ಬೀದರ ನಿಂದ ತೆಲಂಗಾಣಾದ ಮೇದಕ್ ಜಿಲ್ಲಾ ಕೇಂದ್ರಕ್ಕೆ ಬಸ್ ಓಡಿಸಲು ಮನವಿ
ಬೀದರ:ಆ.10:ಬೀದರ್ ನಿಂದ 120 ಕಿಲೋ ಮೀಟರ ದೂರದಲ್ಲಿರುವ ತೆಲಂಗಾಣಾ ರಾಜ್ಯದ ಮೇದಕ ಜಿಲ್ಲಾ ಕೇಂದ್ರಕ್ಕೆ ಸರ್ಕಾರಿ ಬಸ್ಸಿನ ವ್ಯವಸ್ಥೆ ಇರುವುದಿಲ್ಲ. ಮೇದಕ್ ಪಟ್ಟಣವು ವ್ಯಾಪಾರಿ ಕೇಂದ್ರ ವಾಗಿದ್ದು, ಬೀದರ ನಿಂದ ದಿನಾಲು ನೂರಾರು ಜನರು ಮೆದಕ ಗೆ ಹೋಗಿ ಬರುತ್ತಾರೆ. ಮೇದಕ್ ನ ಬಹಳಷ್ಟು ಜನ ಬೀದರ ನಲ್ಲಿ ಹಾಗೂ ಬೀದರ ನ ಬಹಳಷ್ಟು ಜನ ಮೇದಕನಲ್ಲಿ ವಾಸ ಮಾಡುತ್ತಿರುತ್ತಾರೆ. ತೆಲಂಗಾಣಾ ರಾಜ್ಯ ಸರ್ಕಾರದ ಒಂದು ಬಸ್ಸು ಮೆದಕ ನಿಂದ ಬೀದರಗೆ ಸ್ವಲ್ಪ ದಿವಸ ಓಡಿಸಿ, ಆನಂತರ ಬಂದ್ ಮಾಡಿದ್ದಾರೆ. ಸದ್ಯ ಬೀದರ್ ನಿಂದ ನೇರವಾದ ಬಸ್ಸಿನ ವ್ಯವಸ್ಥೆ ಇಲ್ಲದಿರುವುದ ರಿಂದ ಎರಡೂ ಕಡೆಯ ಜನರಿಗೆ ಬಹಳಷ್ಟು ತೊಂದರೆ ಆಗುತ್ತಿದೆ.
ಆದ್ದರಿಂದ ಬೀದರ ನಿಂದ ಗಂಗ್ವಾರ್, ರಾಯಪಲ್ಲಿ, ಅಲ್ಲದುರ್ಗ, ಬಟವಟಪಲ್ಲಿ ಮಾರ್ಗವಾಗಿ,ಮೇದಕ್ ಗೆ ದಿನಾಲು ಎರಡು ಸಲ ಬೀದರ್ ಡಿಪೆÇೀದಿಂದ ಬಸ್ಸನ್ನು ಓಡಿಸಬೇಕೆಂದು ಜೈ ಹಿಂದ್ ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ರಾಮಕೃಷ್ಣ ಮುನಿಗ್ಯಾಲ ರವರು ಈ ಮೂಲಕ ಕೋರಿದ್ದಾರೆ
ಅವರು ಇಂದು ಸದರಿ ವಿಷಯದ ಮನವಿಯನ್ನು ಕ ಕ ರ ಸಾ ನಿಗಮದ ಬೀದರನ ವಿಭಾಗಿಯ ನಿಯಂತ್ರಣಾಧಿ ಕಾರಿಗಳಿಗೆ ಪತ್ರವನ್ನು ಸಲ್ಲಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ವೀರಭದ್ರಪ್ಪ ಉಪ್ಪಿನ ಹಾಗೂ ಕೋಶಾ ಧ್ಯಕ್ಷರಾದ ಗಂಗಪ್ಪ ಸಾವಳೆ ಯವರು ಹಾಜರಿದ್ದರು.