ತಾಳಿಕೋಟೆಯಲ್ಲಿ ನಾಗದೇವತೆಗಳಿಗೆ ಮಹಾಪೂಜೆ
ತಾಳಿಕೋಟೆ:ಆ.10: ನಾಡಿಗೆ ದೊಡ್ಡ ಹಬ್ಬವೆಂದೇ ಹೆಗ್ಗಳಿಕೆಗೆ ಪಾತ್ರವಾದ ನಾಗರ ಪಂಚಮಿದಿನವಾದ ಗುರುವಾರ ಹಾಗೂ ಶುಕ್ರವಾರರಂದು ಪಟ್ಟಣದ ವಿವಿಧ ಬಡಾವಣೆಗಳಲ್ಲಿ ನಾಗದೇವತೆಗಳ ಮಹಾ ಮೂರ್ತಿಗಳಿಗೆ ಹಾಲೆರೆಯುವ ಮೂಲಕ ಸುಮಂಗಲೆಯರು ಭಕ್ತಿಭಾವ ಮೆರೆದರು.
ಗುರುವಾರ ಕೆಂಪು ಹಾಲು ಏರೆಯುವ ಮೂಲಕ ಮಹಾ ಪೂಜೆ ಗೈದಿದ್ದಲ್ಲದೇ ಶುಕ್ರವಾರ ನಾಗದೇವತೆಗಳಿಗೆ ಬಿಳಿ ಹಾಲು ಎರೆದು ಭಕ್ತಿಭಾವ ಮೆರೆದು ತಮ್ಮ ಬೇಕು ಬೇಡಿಕೆಗಳನ್ನು ಅಪೇಕ್ಷೀಸಿದರು.
ಪ್ರತಿವರ್ಷ ಶ್ರಾವಣಮಾಸದ ಶುಕ್ಲ ಪಕ್ಷ 5 ದಿನದಂದು ಆಚರಿಸಲು ಪಡುವ ಈ ಹಬ್ಬಕ್ಕೆ ತನ್ನದೇ ಆದ ವೈಶಿಷ್ಠ್ಯವಿದ್ದು ಈ ದಿನದಂದು ಪಟ್ಟಣದಲ್ಲಿ ಜನರು ಭಕ್ತಿ ಶ್ರದ್ದೆಯಿಂದ ನಾಗರಕಲ್ಲ ಬಡಾವಣೆ ಭೀಮನಭಾವಿ, ಹಾಗೂ ರಾಜವಾಡೆಯಲ್ಲಿಯ ನಾಗಪ್ಪನಕಟ್ಟಿ, ನಗರೇಶ್ವರ ದೇವಸ್ಥಾನ ಬಡಾವಣೆ ಒಳಗೊಂಡು ವಿವಿಧ ಬಡಾವಣೆಗಳಲ್ಲಿ ಇರತಕ್ಕಂತಹ ನಾಗದೇವತೆಯ ಮೂರ್ತಿಗಳಿಗೆ ಪೂಜೆಯನ್ನು ಮಹಿಳೆಯರು ಗೈದು ಭಕ್ತಿಭಾವ ಮೆರೆದರು.
ನಾಗ ಪಂಚಮಿಯದಿನದಂದು ನಾಗದೇವತೆಯನ್ನು ಪೂಜಿಸುವದರಿಂದ ಸರ್ಪದೋಷದಿಂದ ಮುಕ್ತಿ ದೊರೆಯುತ್ತದೆ ಎಂಬ ನಂಬಿಕೆಯಾಗಿದ್ದು ಒಂದೊಂದು ಕಡೆಗಳಲ್ಲಿ ನಾಗಪಂಚಮಿಯ ದೇವರ ನೈವಿದ್ಯ ಒಂದೊಂದು ಬಗೆಯ ಸಿಹಿ ತಿನಿಸುಗಳನ್ನು ಮಾಡಿ ಆಯಾ ಬಡಾವಣೆಯ ಮಹಿಳೆಯರು ಅರ್ಪಣೆ ಮಾಡಿ ಭಕ್ತಿಭಾವ ಮೆರೆದರು.
ನಾಗರ ಪಂಚಮಿಯ ದಿನ ಹೆಣ್ಣು ಮಕ್ಕಳು ತಮ್ಮ ಸಹೋದರನ ಒಳಿತಿಗಾಗಿ ಹುತ್ತುಗಳಿಗೆ ಹಾಲೆರೆದು ಪೂಜಿಸುವ ಕಾರ್ಯ ಆಯಾ ಹಿಂದಿನಿಂದ ಬಂದ ಸಾಂಪ್ರದಾಯದಂತೆ ಹಬ್ಬ ಆಚರಣೆ ಮಾಡಲಾಯಿತಲ್ಲದೇ ಈ ಹಬ್ಬ ಕುರಿತು ನಾಡಿನ ಸಮಸ್ತ ಜನತೆಗೆ ನಾಗರ ಪಂಚಮಿಯ ಹಬ್ಬದ ಶುಭಾಶಯಗಳನ್ನು ಸಹ ಕೆಲವು ಯುವ ಜನತೆ ಕೋರಿದರಲ್ಲದೇ ಇದ್ದ ಎಲ್ಲ ಸಮಸ್ಯೆಗಳು ದೂರಾಗಲಿ ಎಲ್ಲರ ಜೀವನದಲ್ಲಿ ಸುಖಃ, ಶಾಂತಿ, ಸಮೃದ್ದಿ ಕರುಣಿಸಲಿ ಎಂಬ ಭಾವನೆಯೊಂದಿಗೆ ಪಟ್ಟಣದ ವಿವಿದಡೆ ಆಚರಿಸಲಾದ ಈ ಹಬ್ಬದಲ್ಲಿ ಭಕ್ತಿಭಾವ ಮೆರೆದಿದ್ದೇನು ಕಡಿಮೇನಿಲ್ಲಾ.