ನ್ಯಾ,ಶಿವರಾಜ್ ಪಾಟೀಲ್‌ರಿಗೆ ಬಾಬುರಾವ್‌ರಿಂದ ಸನ್ಮಾನ
ಬೆಂಗಳೂರು.ಆ೧೦: ಸುಪ್ರೀಂ ಕೋರ್ಟ್ ನ ವಿಶ್ರಾಂತ ನ್ಯಾಯಾಧೀಶರು, ಕರ್ನಾಟಕ ರಾಜ್ಯ ಗಡಿ ಮತ್ತು ನದಿ ಸಂರಕ್ಷಣಾ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಶಿವರಾಜ್‌ವಿ. ಪಾಟೀಲ್ ಅವರಿಗೆ ಬೆಂಗಳೂರಿನ ನಿವಾಸದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಾಗೂ ರೈಲ್ವೆ ಸಲಹಾ ಮಂಡಳಿ ಮಾಜಿ ಸದಸ್ಯ ಡಾ. ಬಾಬುರಾವ್ ಅವರು ಸನ್ಮಾನಿಸಿ ಆಶೀರ್ವಾದ್ದಾರೆ.
ಈ ವೇಳೆ ಮಾತನಾಡಿದ ನ್ಯಾಯಮೂರ್ತಿ ಶಿವರಾಜ್‌ವಿ. ಪಾಟೀಲ ಅವರು ನೀವು ಮಾಡುತ್ತಿರುವ ಸಾಮಾಜಿಕ ಸೇವೆಯನ್ನು ಗಮನಿಸುತ್ತಿದ್ದೇವೆ. ನೀವೊಬ್ಬ ಸಮಾಜಸೇವಕರಾಗಿ ಉತ್ತಮ ಸೇವೆಯನ್ನು ಸಲ್ಲಿಸುತ್ತಿರುವುದರಿಂದಲೇ ನಿಮಗೆ ಪದವಿಗಳು, ಸ್ಥಾನಮಾನಗಳು ಹುಡುಕಿಕೊಂಡು ಬರುತ್ತಿವೆ. ಪರಿಶ್ರಮಕ್ಕೆ ತಕ್ಕಂತೆ ಸಿಕ್ಕ ಪದವಿಗನುಗುಣವಾಗಿ ನಿಷ್ಠೆಯಿಂದ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದರೆ ಯಶಸ್ಸು ಹಾಗೂ ಕೀರ್ತಿ ತಾನಾಗೇ ಹುಡುಕಿಕೊಂಡು ಬರುತ್ತದೆ. ಆ ನಿಟ್ಟಿನಲ್ಲಿ ಮುಂದುವರೆಯಿರಿ ನಿಮಗೆ ಎಲ್ಲದೂ ಒಳ್ಳೆಯದಾಗುತ್ತದೆ ಎಂದು ಬೆನ್ನುತಟ್ಟಿದರು.
ನಂತರ ಮಾತನಾಡಿದ ಡಾ. ಬಾಬುರಾವ್ ಅವರು, ತಮ್ಮ ಮಾರ್ಗದರ್ಶನದಲ್ಲಿಯೇ ಇಂದಿಗೂ ನಡೆಯುತ್ತಿದ್ದೇವೆ. ಮುಂದೆಯೂ ನಡೆಯುತ್ತೇವೆ. ನಮಗೆ ನೀವೇ ಸ್ಫೂರ್ತಿ ಎಂದು ವಿನಮ್ರವಾಗಿ ನುಡಿದರು.ಕರ್ನಾಟಕ ರಾಜ್ಯ ಗಡಿ ಮತ್ತು ನದಿ ಸಂರಕ್ಷಣಾ ಆಯೋಗದ ಕಾರ್ಯದರ್ಶಿ ಧರ್ಮೇಗೌಡರ್, ಬಸವರಾಜ ಅಸ್ಕಿಹಾಳ ಇದ್ದರು.