12 ಜ್ಯೋತಿರ್ಲಿಂಗ ದೇವಸ್ಥಾನದಲ್ಲಿ ನಾಗರಪಂಚಮಿ
ಕಲಬುರಗಿ,ಆ 10: ಪ್ರತಿ ವರ್ಷದ ಪದ್ಧತಿ ಹಾಗೆ ಈ ವರ್ಷವೂ ಕೂಡ ಪ್ರಶಾಂತನಗರ ಎ ದಲ್ಲಿರುವ 12 ಜ್ಯೋತಿರ್ಲಿಂಗ ದೇವಸ್ಥಾನದ ಆವರಣದಲ್ಲಿರುವ ನಾಗರಮೂರ್ತಿಗೆ ಹಾಗೂ ಹುತ್ತಿಗೆ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಮಹೇಶ್ವರ ಶಾಸ್ತ್ರಿಗಳಿಂದ ಬೆಳಗ್ಗೆ ಬ್ರಾಹ್ಮಿಮುಹೂರ್ತದಲ್ಲಿ ಜ್ಯೋತಿಲಿರ್ಂಗ ಲಿಂಗಕ್ಕೆ ರುದ್ರಾಭಿಷೇಕ ಪೂಜೆ ಜರುಗಿತು.ನಂತರ ನಾಗರಮೂರ್ತಿಗೆ ಕ್ಷೀರಾಭಿಷೇಕ ಹಾಗೂ ಅಲಂಕಾರ ಪೂಜೆ ನೆರವೇರಿಸಲಾಯಿತು
ನಂತರ ಬಡಾವಣೆಯ ಮಹಿಳೆಯರು ಹಾಗೂ ಮಕ್ಕಳಿಂದ ನಾಗರಮೂರ್ತಿಗೆ ಹಾಲೇರಿದು ಸಹಸ್ರಾರು ಮಹಿಳೆಯರು ಹಾಗೂ ದೇವಸ್ಥಾನದ ಟ್ರಸ್ಟ್ ಕಮಿಟಿ ಯವರು ಬಡಾವಣೆಯ ಎಲ್ಲ ಮುಖಂಡರು ಸೇರಿ ಹಬ್ಬವನ್ನು ಆಚರಿಸಿದರು.