ಮಕ್ಕಳಲ್ಲಿ ದೇಸಿಯ ಸಂಸ್ಕೃತಿ ಬೆಳೆಸಿ
ರಾಯಚೂರು.ಆ೧೦-
ನಮ್ಮ ದೇಶದ ಸಂಸ್ಕೃತಿ ವಿಶ್ವಕ್ಕೆ ಮಾದರಿಯ ಸಂಸ್ಕೃತಿಯಾಗಿದೆ. ಇಂದಿನ ಮಕ್ಕಳಲ್ಲಿ ಆಧುನಿಕತೆಯ ಹಾಗೂ ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗುವುದನ್ನು ತಪ್ಪಿಸುವಲ್ಲಿ ಪಾಲಕರು ಮತ್ತು ಶಿಕ್ಷಕರು ನಮ್ಮ ದೇಸಿಯ ಸಂಸ್ಕೃತಿಯನ್ನು ಕಲಿಸಿ,ಉಳಿಸಿ, ಬೆಳೆಸಿರಿ ಎಂದು ರಾಯಚೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಶಿವಬಸಪ್ಪ ಮಾಲಿಪಾಟೀಲ್ ಹೇಳಿದರು.
ಅವರು ಸೇವಾ ಎಂಪಿ ಪ್ರಕಾಶ ಪದವಿ ಪೂರ್ವ ಕಾಲೇಜು ರಾಯಚೂರು ಹಾಗೂ ಕೊತ್ತಲ ಬಸವೆಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಂ, ಭಾರತ ವಿಕಾಸ ಸಂಗಮ, ವಿಕಾಸ ಅಕಾಡೆಮಿ ರಾಯಚೂರು ಮತ್ತು ರೋಟರಿ ಸೆಂಟ್ರಲ್ ಕ್ಲಬ್ ರಾಯಚೂರು ಇವರುಗಳ ಸಂಯುಕ್ತಾಶ್ರಯದಲ್ಲಿ ೭ನೇ ಭಾರತೀಯ ಸಂಸ್ಕೃತಿ ಉತ್ಸವ ಮತ್ತು ಕೊತ್ತಲ ಸುವರ್ಣ ಜಯಂತಿ ಅಂಗವಾಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಾಯಚೂರು ತಾಲೂಕ ಮಟ್ಟದ ಸ್ಪರ್ಧೆಗಳ
ಈ ಕಾರ್ಯಕ್ರಮದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಶಿವಬಸಪ್ಪ ಮಾಲಿ ಪಾಟೀಲ್ ಮಾತನಾಡಿದರು.ಈ ಸಮಾರಂಭದಲ್ಲಿ ಡಾ. ಶರಣಬಸವ ಪಾಟೀಲ್ ಜೋಳದ ಹೆಡಗಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವನೆ ರೂಢಿಸಿಕೊಳ್ಳಬೇಕು ಮತ್ತು ನಮ್ಮ ಗ್ರಾಮೀಣ ಹಾಗೂ ದೇಸಿ ಕಲೆಗಳನ್ನು ಉಳಿಸಿಕೊಳ್ಳುವಲ್ಲಿ ವಿದ್ಯಾರ್ಥಿಗಳು ಶ್ರಮ ವಹಿಸಿಕೊಳ್ಳಲು ಕರೆ ನೀಡಿದರು.
ಸೇಡಂನ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಸ್ವರ್ಣ ಜಯಂತಿ, ವಿಕಾಸ ಅಕಾಡೆಮಿ ಕಲಬುರ್ಗಿ ಮತ್ತು ಭಾರತ ವಿಕಾಸ ಸಂಗಮ ಪ್ರಾರಂಭವಾಗಿ ೨೧ ವರ್ಷಗಳಾದ ಹಿನ್ನೆಲೆಯಲ್ಲಿ ೭ನೇ ಭಾರತೀಯ ಸಂಸ್ಕೃತಿ ಉತ್ಸವ ಎಂಬ ಒಂದು ಬೃಹತ್ ಸಮಾವೇಶವನ್ನು ಒಟ್ಟು ೨೪೦ ಎಕರೆ ಪ್ರದೇಶದಲ್ಲಿ ಪ್ರಕೃತಿ ನಗರ,ಬೀರನಹಳ್ಳಿ, ಸೇಡಂ – ಕಲ್ಬುರ್ಗಿ ರಸ್ತೆಯಲ್ಲಿ ಜನವರಿ ೨೯ ರಿಂದ, ಫೆಬ್ರುವರಿ ೬, ೨೦೨೫ ರವರೆಗೆ ಆಯೋಜಿಸಲಾಗುವುದು. ೯ ದಿನಗಳ ಕಾಲ ನಡೆಯುವ ಈ ಉತ್ಸವವು ವಿವಿಧ ಕ್ಷೇತ್ರದಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ತಜ್ಞರನ್ನು , ಪರಿಣಿತರನ್ನು , ಸಂಪನ್ಮೂಲ ವ್ಯಕ್ತಿಗಳನ್ನು ಕಲ್ಯಾಣ ಕರ್ನಾಟಕದ ಶ್ರೀ ಸಾಮಾನ್ಯ ನೀಗಲ್ಲದೆ, ಅಖಿಲ ಕರ್ನಾಟಕ ಮತ್ತು ಅಖಂಡ ಭಾರತದ ಸಮಗ್ರ ಜನ ಸಮುದಾಯಕ್ಕೂ ವೇದಿಕೆಯಲ್ಲಿ ಅತಿಥಿಗಳಾಗಿ ಜೆ ಎಲ್ ಈರಣ್ಣ, ಶಿವಮೂರ್ತಿ ಹಿರೇಮಠ, ಪಿ ಬಸವರಾಜ, ಪ್ರಬಣ್ಣ ಗೌಡ, ಹೆಚ್ ಹೆಚ್ ಮ್ಯಾದರ್, ಸುಭಾಷ್ ಚಂದ್ರ ಪಾಟೀಲ್, ಆರ್ ಮಲ್ಲನಗೌಡ, ಬಸವರಾಜ ಎಲಿ, ಎಂ ಜಿ ಮಾರುತಿ, ಶಿವಕುಮಾರ್, ದಾನಮ್ಮ ಸುಭಾಷ್ ಚಂದ್ರ, ಪ್ರತಿಭಾ ಗೋನಾಳ, ಮಹಾಲಕ್ಷ್ಮಿ, ರಾಜಶೇಖರ್ ಹಿರೇಮಠ್, ನಿರ್ಮಲ ಹಿರೇಮಠ, ರಾಯಚೂರು ತಾಲೂಕಿನ ಸರಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯ ಶಿಕ್ಷಕರು, ನಾಲ್ಕು ನೂರು ವಿದ್ಯಾರ್ಥಿಗಳು, ಉಪನ್ಯಾಸಕರು ಸಿಬ್ಬಂದಿ ವರ್ಗದವರು, ತೀರ್ಪುಗಾರರು ಇನ್ನಿತರರು ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಭೀಮರಾಯ ರಸ್ತಾಪುರ ನಿರ್ವಹಿಸಿದರು. ಹನುಮಂತ ಹೊಸಪೇಟೆ ಸ್ವಾಗತಿಸಿದರು, ರೇಖಾ ಬಡಿಗೇರ್ ವಂದಿಸಿದರು.