಂಡು ನಗರಸಭೆ ಹಾಗೂ ಗುತ್ತಿಗೆದಾರ ಏಜನ್ಸಿ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಸಹ ಒತ್ತಾಯಿಸುತ್ತೇವೆ.ಅಲ್ಲದೆ,ಕಾರ್ಮಿಕರು ಸಾವಿಗೆ ಶರಣಾಗುವಂತಹ ಕ್ರಮಕ್ಕೆ ಮೊರೆ ಹೋಗದೆ ದೃಢವಾಗಿ ಹೋರಾಟಕ್ಕೆ ಮುಂಬರಬೇಕೆಂದು ಜಿಲ್ಲಾ ಅಧ್ಯಕ್ಷರು ಕರೆ ನೀಡುತ್ತದೆ ತಿರುಮಲರಾವ್,ಜಿಲ್ಲಾ ಕಾರ್ಯದರ್ಶಿ. ಮಹೇಶ್ ಒತ್ತಾಯಿಸಿದ್ದಾರೆ.