ಲೋಕಾಯುಕ್ತ ನ್ಯಾಯಮೂರ್ತಿಗಳಿಂದ ವಿವಿಧ ಕಾಮಗಾರಿಗಳ ವಿಕ್ಷಣೆ
ತಾಳಿಕೋಟೆ:ಆ.10: ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಬಿ.ಎಸ್.ಪಾಟೀಲ(ಪಡೇಕನೂರ) ಅವರು ಶುಕ್ರವಾರರಂದು ಮಡಿಕೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೆಟ್ಟಿ ನೀಡಿ ಆಸ್ಪತ್ರೆಯ ಕಾರ್ಯವೈಖರ್ಯಗಳ ಬಗ್ಗೆ ಪರಿಶೀಲನೆ ನಡೆಸಿದರಲ್ಲದೇ ನಂತರ ಪಡೇಕನೂರ ಕೇರೆಗೆ ನೀರು ಬಿಡುವ ಕಾಲುವೆ ಕೂಡಿಸಲಾದ ಗೇಟ್‍ನ್ನು ಪರಿಶೀಲನೆ ನಡೆಸಿದರು.
ಮಡಿಕೇಶ್ವರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೆಟ್ಟಿ ನೀಡಿದ ಲೋ.ನ್ಯಾ.ಬಿ.ಎಸ್.ಪಾಟೀಲ(ಪಡೇಕನೂರ) ಅವರು ತಾಲೂಕಾ ಆಡಳಿತ ವೈಧ್ಯಾಧಿಕಾರಿ ಡಾ.ಸತೀಶ ತಿವಾರಿ ಅವರಿಂದ ಆಸ್ಪತ್ರೆಯಲ್ಲಿ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ಪಡೆದುಕೊಂಡರಲ್ಲದೇ ಸುತ್ತಲಿನ ಗ್ರಾಮಗಳಿಂದ ಮಡಿಕೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರ ಒಳ್ಳೆಯ ಸೇವೆಯನ್ನು ನೀಡಬೇಕು ಈ ನಿಟ್ಟಿನಲ್ಲಿ ವೈಧ್ಯರು ಸಿಬ್ಬಂದಿಗಳು ಕಾರ್ಯನಿರ್ವಹಿಸಬೇಕು ಆಸ್ಪತ್ರೆಯಲ್ಲಿ ಸ್ವಚ್ಚತೆಗೆ ಮೊದಲು ಆಧ್ಯತೆ ನೀಡಿ ಎಂದ ಅವರು ರೋಗಿಗಳಿಗೆ ಒಳ್ಳೆಯ ಸೇವೆ ಒದಗಿಸುವ ಕಡೆಗೆ ಎಲ್ಲರೂ ಮುಂದಾಗುವಂತೆ ನೋಡಿಕೊಳ್ಳಿ ಯಾವುದೇ ಮೂನ್ಸೂಚನೆ ನೀಡದೇ ಜಿಲ್ಲೆಯ ಎಲ್ಲ ಆರೋಗ್ಯ ಕೇಂದ್ರಗಳಿಗೆ ವಿಜಿಟ್ ಮಾಡಲು ಡಿಎಚ್‍ಓ ಅವರಿಗೆ ಸೂಚಿಸಿದ್ದೇನೆ ಏನೇ ಲೋಪ ಕಂಡುಬಂದರೂ ನಿರ್ಧಾರಕ್ಷೀಣ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ ನಾನು ಕೂಡಾ ಯಾವ ಸಮಯದಲ್ಲಿ ಯಾವ ಆರೋಗ್ಯ ಕೇಂದ್ರಕ್ಕೆ ಬೆಟ್ಟಿ ನೀಡುತ್ತೇನೆ ಗೊತ್ತಿಲ್ಲಾ ಅಷ್ಟೊರಳಗೆ ಎಲ್ಲ ಆರೋಗ್ಯ ಕೇಂದ್ರಗಳು ಸುದಾರಿಸುವಂತಹ ಕೆಲಸ ಮಾಡಲು ಅಧಿಕಾರಿ ಡಾ.ಸತೀಶ ತಿವಾರಿ ಅವರಿಗೆ ಸೂಚಿಸಿದರು.
ನಂತರ ಪಡೇಕನೂರ ಗ್ರಾಮದ ಕೇರೆಗೆ ಕಾಲುವೆಯಿಂದ ನೀರು ಸಂಪರ್ಕ ಕಲ್ಪಿಸುವ ಕಾಲೇವೆಗೆ ಅಳವಡಿಸಲಾದ ಗೇಟ್ ಕಾಮಗಾರಿಯನ್ನು ವಿಕ್ಷಣೆ ಮಾಡಿದ ಲೋಕಾಯುಕ್ತ ನ್ಯಾಯಮೂರ್ತಿ ಪಾಟೀಲರು ಕೆಬಿಜೆಎನ್‍ಎಲ್ ಮುಖ್ಯ ಇಂಜನಿಯರ್ ಶ್ರೀನಿವಾಸ ಅವರಿಂದ ಮಾಹಿತಿ ಪಡೆದರಲ್ಲದೇ ಪಡೇಕನೂರಿಂದ ಡವಳಗಿ ಒಳಗೊಂಡು ಕೆಲವು ಗ್ರಾಮಗಳಿಗೆ ರಸ್ತೆನಿರ್ಮಿಸುವ ಕುರಿತು ಸೂಚಿಸಿದರಲ್ಲದೇ ನಂತರ ಪಡೇಕನೂರ ಗ್ರಾಮದ ಕಲುಷಿತ ನೀರು ಕೇರೆಗೆ ಸೇಕರಣೆಗೊಳ್ಳದ ಹಾಗೆ ಪಡೇಕನೂರ ಗ್ರಾಮದ ಚರಂಡಿ ನೀರು ಕೆರೆಗೆ ಹೊಗದಂತೆ ತಡೆಯಲು ಬೂದು ನೀರು ನಿರ್ವಹಣಾ ಘಟಕದ ವಿಸ್ತೃತ ಯೋಜನಾ ವರದಿಯ ಮಾಹಿತಿಯನ್ನು ಪಡೆದು ಬೂದು ನೀರು ನೇರವಾಗಿ ಕೆರೆಗ ಸೇರದಂತೆ ಕಾಮಗಾರಿ ಕೈಗೊಳ್ಳಲು ಸೂಚಿಸಿದರಲ್ಲದೇ ಡ್ರೇನ್ ನಿರ್ಮಿಸಿ ಕಲುಷಿತವೆಲ್ಲವೂ ಇಲ್ಲಿಯೇ ಉಳಿಯಬೇಕು ನೀರು ಮಾತ್ರ ಹೋಗಬೇಕು ಮತ್ತು ಗ್ರಾಮದಲ್ಲಿ ನೀರಿನ ತೊಟ್ಟೆ ನಿರ್ಮಿಸಿ ದನಕರುಗಳಿಗೆ ಅನುಕೂಲವಾಗುವಂತೆ ಮಾಡಿ ಧೋಬಿ ಘಾಟ ನಿರ್ಮಿಸಿ ಬಟ್ಟಿ ಬರೆ ತೊಳೆಯಲು ಅನುಕೂಲ ಮಾಡಿಕೊಡಿ ಎಂದ ಅವರು ಗ್ರಾಮದ ಸ್ವಚ್ಛತೆ ಮತ್ತು ನೈರ್ಮಲ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ವ್ಯಯಕ್ತಿಕ ಮತ್ತು ಸಮುದಯ ಶೌಚಾಲಯ ಬಳಸಲು ಜನರಿಗೆ ತಿಳಿ ಹೇಳಿ ಬಯಲು ಮಲವಿಸರ್ಜನೆ ಮಾಡುವದನ್ನು ತಡಯಬೇಕು ಎಂದು ಜಿಪಂ ಉಪ ಕಾರ್ಯದರ್ಶಿ ವಿಜಯಕುಮಾರ ಅಜೂರ ಅವರಿಗೆ ತಾ.ಪಂ ಇಓ ವೆಂಕಟೇಶ ವಂದಾಲ ಅವರಿಗೆ ಮತ್ತು ಪಿಡಿಓ ಶ್ರೀಮತಿ ಸಾವಿತ್ರಿ ಬಿರಾದಾರ ರವರಿಗೆ ಸೂಚಿಸಿದರು.ಸಣ್ಣ ನೀರವಾರಿ ಇಲಾಖಾ ಅಧಿಕಾರಿಗಳಿಗೆ ಕೆರೆಯ ನಿರ್ವಹಣೆ ಮತ್ತು ನೀರು ಸರಬರಾಜು ಮಾಡಲು ಆದ್ಯತೆ ಮೇರೆಗೆ ಕೆಲಸ ನಿರ್ವಹಿಸಲು ಸೂಚಿಸಿದರು.
ನನ್ನೂರಿನ ಜನ ಸ್ವಚ್ಚತೆಗೆ ಆದ್ಯತೆ ನೀಡಿ
ನನ್ನ ಹುಟ್ಟೂರಿನ ಪಡೇಕನೂರ ಗ್ರಾಮದ ಜನರು ಸ್ವಚ್ಚತೆ ಆದ್ಯತೆ ನೀಡಲು ಮುಂದಾಗಬೇಕು ಕೇರೆಯ ಕಡೆಗೆ ಹರಿದು ಹೋಗುವ ನೀರನ್ನು ಕಲುಷಿತಗೊಳಿಸುವಂತಹ ಕಾರ್ಯ ಮಾಡಬಾರದು ಯಾಕೆಂದರೆ ಕಲುಷಿತ ನೀರು ಕೆರೆ ಮತ್ತು ಭಾವಿಯಲ್ಲಿ ಸೇರಿದರೆ ಡೆಂಗ್ಯೂ ಇನ್ನಿತರ ರೋಗಗಳು ಬರುತ್ತವೆ ಆ ಸಮಯದಲ್ಲಿ ನರಳಾಡುವದು ಬೇಡ ಸ್ವಚ್ಚತೆಗೆ ಮಹತ್ವ ನೀಡಿ ಕೆರೆಯಲ್ಲಿ ಈಜಾಡಲು ಹೋಗಲು ಮಕ್ಕಳು ಹೋಗದಂತೆ ತಿಳುವಳಿಕೆ ನೀಡಿ ಮನೆ ಮನೆಗೆ ಶೌಚಾಲಯಗಳಿವೆ ಆದರೂ ಹೊರಗಡೆ ಬಹಿರ್ದೆಸೆಗೆ ಹೋಗುವದ ಅಬ್ಯಾಸವಾಗಿದೆ ಅದನ್ನು ತಪ್ಪಿಸಿ ಎಲ್ಲರೂ ಶೌಚಾಲಯಗಳನ್ನು ಉಪಯೋಗಿಸಬೇಕು ಇದರಿಂದ ಗ್ರಾಮದಲ್ಲಿ ಯಾರಿಗೂ ರೋಗ ರುಜುಗಳು ಬರುವದಿಲ್ಲಾ ಅರ್ದದಷ್ಟು ಜನರು ದುಡಿದ ಹಣದಲ್ಲಿ ಅರ್ದದಷ್ಟು ಆಸ್ಪತ್ರೆಗೆ ಇಡುತ್ತಾರೆ ಅದನ್ನು ತಪ್ಪಿಸಿ ಮೊದಲು ಮನೆಯ ಮುಂದೆ ಸ್ವಚ್ಚತೆ ಕಾಪಾಡಿ ನಂತರ ಊರನ್ನು ಸ್ವಚ್ಚವಾಗಿ ಇಡುವದರ ಕಡೆಗೆ ಗಮನಕೊಡಿ ಇದರಿಂದ ಸುಂದರ ಗ್ರಾಮವಾಗಲು ಸಾದ್ಯವಾಗಲಿದೆ ಎಂದರು.
ನಂತರ ಪಡೇಕನೂರ ಗ್ರಾಮದಲ್ಲಿ ಪಿ.ಆರ್.ಇ.ಡಿ ಇಲಾಖೆಯಡಿ ನಿರ್ಮಾಣವಾದ ಅಂಗನವಾಡಿ ಕಟ್ಟಡವನ್ನು ವಿಕ್ಷೀಸಿ ಪರಿಶೀಲಸಿ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೇ ಚಿಕ್ಕ ಮಕ್ಕಳಿಗೆ ಚಿತ್ರಗಳ ಮೂಲಕವೇ ಶಿಕ್ಷಣದ ಹೆಜ್ಜೆ ಪ್ರಾರಂಬಿಸಲು ಮುಂದಾಗಿರುವ ಕುರಿತು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ವಿಜಯಪುರ ಲೋಕಾಯುಕ್ತ ಅಧಿಕ್ಷಕ ಟಿ.ಮಲ್ಲೇಶ್, ಡಿವಾಯ್‍ಎಸ್‍ಪಿ ಸುರೇಶ ರೆಡ್ಡಿ, ಕೆಬಿಜೆಎನ್‍ಎಲ್ ಸಹಾಯಕ ಇಂಜನಿಯರ್ ವಿಶ್ವನಾಥ ಬಿರಾದಾರ, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ವಿಜಯಕುಮಾರ ಅಜೂರ, ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ಸಿ.ಬಿ.ದೇವರಮನಿ, ಪಿ.ಆರ್.ಡಿ.ಎ ಇಲಾಖೆಯ ಡಬ್ಲ್ಯೂ.ಇ. ನಬಿಲಾಲ್, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ ವಂದಾಲ, ತಾ.ಪಂ ಪಂಚಾಯತ ರಾಜ್ ಸಹಾಯಕ ನಿರ್ದೇಶಕ ಬಿ.ಎಮ್.ಸಾಗರ, ಪಿಡಿಓ ಶ್ರೀಮತಿ ಸಾವಿತ್ರಿ ಬಿರಾದಾರ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಮತ್ತು ತಾಲೂಕಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.