ತಾಯಿಯ ಎದೆ ಹಾಲು ಅಮೃತಕ್ಕೆ ಸಮ: ಶೋಭಾ
ಚಿತ್ತಾಪುರ:ಆ.10:ನವಜಾತ ಶಿಶುಗಳಿಗೆ ತಾಯಿಯ ಎದೆ ಹಾಲು ಅಮೃತಕ್ಕೆ ಸಮನಾಗಿದ್ದು ಎಲ್ಲಾ ತಾಯಂದಿರು ಕಡ್ಡಾಯವಾಗಿ ಎದೆ ಹಾಲು ನೀಡುವುದು ಅವಶ್ಯಕವಾಗಿದೆ ಎಂದು ಶೋಭಾ ಕೆಶೆಟ್ಟಿ ಅವರು ತಾಯಂದರಿಗೆ ಜಾಗೃತಿ ಮೂಡಿಸಿದರು.
ವಿಶ್ವ ಸ್ತನ್ಯಪಾನ ಸಪ್ತಾಹ ದಿನ ಆಚರಣೆಯ ಅಂಗವಾಗಿ
ತಾಲೂಕಿನ ದಂಡೋತಿ ಗ್ರಾಮದ ಅಂಗನವಾಡಿ ಕೇಂದ್ರ3 ರಲ್ಲಿ ನಡೆದ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಮಗ್ರ ಶಿಶು ಅಭಿವೃದ್ಧಿಯ ದಂಡೋತಿ ವಲಯ ಮೇಲ್ವಿಚಾರಕಿ ಶೋಭಾ ಕೆಶೆಟ್ಟಿ ಅವರು ಮಾತನಾಡಿ ಇತ್ತಿಚಿನ ದಿನಗಳಲ್ಲಿ ತಾಯಂದಿರು ತಮ್ಮ ದೇಹದ ಸೌಂದರ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹುಟ್ಟಿರುವ ಮಕ್ಕಳಿಗೆ ಬಾಟಲಿಗಳಿಂದ ಹಾಲು ಉಣಿಸುವ ಕೆಲಸ ಮಾಡುತ್ತಿದ್ದು ಇದರಿಂದ ಮಕ್ಕಳ ದೇಹದ ಮತ್ತು ಬುದ್ಧಿಶಕ್ತಿಯ ಬೆಳವಣಿಗೆಗೆ ಮಾರಕವಾಗುತ್ತಿದೆ.
ಮಕ್ಕಳಿಗೆ ತಾಯಿಯ ಎದೆ ಹಾಲು ಅಮೃತಕ್ಕೆ ಸಮನಾಗಿದ್ದು ಮಕ್ಕಳ ಸವಾರ್ಂಗೀಣ ಅಭಿವೃದ್ಧಿಗೆ ಸಹಕಾರಿಯಾಗಿದೆ ಇದರಿಂದ ಎಲ್ಲಾ ತಾಯಂದಿರು ತಮ್ಮ ತಮ್ಮ ಮಕ್ಕಳಿಗೆ ಬಾಟಲಿ ಹಾಲು ಕುಡಿಸದೆ ತಮ್ಮ ಎದೆ ಹಾಲು ಕುಡಿಸಬೇಕು ಎಂದು ತಾಯಂದಿಗೆ ಸ್ತನ್ಯಪಾನದ ಬಗ್ಗೆ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ದಂಡೋತಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಶಿವಲಿಲಾ,ಅಂಗನವಾಡಿ ಕಾರ್ಯಕರ್ತೆ ಅಕ್ಕಮಹಾದೇವಿ ಬೃಂಗಿಮಠ್,ಸಹಾಯಕಿ ಗುರುಬಾಯಿ, ವಿಜಯಲಕ್ಷ್ಮಿ ವಾರದ್,ನೂರಜಾಬಿ,ನೀಲಾವತಿ ಕೊಂಚೂರ್ ಸೇರಿದಂತೆ ತಾಯಂದಿರು ಇದ್ದರು.