ಪತ್ರಕರ್ತರು ಸತ್ಯಾಸತ್ಯತೆ ಅರಿತು ಸುದ್ದಿ ಮಾಡಬೇಕು:ಶಿವಸುಂದರ
ಚಿತ್ತಾಪುರ:ಆ.10:ಸಮಾಜ ಸುಧಾರಣೆಯಲ್ಲಿ ಮತ್ತು ಸಾರ್ವಜನಿಕರಿಗೆ ಉತ್ತಮ ಸಮಾಚಾರಗಳನ್ನು ಮುಟ್ಟಿಸಬೇಕಾದರೆ ಪತ್ರಕರ್ತರು ಸತ್ಯಾಸತ್ಯತೆಯನ್ನು ಅರಿತು ಸುದ್ದಿಯಾಗಬೇಕು ಎಂದು ಲೇಖಕ ಮತ್ತು ಪ್ರಗತಿಪರ ಚಿಂತಕ ಶಿವಸುಂದರ ಬೆಂಗಳೂರು ಅವರು ಪತ್ರಕರ್ತರಿಗೆ ಕಿವಿಮಾತು ಹೇಳಿದರು.
ಪಟ್ಟಣದ ತಾಲೂಕ ಪಂಚಾಯತ ಸಭಾಂಗಣದಲ್ಲಿ ನಡೆದ ತಾಲೂಕ ಮಟ್ಟದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು ಆಡಳಿತ ಪಕ್ಷಗಳು ಮತ್ತು ವಿರೋಧ ಪಕ್ಷಗಳನ್ನು ಹೇಳಿರುವ ಮಾತುಗಳನ್ನೆ ವಿಶ್ಲೇಷಣೆ ಮಾಡಿ ಸುದ್ದಿ ಮಾಡುವುದಕ್ಕಿಂತ ಮುಂಚಿತವಾಗಿ ಸಮಾಜ ಸುಧಾರಣೆಗಾಗಿ ಮತ್ತು ಸಾರ್ವಜನಿಕರಿಗೆ ಉತ್ತಮ ಸಂದೇಶ ನೀಡಬೇಕಾದರೆ ಪತ್ರಕರ್ತರು ರಾಜಕೀಯ ಪಕ್ಷದವರು ಹೇಳಿದ ಮಾತುಗಳಲ್ಲಿ ಸತ್ಯಾಸತ್ಯತೆಯನ್ನು ಅರಿತು ಸುಳ್ಳು ಹೇಳುವ ಯಾವುದೇ ಪಕ್ಷದವರ ಪರವಾಗಿ ಮಾತನಾಡದೆ ಸತ್ಯದ ಪರವಾಗಿ ಸುದ್ದಿ ಮಾಡಬೇಕು ಇಲ್ಲದಿದ್ದರೆ ಪತ್ರಕರ್ತರು ಕಾರ್ಯ ಮರೆತಂತಾಗುತ್ತದೆ.
ಅಲ್ಲದೆ ಯಾವುದೇ ಒಂದು ಸುದ್ದಿ ಮಾಡುವಲ್ಲಿ ಕೇವಲ ಸತ್ಯವನ್ನು ಅರಿತು ಸುದ್ದಿ ಮಾಡಿದರೆ ಸಾಲದು ಆ ವಿಷಯದ ಬಗ್ಗೆ ಇನ್ನಷ್ಟು ಆಳಕ್ಕೆ ಇಳಿದು ವಿಷಯದ ಬಗ್ಗೆ ಪ್ರಶ್ನೆಗಳನ್ನು ಕೇಳುವುದರ ಮೂಲಕ ದೂರದಿಂದ ಕಾಣದನ್ನು ಪತ್ರಕರ್ತರು ತೀರಾ ಸಮೀಪದಿಂದ ಅರಿತುಕೊಂಡು ಸುದ್ದಿಯಾಗಬೇಕು,ಪತ್ರಕರ್ತರು ಯಾವುದೇ ವಿಷಲಾಗಲಿ ಅದರ ಬಗ್ಗೆ ಅನೇಕ ಪ್ರಶ್ನೆಗಳನ್ನು ಕೇಳುವುದರಿಂದ ಸತ್ಯ ಹೊರಗೆ ಬಿಳುತ್ತದೆ,ಇಂತಹ ಸತ್ಯವನ್ನು ಅರಿಯುವ ಕಾರ್ಯವನ್ನು ಪತ್ರಕರ್ತರು ಮಾಡಬೇಕು.
ಸಮಾಜದಲ್ಲಿನ ಆಗುಹೋಗುಗಳಬಗ್ಗೆ,ಸಮಾಜ ಸುಧಾರಣೆಯ ಬಗ್ಗೆ ಸುದ್ದಿ ಮಾಡುವುದರ ಬಗ್ಗೆ ಸುದ್ದಿಗಳಿಂದ ಸದ್ದು ಮಾಡುತ್ತಾ ಕಾರ್ಯನಿರತ ಪತ್ರಕರ್ತರಾಗಿದ್ದಾರೆ ಆದರೆ ಇದಾವುದರ ಬಗ್ಗೆ ಅರಿವಿಲ್ಲದೆ ತಮ್ಮ ಜವಾಬ್ದಾರಿ ಹಾಗೂ ತಮ್ಮ ಕಾರ್ಯವನ್ನೆ ಮರೆತ ಪತ್ರಕರ್ತರಿಂದ ದೇಶಕ್ಕೆ ಕಂಟಕವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಶರಣಬಸವೇಶ್ವರ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಡಾಕ್ಟರ್ ಬಿ ಪಾಟೀಲ್ ಅವರು ಮಾತನಾಡಿ ಗ್ರಾಮೀಣ ಭಾಗದ ಪತ್ರಕರ್ತರು ಕೆಲವೊಂದು ಬಾರಿ ಯಾವುದೇ ಲಾಭದ ಅಪೇಕ್ಷೆ ಇಲ್ಲದೆ ತಮ್ಮ ಸ್ವಂತ ಖರ್ಚಿನಲ್ಲಿ ಹತ್ತಾರು ಮೈಲಿ ದೂರದಲ್ಲಿ ಹೋಗಿ ಸುದ್ದಿ ಮಾಡುವ ಪ್ರಸಂಗ ಎದುರಿಸುತ್ತಿದ್ದಾರೆ, ಯಾವುದೇ ಸಂಬಳವಿಲ್ಲದೆ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರು ಸಮಾಜದ ಜವಾಬ್ದಾರಿಯನ್ನು ಹೊತ್ತು ಕುಟುಂಬದ ಜವಾಬ್ದಾರಿಯನ್ನು ಮರೆಯುತ್ತಿದ್ದಾರೆ ಇದರಿಂದ ಮನೆಗೆ ಆಧಾರ ಸ್ತಂಭವಾಗಿರುವ ಪತ್ರಕರ್ತರು ತಮ್ಮ ಪ್ರಾಣ ಕಳೆದುಕೊಳ್ಳುವಂತಹ ಪರಿಸ್ಥಿತಿಯು ಎದುರಿಸುತ್ತಾದ್ದಾರೆ ಇಂತಹ ಗ್ರಾಮೀಣ ಭಾಗದ ಪತ್ರಕರ್ತರಿಗೆ ಸರ್ಕಾರದ ಒತಿಯಿಂದ ಪತ್ರಕರ್ತರು ಮತ್ತು ಕುಟುಂಬಸ್ತರಿಗೆ ಜೀವವಿಮೆ,ವಸತಿ ಯೋಜನೆಯಡಿ ಸೂರು ಕಲ್ಪಿಸಬೇಕು,ಉಚಿತ ಬಸ್ ಪಾಸ್ ಜಾರಿಗೆ ತರಬೇಕು, ಎಂಬ ಬೇಡಿಕೆಗಳನ್ನು ಸರ್ಕಾರವು ನೀಡಬೇಕು ಎಂದು ಹೇಳಿದರು.
ಉದ್ಘಾಟಕರಾಗಿ ಆಗಮಿಸಿದ ಖ್ಯಾತ ಉದ್ದಿಮೆದಾರ ಮತ್ತು ಶಿಕ್ಷಣ ಪ್ರೇಮಿ ನಾಗರೆಡ್ಡಿ ಪಾಟೀಲ್ ಕರದಾಳ, ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ,ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷ ಸಿದ್ದರಾಜ ಮಲ್ಕಂಡಿ,ಪಾಸ್ರ್ತಾವಿಕವಾಗಿ ಡಾ ಸಾಯಬಣ್ಣ ಗುಡುಬಾ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಪ್ರಶಸ್ತಿ ಪುರಸ್ಕøತರಾದ ತಾಲೂಕ ವರದಿಗಾರ ರಲಿಶಂಕರ ಬುರ್ಲಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು,ಅಲ್ಲದೆ ಪತ್ರಿಕಾ ದಿನಾಚರಣೆ ಅಂಗವಾಗಿ ಪಿಯುಸಿ ಮತ್ತು ಪದವಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ನಗದು ಬಹುಮಾನ, ಪ್ರಮಾಣ ಪತ್ರ ಮತ್ತು ನೆನಪಿನ ಕಾಣಿಕೆ ನೀಡಿ ಪೆÇ್ರೀತ್ಸಾಹಿಸಲಾಯಿತು.
ಕಾರ್ಯಕ್ರಮದಲ್ಲಿ ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಬಿಜೆಪಿ ಮಂಡಲ ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರಕಾರಣಿ ಸಮಿತಿಯ ಶಿವರಂಜನ್ ಸತ್ಯಂಪೇಟ್,ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಕುಮಾರಿ ನೀಲಗಂಗಾ ಬಬಲಾದ, ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ, ಚಿತ್ತಾಪುರ ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ್,ವಾಡಿ ಪುರಸಭೆ ಮುಖ್ಯಾಧಿಕಾರಿ ಫಕೃದ್ದಿನ್ ಸಾಬ್ ಸೇರಿದಂತೆ ಅನೇಕರು ಇದ್ದರು.
ಪತ್ರಕರ್ತರು ಮತ್ತು ಪೆÇಲೀಸ್ ಇಲಾಖೆಯವರು ಕಾರ್ಯವೈಖರಿಯು ಒಂದೆ ನಾಣ್ಯದ ಎರಡು ಮುಖಂದಂತಿದ್ದು ಪತ್ರಕರ್ತರು ಕಾನೂನಿನ ಚೌಕಟ್ಟಿನಲ್ಲಿ ಕಾಯ್ದೆಗಳು ಬದಲಾಗುತ್ತಿವೆ ಉದಾಹರಣೆಗೆ ಕಲಂ 144 ನಿಷೇಧಾಜ್ಞೆಯು ಇಂದು ಕಲಂ 163 ಆಗಿ ಬದಲಾವಣೆಯಾಗಿದೆ, ಪೆÇೀಕ್ಸೋ ಕಾಯಿದೆಯು ಬಹಳ ಕಟ್ಟುನಿಟ್ಟಿನ ಕಾಯ್ದೆಯಾಗಿದ್ದು ಅದರ ಮಾನದಂಡಗಳನ್ನು ನಾವು ಅನುಸರಿಸ ಬೇಕಾಗುತ್ತದೆ ಇಂತಹ ಸುದ್ದಿ ಮಾಡಲು ಕಾಯ್ದೆಗಳ ಬಗ್ಗೆ ಸಾಕಷ್ಟು ಅಧ್ಯಯನ ಮಾಡಬೇಕಾಗಿದೆ ಎಂದು ಶಹಾಬಾದ್ ವಿಭಾಗದ ಡಿವೈಎಸ್ಪಿ ಶಂಕರಗೌಡ ಪಾಟೀಲ ಅವರು ಪತ್ರಕರ್ತರಿಗೆ ಸಲಹೆ ನೀಡಿದರು.