ಕ್ರೀಡೆಗಳಲ್ಲಿ ಧನಾತ್ಮಕ ಚಿಂತನೆ ಬೆಳಸಿಕೊಳ್ಳಿ: ಸೋಮಶೇಖರ ಹಂಚಿನಾಳ
ಕಲಬುರಗಿ,ಆ 10: ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಧನಾತ್ಮಕ ಚಿಂತನೆಯನ್ನು ಮೈಗೂಡಿಸಿಕೊಂಡು ಆಟದಲ್ಲಿ ಎಲ್ಲರೂ ಭಾಗವಹಿಸಬೇಕೆಂದು ಶಾಲಾ ಶಿಕ್ಷಣ ಇಲಾಖೆ ಕಲಬುರಗಿ ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ ಹಂಚಿನಾಳ ಅವರುವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅವರು ನಗರದ ಒಕ್ಕಲಗೇರಾ ಶ್ರೀ ವೀರತಪಸ್ವಿ ಚನ್ನವೀರ ಶಿವಾಚಾರ್ಯ ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಹೋಬಳಿಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆ ಕಾರ್ಯದರ್ಶಿ ಓಂಕಾರೇಶ್ವರ ಗೋಸಿಮಠ ವಹಿಸಿದ್ದರು. ಶಿಕ್ಷಕರಾದ ಶಿವಾನಂದ ಸಾಗರ ಕಾರ್ಯಕ್ರಮನಿರ್ವಹಿಸಿದರು.ಶಿವರಾಜ ನಾಯಕ ಸ್ವಾಗತಿಸಿ, ಬಸವರಾಜ ಇಂಗಳೇಶ್ವರ ವಂದಿಸಿದರು.ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲೆ ಮುಖ್ಯಗುರು ಚಂದ್ರಶೇಖರ ಚಂಡ್ರಕಿಮಠ,ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಸಂತೋಷ ಡಿಗ್ಗಿ,ಅನುಧಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಾನಂದ ಪಾಸೋಡಿ, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಧರ್ಮರಾಜ ಭೂಸನೂರ, ನೋಡಲ್ ಅಧಿಕಾರಿ ಅರ್ಜುನ ಹತ್ತಿ ,ಪ್ರಭಾಕರ ಪಾಟೀಲ,ಚಂದ್ರಕಲಾ,ಭಾಗ್ಯಲಕ್ಷ್ಮೀ,ಮಾನಪ್ಪ ನಾಯಕ,ಜ್ಯೋತಿದೇವಿ, ವಿಜಯಲಕ್ಷ್ಮೀ,ಸಂಗೀತಾ ಸೇರಿದಂತೆ ವಿವಿಧ ಶಾಲಾಗಳ ಮುಖ್ಯಶಿಕ್ಷಕರು ಸಿಬ್ಬಂದಿ ವರ್ಗದವರು ಪಾಲ್ಗೊಂಡರು.