ಕೋಡ್ಲಿ: ವೈನ್ಸ್, ರೈತ ಸೇವಾ ಸಹಕಾರ ಸಂಘಕ್ಕೆ ಕನ್ನ
ಕಾಳಗಿ :ಆ.10:ತಾಲೂಕಿನ ಕೋಡ್ಲಿ ಗ್ರಾಮದ ವೈನ್ಸ್ ಹಾಗೂ ರೈತ ಸೇವಾ ಸಹಕಾರ ಸಂಘಕ್ಕೆ ಶುಕ್ರವಾರ ರಾತ್ರಿ 1.40ಕ್ಕೆ ಕನ್ನಹಾಕಿದ ಕಳ್ಳರು, ಹಣ, ವೈನ್ಸ್ ಬ್ಯಾಟಲ್ ಗಳು ಸೇರಿ ಇತರೆ ವಸ್ತುಗಳನ್ನು ದೋಚಿಕೊಂಡು ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ.
ಸುದ್ದಿ ತಿಳಿಯುತ್ತಿದ್ದಂತೆ ಶುಕ್ರವಾರ ಬೆಳಿಗ್ಗೆ ಘಟನಾ ಸ್ಥಳಗಳಿಗೆ ಆಗಮಿಸಿರುವ ಸುಲೆಪೇಟ ಸಿಪಿಐ ರಾಘವೇಂದ್ರ, ರಟಕಲ್ ಪಿಎಸ್‍ಐ ಗಂಗಾ ಎಸ್.ಭದ್ರಾಪೂರ ನೇತೃತ್ವದ ಪೆÇೀಲಿಸ್ ತಂಡ ಹಾಗೂ ಸ್ವಾನದಳ, ಬೆರಳಚ್ಚುಗಾರರು ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
“ಪ್ರಾಣಾಪಾಯದಿಂದ ಪಾರಾದ ಪತ್ರಕರ್ತ”
ಕಳೆದ ತಿಂಗಳು ಕಲಬುರಗಿ ತನ್ನ ಕಾರ್ಯಾಲಯದ ಕೆಲಸ ಮುಗಿಸಿಕೊಂಡು ಬೈಕ್ ನಲ್ಲಿ ಬರುತ್ತಿದ್ದ ಪತ್ರಕರ್ತರೊಬ್ಬರಿಗೆ ರಾತ್ರಿ 9-45ಕ್ಕೆ ಕೊಡ್ಲಿ ನಂತರದ ಎರಡು ಕಿ.ಮೀ. ದೂರದ ಮಾರ್ಗ ಮಧ್ಯೆ ಅಪರಿಚಿತರಿಬ್ಬರು, ಮುಖಕ್ಕೆ ಕಪ್ಪು ಮುಖವಾಡ ಧರಿಸಿ, ಕೈಯಲ್ಲಿ ಮಚ್ಚು ಹಿಡಿದುಕೊಂಡು, ಬೆದರಿಸಿ ಮೊಬೈಲ್ ಹಾಗೂ ನಗದು 1,800/-. ರೂಪಾಯಿಗಳು ತೆಗೆದುಕೊಂಡು ಪರಾರಿಯಾಗಿದ್ದಾರೆ.
ಆ ಇಬ್ಬರ ಕೈಯಲ್ಲಿದ್ದ ಮಚ್ಚುಗಳು ನನ್ನ ಎರಡು ಕೈಗಳಿಂದ ಜೋರಾಗಿ ಹಿಡಿದುಕೊಂಡಿದ್ದೆ. ಅಷ್ಟರಲ್ಲಿಯೇ ಎದುರಿಗೆ ಕಾರು ಬಂದಿರುವುದರಿಂದ ನಾನು ಪ್ರಾಣಾಪಾಯದಿಂದ ಪಾರಾದೆ ಎಂದು ಪತ್ರಕರ್ತ ತಿಳಿಸಿದ್ದಾರೆ.
ಈ ಪ್ರಕರಣ ದಿನಾಂಕ:19-07-2024ರಂದು ರಟಕಲ್ ಪೆÇೀಲಿಸ್ ಠಾಣೆಯಲ್ಲಿ ದಾಖಲಾಗಿದ್ದು, ಪೆÇೀಲಿಸರು ಬಲೆ ಬೀಸಿ ಓರ್ವ ವ್ಯಕ್ತಿಯನ್ನು ಬಂದಿಸಲಾಸಿದ್ದಾರೆ. ಮತ್ತೊಬ್ಬ ವ್ಯಕ್ತಿ ಶೋಧಕಾರ್ಯ ನಡೆಯುತ್ತಿದ್ದ ಬೆನ್ನಲ್ಲೆ ವೈನ್ಸ್ ಹಾಗೂ ರೈತ ಸೇವಾ ಸಹಕಾರ ಸಂಘಕ್ಕೆ ಕನ್ನ ಬಿದ್ದಿರುವುದು ಜನಸಾಮಾನ್ಯರಲ್ಲಿ ನಡುಕ ಹುಟ್ಟಿಸಿದೆ.
ಎರಡು ತಿಂಗಳ ಹಿಂದೆ ಕಾಳಗಿ ರೌದ್ರಾವತಿ ನದಿ ದಡದ ಮೇಲೆ ಹಗಲಿನಲ್ಲೇ ವ್ಯಕ್ತಿ ಕೈಯಲ್ಲಿದ್ದ ಬಂಗಾರ ದೋಚಿಕೊಂಡು ಹೋಗಿದ್ದಾರೆ.
ಕಾರಣ ಪೆÇೀಲಿಸ್ ಇಲಾಖೆಯು ಹೆಚ್ಚಿನ ನಿಗಾ ವಹಿಸಿ, ರಾತ್ರಿ ಬೀಟ್ ಚೆನ್ನಾಗಿ ಪಾಲಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಮನೆ ಮನೆಗಳಲ್ಲಿ ಮದ್ಯಮಾರಾಟ ಮಹಿಳೆಯರ ಪರದಾಟ:
ತಾಲೂಕಿನ ಕೆಲವು ಗ್ರಾಮಗಳು ಹಾಗೂ ಕಾಳಗಿ ಪಟ್ಟಣದಲ್ಲಿ ರಾಜಾರೋಷವಾಗಿ ಸರಾಯಿ ಸಾಗಾಟ ಮಾಡುತ್ತಿದ್ದು, ಅನೇಕ ಬಡ ಕುಟುಂಬಗಳು ಬೀದಿಗೆ ಬಂದ ಉದಾಹರಣೆಗಳು ಹೆಚ್ಚಾಗಿವೆ.
ವಿವಿಧ ಅಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದು, ಪೆÇೀಲಿಸ ಅಂಜಿಕೆಯಿಂದ ಮನೆ ಮನೆಗಳಲ್ಲಿಯೇ ಮಾರಾಟ ಶುರುಮಾಡಿದ್ದಾರೆ.
ಕುಡಿತದಿಂದ ಸಂಪೂರ್ಣ ಹಾಳಾಗುತ್ತಿದ್ದ ಬಡತನರೇಖೆಗಳಿಗಿಂತ ಕೆಳಗಿರುವ ಕುಟುಂಬಗಳ ಹೆಣ್ಣು ಮಕ್ಕಳು, ತಮ್ಮ ಗಂಡಂದಿರ ಆರೋಗ್ಯ ಸ್ಥಿತಿಯನ್ನು ಕಂಡು ನೊಂದಿಕೊಳ್ಳುತ್ತಿದ್ದಾರೆ.
ಗಂಡನ ಕಿರುಕುಳದಿಂದ ಬಿಪಿಎಲ್ ಕಾರ್ಡ್ ರದ್ದು ಪಡಿಸಿದ ಬಡ ಮಹಿಳೆ:
ಗಂಡನ ಕುಡಿತದಿಂದ ಕಿರುಕುಳ ತಾಳದ ಬಡ ಮಹಿಳೆಯೊಬ್ಬಳು, ತಮ್ಮ ಬಿಪಿಎಲ್ ಕಾರ್ಡ್ ರದ್ದುಪಡಿಸಿ ಕೊಂಡಿದ್ದಾಳೆ.
ಪ್ರತಿ ತಿಂಗಳು ಬರುವ 2,000/-. ಕುಡಿತಕ್ಕೆ ನೀಡದಿದ್ದರೆ ಹೇಳಲಾರದಷ್ಷು ಕಷ್ಟ ಅನುಭವಿಸಬೇಕು. ಕಾರಣ ನೊಂದುಕೊಂಡು ಬಂದಾಗಿರುವ ಬಿಪಿಎಲ್ ಕಾರ್ಡ್ ಪ್ರಾರಂಬಿಸಿಕೊಳ್ಳುವುದಕ್ಕೂ ಭಯವಾಗುತ್ತಿದೆ ಎಂದು ಹೆಸರು ಹೇಳಲು ಇಚ್ಛಿಸದ ಮಹಿಳೆಯೊಬ್ಬಳು ತಮ್ಮ ಕಷ್ಟವನ್ನು ತೋಡಿಕೊಂಡಿದ್ದಾರೆ.
ಕಳ್ಳರ ಹಾವಳಿಗೆ ಜನ ತತ್ತರ:ಕಳೆದ 15ದಿನಗಳ ಹಿಂದಷ್ಟೇ ರಟಕಲ್, ಚೆಂಗಟಾ ಗ್ರಾಮಗಳ ರೈತರ ಮನೆಗಯಲ್ಲಿ ಕಟ್ಟಿರುವ ಗೋವುಗಳು ಕಳುವಾಗಿದ್ದು, ಕೋಡ್ಲಿಯ ಒಡಿ ಮನುಮಾನ ದೇವಸ್ಥಾನ ನುಗ್ಗಿ ಹುಂಡಿಯಲ್ಲಿರುವ ಹಣ ಇತರೆ ಪೂಜಾ ಸಾಮಗ್ರಿಗಳು ದೋಚಿಕೊಂಡು ಹೋಗಿರುವ ಪ್ರಕರಣಗಳು ದಾಖಲಾಗಿದ್ದರೂ ಸಹ ಇನ್ನೂ ಪತ್ತೆಯಾಗಿಲ್ಲ.
-ಶಂಕರ ಚೋಕಾ ರಟಕಲ್ ತಾಲೂಕಾಧ್ಯಕ್ಷರು ಹಿಂದೂ ಜಾಗೃತಿ ಸೇನೆ ಕಾಳಗಿ