ಕೃಷಿ ಪತ್ತಿನ ಸಹಕಾರಿ ಸಂಘ ಉದ್ಘಾಟನೆ
ಅರಕೇರಾ.ಆ೧೦-
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಬಡ ಹಾಗೂ ಮಧ್ಯಮವರ್ಗದ ಕೃಷಿಕರಿಗೆ ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸ ಮಾಡುತ್ತಿವೆ ಎಂದುಆರ್‌ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಎ.ರಾಜಶೇಖರ ನಾಯಕ ಹೇಳಿದರು.
ತಾಲೂಕಿನ ಹೇಮನೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಪ್ರಾಥಮಿಕಕೃಷಿ ಪತ್ತಿನ ಸಹಕಾರ ಸಂಘದಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿಮಾತನಾಡಿದರು. ಅವರು ಜಿಲ್ಲೆಯಲ್ಲಿ ಸಹಕಾರಿ ಸಂಘಗಳುಉತ್ತಮವಾಗಿಕಾರ್ಯನಿರ್ವಹಿಸುತ್ತಿವೆ. ಸಹಕಾರಿ ಕ್ಷೇತ್ರ ವಾಣಿಜ್ಯಬ್ಯಾಂಕ್‌ಗಳಿಗಿಂತ ಭಿನ್ನವಾಗಿ ನಡೆಸುತ್ತಿವೆ. ಕೃಷಿಕರ ಅನುಕೂಲಕ್ಕಾಗಿಸ್ಥಾಪಿತವಾದ ಸಹಕಾರಿ ಸಂಸ್ಥೆಗಳು ಪ್ರಗತಿ ಸಾಧಿಸುತ್ತಿರುವುದಕ್ಕೆ
ಸಹಕಾರಿಗಳೆಲ್ಲರೂ ಹೆಮ್ಮೆಪಡಬೇಕಾಗಿದೆ. ಕೃಷಿಕರು ಇದನ್ನುಸದ್ಭಳಕೆ ಮಾಡಿಕೊಳ್ಳಬೇಕು ಎಂದರು.
ಪ್ರಾಕೃಪಸ ಸಂಘದ ಅಧ್ಯಕ್ಷ ಹಂಪಯ್ಯ ನಾಯಕ ಮಾತನಾಡಿ,ಪ್ರಾಕೃಪಸ ಸಂಘಗಳು ಜನರ ವಿಶ್ವಾಸಾರ್ಹತೆ ಗಳಿಸಿವೆ. ರೈತರಿಗೆ ಕೃಷಿಸಲುವಾಗಿ ಶೂನ್ಯ ಬಡ್ಡಿ ದರದಲ್ಲಿ ನೀಡುವ ಸಾಲವನ್ನು ಸಕಾಲದಲ್ಲಿ
ಮರುಪಾವತಿಮಾಡಬೇಕು.ಇದರಿಂದ ರೈತರಿಗೆ ಬಡ್ಡಿಹೊರೆ ಬೀಳುವುದಿಲ್ಲ
ಎಂದರು.
ಪ್ರಮುಖರಾದ ಶಾಮರಾವ್ ಕುಲ್ಕರ್ಣಿ, ಗಂಗಪ್ಪಯ್ಯ ತಾತ,ಚನ್ನವೀರಯ್ಯ ಸ್ವಾಮಿ ಹಿರೇಮಠ, ಕೆಂಚಣ್ಣ ಪೂಜಾರಿ, ಶಿವರಾಜ ನಾಯಕಶಾಖೆ, ಶಿವರಾಜ ಕ್ಯಾದಿಗ್ಗೇರಾ, ಬಸವರಾಜ ನಾಯಕ ಮಟ್ಲ, ಮಾನಸಯ್ಯ
ನಾಯಕ, ಅಮರೇಶ ನಾಯಕ, ಶಿವಕುಮಾರ ನಾಯಕ ಕಾಟಮಳ್ಳಿ,ರಾಮಸ್ವಾಮಿ, ಶಿವಪ್ಪ ನಾಯಕ, ಶಿವರಾಜ ಮಾದೆ, ಲಿಂಗಣ್ಣ ನಾಯಕ ಹವಲ್ದಾರ್,ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮರಿಲಿಂಗಪ್ಪ ಗೌಡ ಇತರರಿದ್ದರು.