ಅರಿವು ಶಿಕ್ಷಣ ಸಂಸ್ಥೆ ಬಸವ ಪಂಚಮಿ ಆಚರಣೆ
ಆಳಂದ :ಆ.10:ತಾಲೂಕಿನ ಕಿಣ್ಣಿ ಸುಲ್ತಾನ ಗ್ರಾಮದ ಅರಿವು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಶೃಂಗೇರಿಯವರ ನೇತೃತ್ವದಲ್ಲಿ ಬಸವ ಪಂಚಮಿ ಆಚರಿಸಿ ಮಕ್ಕಳಿಗೆ ಹಾಲು ವಿತರಣೆ ಮಾಡಲಾಯಿತು.
ಗುರುಪ್ಪ ಶಹಾಪುರೆ ಮಾತನಾಡಿ ಮೂಡನಂಬಿಕೆ ಬೇರೂರಿದೆ ಕಿತ್ತೆಸೆಯಬೇಕು ಹಾವು ಹಾಲು ಕುಡಿಯುವುದಿಲ್ಲ ಅದು ವಿಷಕಾರಿಯಾಗಿದೆ ಮೊಟ್ಟೆಯಿಂದ ಜನಿಸಿದ ಜೀವಿಗಳು ಹಾಲುಕುಡಿ ಯುವುದಿಲ್ಲ ಎಂದು ಹೇಳಿದರು .ಶ್ರೀಶೈಲ ಮಾಡ್ಯಾಳೆ ಮಾತನಾಡಿ ಬಸವಣ್ಣನ ವಿಚಾರಗಳು ಸಮಾಜದಲ್ಲಿ ಗಟ್ಟಿಗೊಳಿಸಿ ವೈಜ್ಞಾನಿಕ ಮನೋಭಾವ ಬೆಳೆಸುವ ಅವಶ್ಯಕತೆ ಇದೆ ಪ್ರತಿಯೊಂದು ಹಬ್ಬಕ್ಕೆ ವೈಜ್ಞಾನಿಕ ಹಿನ್ನಲೆ ಇದೆ ಸಂಪ್ರದಾಯದ ಹೆಸರಿನಲ್ಲಿ ದಾರಿ ತಪ್ಪಿಸುವ ಕೆಲಸವನ್ನು ಮಾಡಬಾರದು ಎಂದು ಸಲಹೆ ನೀಡಿದರು ಕಲ್ಯಾಣಿ ತುಕ್ಕಾಣೆಯವರು ಸ್ವಚ್ಛತೆಯ ಕುರಿತು ಹಾಡನ್ನು ಹಾಡಿ ಮಕ್ಕಳನ್ನು ರಂಜಿಸಿದರು. ಧರ್ಮಣ್ಣ ಪೂಜಾರಿ ಮಾತನಾಡಿ ಬುದ್ಧ ಬಸವ ಅಂಬೇಡ್ಕರ್ ರವರ ವಿಚಾರಗಳು ಒಂದೇ ಆಗಿವೆ ಇವರ ವಿಚಾರಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಲು ಕರೆ ನೀಡಿದರು ಈ ಸಂದರ್ಭದಲ್ಲಿ ಅಶೋಕ ಶೃಂಗೇರಿ, ಪಲ್ಲವಿ ಹಣಮಂತ ಚಿಂಚೋಳಿ, ಡಾ.ಅವಿನಾಶ ದೇವನೂರ ವಿಕಾಸ ಚಿಂಚೋಳಿ, ವಿಕ್ರಾಂತ ಶೃಂಗೇರಿ,ಶಿವಾಜಿ ಪಾಂಡ್ರೆ ಶಶಿಕಾಂತ ಸಿಂಗೆ, ಬಸವರಾಜ ಶೃಂಗೇರಿ ಪ್ರತಿಭಾ ಮಲ್ಲಿಕಾರ್ಜುನ ಮಲ್ಲಿಕಾರ್ಜುನ ಶೃಂಗೇರಿ ನಿರೂಪಿಸಿದರು ಹಣಮಂತ ಚಿಂಚೋಳಿ ನಿರೂಪಿಸಿದರು.