ಆ.೧೨ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ದೇವದುರ್ಗ:ಆ.೧೦-
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರಿಂದ ಆಗಸ್ಟ್ ೧೨ಕ್ಕೆ ಶಿಕ್ಷಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ದೇವದುರ್ಗ ತಾಲೂಕಿನ ೨೦೦. ಶಿಕ್ಷಕರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ದೇವದುರ್ಗ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿರುಪನಗೌಡ ನಾಗಡದಿನ್ನಿ ಮತ್ತು ಬಿ ಗಂಗಾಧರ ಪ್ರ. ಕಾರ್ಯದರ್ಶಿ ತಿಳಿಸಿದ್ದಾರೆ.
ಅವರು ಶನಿವಾರಸುದ್ದಿಗಾರರೊಂದಿಗೆ ಮಾತನಾಡಿ ೨೦೧೭ ವರೆಗೆ ನೇಮಕವಾದ ಶಿಕ್ಷಕರನ್ನು ೧- ರಿಂದ-೫ ಕ್ಕೆ ಸೀಮಿತಗೊಳಿಸಿರುವದನ್ನು ರದ್ದುಪಡಿಸಿ ಜೇಷ್ಠತೆ ಆಧಾರದಲ್ಲಿ ಬಡ್ತಿ ನೀಡಿ ೧ ರಿಂದ ೮ ಕ್ಕೆ ಪರಿಗಣಿಸಬೇಕು ಹಾಗೂ ಜೇಷ್ಠತೆ ಆಧಾರದ ಮೇಲೆ ಬಡ್ತಿ ನೀಡಬೇಕು. ಸಿ.&ಆರ್. ನಿಯಮ ಅವೈಜ್ಞಾನಿಕವಾಗಿದ್ದು ಅದನ್ನು ಕೈ ಬಿಡಬೇಕೆಂಬ ಶಿಕ್ಷಕರ ಹಲವಾರು ಬೇಡಿಕೆಗಳಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆಯು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯಲಿದ್ದು ದೇವದುರ್ಗ ತಾಲೂಕಿನಿಂದ ೨೦೦ ಕ್ಕೂ ಹೆಚ್ಚು ಶಿಕ್ಷಕ-ಶಿಕ್ಷಕಿಯರು ಪಾಲ್ಗೊಳ್ಳಲಿದ್ದಾರೆ. ಈ ಕುರಿತು ಕ್ಷೇತ್ರದ ಶಾಸಕರಿಗೆ ತಹಶೀಲ್ದಾರರು. ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿ ತಿಳಿಸಲಾಗಿದೆ. ಪ್ರತಿಭಟನೆಯಲ್ಲಿ ರಾಜ್ಯದ ೧ ಲಕ್ಷಕ್ಕೂ ಹೆಚ್ಚು ಶಿಕ್ಷಕರು ಭಾಗವಹಿಸಲಿದ್ದಾರೆ ಎಂದು ವಿರುಪನಗೌಡ. ಗಂಗಾಧರ್ ತಿಳಿಸಿದ್ದಾರೆ.