ಮಂಗಳಸೂತ್ರ ಕಿತ್ತುಕೊಂಡು ಪರಾರಿಯಾದ ಸರಗಳ್ಳರು
ಕಲಬುರಗಿ,ಆ.10-ಶ್ರಾವಣ ಮಾಸದ ನಿಮಿತ್ಯ ಶರಣಬಸವೇಶ್ವರ ದೇವಸ್ಥಾನಕ್ಕೆ ನಡೆದುಕೊಂಡು ಹೋಗಿ ಮರಳಿ ಮನೆಯ ಕಡೆ ಹೊರಟಿದ್ದ ಮಹಿಳೆಯೊಬ್ಬರ ಮಂಗಳಸೂತ್ರವನ್ನು ಸರಗಳ್ಳರು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಇಂದು ಬೆಳಗಿನ ಜಾವ ನಗರದಲ್ಲಿ ನಡೆದಿದೆ.
ನಗರದ ಕಾಳೆ ಲೇಔಟ್‍ನ ಮಹಿಳೆ ಶ್ರಾವಣ ಮಾಸದ ನಿಮಿತ್ಯ ಇಂದು ಬೆಳಗಿನ ಜಾವ ನಡೆದುಕೊಂಡು ಶರಣಬಸವೇಶ್ವರ ದೇವಸ್ಥಾನಕ್ಕೆ ಹೋಗಿ ಶರಣಬಸವೇಶ್ವರರ ದರ್ಶನ ಪಡೆದು ಮರಳಿ ಮನೆಯ ಕಡೆ ಹೊರಟಿದ್ದರು. ಈ ವೇಳೆ ಬೈಕ್ ಮೇಲೆ ಬಂದ ಇಬ್ಬರು ಸರಗಳ್ಳರು ಮಹಿಳೆ ಕೊರಳಲ್ಲಿನ 8 ಗ್ರಾಂ.ಬಂಗಾರದ ಮಂಗಳಸೂತ್ರ ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಪ್ರಕರಣವಿನ್ನೂ ದಾಖಲಾಗಿಲ್ಲ.