ನಾಟಕ ಅಕಾಡೆಮಿ ಪ್ರಶಸ್ತಿ ಲಭಿಸಿದ್ದಕ್ಕೆ ಶ್ರೀಗಳಿಂದ ಸನ್ಮಾನ
ಸೇಡಂ, ಅ,10: ಹಿರಿಯ ಪತ್ರಕರ್ತರು ನಾಟಕಕಾರರು ಕವಿಗಳಾದ ಶ್ರೀ ಸಿದ್ಧಲಿಂಗ ಸ್ವಾಮಿ ಮಲಕೂಡ ರವರಿಗೆ ನಾಟಕ ಅಕಾಡೆಮಿ ಪ್ರಶಸ್ತಿ ಲಭಿಸಿದ್ದಕ್ಕೆ ಮಳಖೇಡ ಶ್ರೀ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯರು ಸನ್ಮಾನಿಸಿ ಆಶೀರ್ವದಿಸಿದರು. ಈ ವೇಳೆಯಲ್ಲಿ ರಾಜಶೇಖರ ಪುರಾಣಿಕ, ದಿನೇಶ್ ಪಾಟೀಲ, ದೇವಿಂದ್ರಪ್ಪ ಹಳಿಜೋಳ, ಚಂದ್ರಶೇಖರ ಸಂಪಾ, ರಾಜು ರೆಡ್ಡಿ, ಶೇಖಯ್ಯ ಸ್ವಾಮಿ, ಉದಯ ತಳಕಿನ ಇತರರಿದ್ದರು.