ಭಾರತೀಯ ಸಂಸ್ಕøತಿಯ ಪ್ರತೀಕವೇ ಜಾನಪದ: ಡಾ. ಐ.ಜೆ. ಮ್ಯಾಗೇರಿ
ವಿಜಯಪುರ,ಆ.10:ಜಾನಪದ ಸಾಹಿತ್ಯ ಜೀವನದ ಮೌಲ್ಯಗಳನ್ನು ಸಾರುವ ಸಂದೇಶಗಳಾಗಿವೆ, ಜಾನಪದ ಮರೆತರೆ ಮಾನವೀಯತೆ ಹಾಗೂ ನೈತಿಕತೆ ಮರೆತಂತೆ. ಪಠ್ಯಕ್ರಮದಲ್ಲಿ ಜಾನಪದ ಸಾಹಿತ್ಯಕ್ಕೆ ಇಂದು ಮಹತ್ವ ನೀಡಬೇಕಾಗಿದೆ. ಇಪ್ಪತ್ತೊಂದನೇ ಶತಮಾನದ ಮಕ್ಕಳಿಗೆ ಜಾನಪದದ ಅರಿವು ಮೂಡಿಸಬೇಕಿದೆ. ಭಾರತೀಯ ಸಂಸ್ಕøತಿಯ ಪ್ರತೀಕವೇ ಜಾನಪದ ಎಂದು ಕೇಂದ್ರ ಕಾರಾಗ್ರೃಹದ ಅಧೀಕ್ಷಕ ಡಾ. ಐ.ಜೆ. ಮ್ಯಾಗೇರಿ ಅಭಿಪ್ರಾಯ ವ್ಯಕ್ತಪಡಿಸಿದರು.
ಶುಕ್ರವಾರ ಕೇಂದ್ರ ಕಾರಾಗೃಹದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕೇಂದ್ರ ಕಾರಾಗೃಹ ಇಲಾಖೆ ಸಹಯೋಗದಲ್ಲಿ ಜಾನಪದ ಚಿಂತನ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಕವಿಗೋಷ್ಠಿ ಕಾರಾಗೃಹದಲ್ಲಿರುವ ಬಂಧಿಗಳಿಗೆ ಮನ:ಪರಿವರ್ತನೆಗೆ ದಾರಿದೀಪವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕ್ರಿಯಾಶೀಲವಾಗಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವದು ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಮಾತನಾಡಿ, ಜಾನಪದ ಭಾರತೀಯ ಸಂಸ್ಕೃತಿಯ ತಾಯಿಬೇರು. ಗ್ರಾಮೀಣರ ಜೀವನ ಜಾನಪದ ಮೌಲ್ಯಗಳಿಂದ ಕೂಡಿದೆ. ಕಾಯಕದ ಜೊತೆಗೆ ಜನಪದ ಸಾಹಿತ್ಯ ಉಳಿಸಿ ಬೆಳೆÀಸಿದ ಕೀರ್ತಿ ಜನಪದರಿಗೆ ಸಲ್ಲುತ್ತದೆ ಎಂದರು.
ಡಾ. ಸಂಗಮೇಶ ಮೇತ್ರಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಜನಪದ ಸಾಹಿತ್ಯ ಹುಟ್ಟಿನಿಂದ ಸಾಯುತನಕ ಬೆಳೆಯುತ್ತ ಹೋಗುತ್ತದೆ, ಇದು ಮುಂದಿನ ತೆಲೆಮಾರಿಗೆ ಸಾಗಿಸುವ ಜವಾಬ್ದಾರಿ ನಮ್ಮೆಲ್ಲರ ಕರ್ತವ್ಯವಾಗಿದೆ. ಜನಪದ ಸಾಹಿತ್ಯಕ್ಕೆ ಎಲ್ಲರನ್ನೂ ಮನ:ಪರಿವರ್ತನೆ ಮಾಡುವ ತಾಕತ್ತು ಇದೆ ಎಂದರು.
ಉಪನ್ಯಾಸಕರಾಗಿ ಶಿವಾನಂದ ಮಂಗಾನವರ ರೈತ ಗೀತಗಳನ್ನು ಹಾಡಿ ಸಭೆಯನ್ನು ರಂಜಿಸಿದರು. ಸಾಹಿತ್ಯಿ ಶಿವಲೀಲಾ ಮುರಾಳ ಗರತಿಯ ಹಾಡುಗಳು ಹಾಡುತ್ತ ನಾಗರ ಪಂಚಮಿಯ ಮಹತ್ವ ಸಾರಿದರು. ಗರತಿ ತನ್ನ ಒತ್ತಡಗಳ ಮಧ್ಯಯೂ ಕುಟುಂಬದ ಬೆನ್ನೆಲುಬಾಗಿ ನಿಂತು ಜನಪದ ಗೀತೆಗಳು ಹಾಡುವದರ ಮೂಲಕ ಜನಪದ ಸಾಹಿತ್ಯ ಉಳಿಸಿದ ಕೀರ್ತಿ ಗರತಿಗೆ ಸಲ್ಲುತ್ತದೆ ಎಂದರು.
ಶಿಕ್ಷಕ ಮೆಹತಾಬ್ ಕಾಗವಾಡ ಮಾತನಾಡಿ, ಗ್ರಾಮೀಣರ ಬದುಕು ನಿಂತಿರುವದು ಜನಪದ ಸಾಹಿತ್ಯದ ಮೇಲೆ, ಇದು ಮುಗ್ಧ ಜನರ ಪರಿವರ್ತನೆ ಮಾಡಲು ಬಹಳ ಸಹಕಾರಿಯಾಗುತ್ತದೆ. ಪುರಂದರದಾಸರ ಹಾಗೂ ಕಡಕೋಳ ಮಡಿವಾಳಪ್ಪನವರ ತತ್ವ ಪದಗಳು ಹಾಡುವದರ ಮೂಲಕ ಸಭೆಯನ್ನು ಮಂತ್ರಮುಗ್ಧರನ್ನಾಗಿ ಮಾಡಿದರು. ವೇದಿಕೆ ಮೇಲೆ ಅನಿಲ ಕೋರಬು ಉಪಸ್ಥಿತರಿದ್ದರು.
ಸಂತೋಷ ಸಂತಾಗೋಳ ಸ್ವಾಗತಿಸಿದರು. ಶಕೀಲಾ ನದಾಫ್ ನಿರೂಪಿಸಿದರು. ಮೌನೇಶ ಮಾದರ ವಂದಿಸಿದರು.
ಕಾರ್ಯಕ್ರಮದಲ್ಲಿ ಅಧಿಕಾರಿಗಳಾದ ಕೆ.ಎಂ. ಚೌಧರಿ, ಎಸ್.ಎಸ್. ಪೂಜಾರಿ, ಎಸ್.ಎಸ್. ಕೋರವಾರ, ಈರಯ್ಯ ಹಿರೇಮಠ, ಗೋಪಾಲಕೃಷ್ಣ ಕುಲಕರ್ಣಿ, ಎ.ಕೆ. ಅನ್ಸಾರಿ, ಸವಿತಾ ಬೆಳ್ಳುಂಡಗಿ, ಶಿಕ್ಷಕ ದೀಕ್ಷಿತ ಮುಂತಾದವರು ಉಪಸ್ಥಿತರಿದ್ದರು.