ಗಬ್ಬೆದ್ದ ಚರಂಡಿಗಳು,ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು
ಪಾಮನಕಲ್ಲೂರು.ಆ.೧೦-
ರಾಯಚೂರು ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನಪಾಮನಕಲ್ಲೂರು ಗ್ರಾಮದ ವಾರ್ಡ್ ನಂಬರ್ ಒಂದು ಮತ್ತು ಎರಡರಲ್ಲಿನ ಅನೇಕ ಕಡೆಗಳಲ್ಲಿ ಚರಂಡಿಗಳು ಕೊಳಚೆ ನೀರಿನಿಂದ, ಕಸದಿಂದ ತುಂಬಿಗಬ್ಬೆದ್ದು ನಾರುತ್ತಿದ್ದು, ಅಧಿಕಾರಿಗಳು ಮಾತ್ರ ಸರಿಪಡಿಸುವ ಕೆಲಸ ಮಾಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮಕ್ಕೆ ತೆರಳುವ ಮುಖ್ಯ ರಸ್ತೆಯಲ್ಲಿರುವ ಚರಂಡಿ ಪತ್ತಾರ್‌ಮಾನಯ್ಯ (ಕುರುಡಿಯವರ ಜಿನ್ನ) ಮನೆಯ ಹತ್ತಿರ ಕೊಳಚೆನೀರು ಮತ್ತು ಕಸದಿಂದ ತುಂಬಿ ಗಬ್ಬೆದ್ದು ನಾರುತ್ತಿದೆ. ಇನ್ನೂಗ್ರಾಮದ ಎರಡನೇ ವಾರ್ಡನ್ ನಲ್ಲಿ ಬರುವ ಅರಕೇರಿ ಮಲ್ಲಪ್ಪರವರಮನೆಯ ಹತ್ತಿರದ (ನೀರಿನ ಟ್ಯಾಂಕ್ ಹತ್ತಿರ) ಚರಂಡಿ, ಕಟ್ಟಿದುರುಗಮ್ಮ ಮಂದಿರದ ಹತ್ತಿರದ ಚರಂಡಿ ಸೇರಿದಂತೆ ಅನೇಕ ಕಡೆಗಳಲ್ಲಿ ಚರಂಡಿಗಳು ಕೊಳಚೆ ನೀರು ಹಾಗೂ ಕಸದಿಂದ ತುಂಬಿವೆ.
ಒಂದು ಕಡೆ ಸೊಳ್ಳೆಗಳ ಕಾಟ ಹೆಚ್ಚಾಗಿದೆ.ಮತ್ತೊಂದು ಕಡೆ ಚರಂಡಿಯ ಗಬ್ಬು ನಾತ ಕುಡಿಯುವ ಪರಿಸ್ಥಿತಿನಿರ್ಮಾಣವಾಗಿದೆ. ಅಷ್ಟೆ ಅಲ್ಲದೇ ಸಾಂಕ್ರಾಮಿಕ ರೋಗಗಳಿಗೆ ಬಲಿಯಾಗುವಆತಂಕ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಆತಂಕವ್ಯಕ್ತಪಡಿಸುತ್ತಿದ್ದಾರೆ. ಇಲ್ಲಿಯವರೆಗೂ ಪಿಡಿಒರವರು ಚರಂಡಿ ಸ್ವಚ್ಛಗೊಳಿಸುವ ಕೆಲಸಮಾಡಿಲ್ಲ ಎಂದು ಆರೋಪಿಸಿದ್ದಾರೆ.
ಗ್ರಾಮದ ವಾಟ್ಸಾಪ್ ಗ್ರುಪ್ ಗಳಲ್ಲಿ ಕೂಡ ಗ್ರಾಮ ಪಂಚಾಯತಿ ಆಡಳಿತವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದು, ಗ್ರುಪ್ ನಲ್ಲಿರುವ ಗ್ರಾಮ ಪಂಚಾಯತಿ ಸದಸ್ಯರಾಗಲಿ, ಸಂಬಂಧಿಸಿದವರಾಗಲಿ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ತಿಳಿಸಿದ್ದಾರೆ.
ಎಂದು ಗ್ರಾಮ ಪಂಚಾಯತಿ ಆಡಳಿತ ವ್ಯವಸ್ಥೆಯ ವಿರುದ್ಧ ನಾಗು ಪತ್ತಾರ್, ಭಾಗಿರಥಿ ಪತ್ತಾರ್, ಅಂಬಮ್ಮ ಹೊನ್ನಳ್ಳಿ, ಪಾರ್ವತೆಮ್ಮ ಹೊನ್ನಳ್ಳಿ,ರತ್ನಮ್ಮ ಜಿನ್ನದ್, ರೂಪಮ್ಮ ಸಾನಬಾಳ್, ಮಲಕ್ಕಮ್ಮ ಅಂಗಡಿ, ನಾಗೇಶ್ ಅಂಗಡಿ, ಶರಣಪ್ಪ ದಿದ್ದಗಿ, ಗೂಳಪ್ಪ ಕುರುಡಿ ಸೇರಿದಂತೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮೂರಿನಲ್ಲೇ ಗ್ರಾಮ ಪಂಚಾಯತಿ ಇದೆ. ಪಂಚಾಯತಿ ವ್ಯಾಪ್ತಿಯಲ್ಲಿ ಬೆಟ್ಟದಷ್ಟು ಸಮಸ್ಯೆಗಳಿವೆ. ಸಮಸ್ಯೆಗಳನ್ನು ಪರಿಹರಿಸುವಂತೆ ನಾವುಅನೇಕ ಬಾರಿ ಪಿಡಿಒ, ಇಒ, ಸಿಇಒಗಳಿಗೆ ಮನವಿ ಸಲ್ಲಿಸಿದ್ದೇವೆ. ಸಂಬಂಧಿಸಿದವರುಯಾವ ಸಮಸ್ಯೆಗಳಿಗೂ ಶಾಶ್ವತ ಪರಿಹಾರ ನೀಡಿಲ್ಲ ಎಂದು ಕರ್ನಾಟಕ
ರಕ್ಷಣಾ ವೇದಿಕೆಯ (ಪ್ರವೀಣ್ ಶೆಟ್ಟಿ ಬಣ) ಪಾಮನಕಲ್ಲೂರು ಹೋಬಳಿಘಟಕದ ಅಧ್ಯಕ್ಷ ರಮೇಶ್ ಗಂಟ್ಲಿ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ಚೌಡ್ಲಿ ಸೇರಿದಂತೆ ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ.
ಈಗಲಾದರೂ ಸಂಬಂಧಿಸಿದ ಅಧಿಕಾರಿಗಳು ಗ್ರಾಮಸ್ಥರಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡಲಿ. ಜನರು ನೆಮ್ಮದಿಯಿಂದ ಜೀವನ ನಡೆಸುವಂತೆ ಮಾಡಲಿ. ಪದೇಪದೇ ಗ್ರಾಮ ಪಂಚಾಯತಿ ಕಛೇರಿಗೆ ಅಲೆದಾಡುವುದನ್ನು ತಪ್ಪಿಸಲಿ ಎಂದು ಜನತೆ ತಿಳಿಸಿದ್ದಾರೆ,ಆಶಯವಾಗಿದೆ.