ಅಲೆಮಾರಿ ಮಕ್ಕಳ ಜತೆ ಬಸವ ಪಂಚಮಿ ಆಚರಣೆ
ಬೀದರ್: ಆ.10:ಮಾನವ ಬಂಧುತ್ವ ವೇದಿಕೆಯ ಪದಾಧಿಕಾರಿಗಳು ಬೀದರ್ ತಾಲ್ಲೂಕಿನ ಜನವಾಡ ಗ್ರಾಮದಲ್ಲಿ ಅಲೆಮಾರಿ ಜನಾಂಗದ ಮಕ್ಕಳೊಂದಿಗೆ ಶುಕ್ರವಾರ ಬಸವ ಪಂಚಮಿ ಆಚರಿಸಿದರು.
ಸಚಿವ ಸತೀಶ್ ಜಾರಕಿಹೋಳಿ ಅವರ ನೇತೃತ್ವದಲ್ಲಿ 9 ವರ್ಷಗಳಿಂದ ಮೌಢ್ಯದ ವಿರುದ್ಧ ಜಾಗೃತಿ ಮೂಡಿಸಲಾಗುತ್ತಿದೆ. ಹುತ್ತಕ್ಕೆ ಹಾಲೆರೆಯುವ ಬದಲು ಬಡ ಮಕ್ಕಳಿಗೆ ಕೊಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗುತ್ತಿದೆ ಎಂದು ವೇದಿಕೆಯ ಅಧ್ಯಕ್ಷ ಗೌತಮ ಮುತ್ತಂಗಿಕರ್ ಹೇಳಿದರು.
ಹಾವು ಹಾಲು ಕುಡಿಯದ ಕಾರಣ ಹುತ್ತಕ್ಕೆ ಎರೆದರೆ ವ್ಯರ್ಥ ಎಂದು ತಿಳಿಸಿದರು.
ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಸದಸ್ಯ ಜಿತೇಂದ್ರ ಕ್ವಾಟ್ಲೆ, ಸುಡುಗಾಡು ಸಿದ್ಧ ಸಮಾಜದ ಮುಖಂಡರಾದ ಅಶೋಕ ಕಡಮಂಚಿ, ಜೆಟ್ಟೆಪ್ಪ ಮತ್ತಿತರರು ಇದ್ದರು.