ಬಸವನಗರಕ್ಕೆ ಅಗತ್ಯ ಸೌಲಭ್ಯ ಒದಗಿಸಲು ಕ್ರಮ
ವಾಡಿ:ಆ.10: ಪಟ್ಟಣದ ಪುರಸಭೆ ವ್ಯಾಪ್ತಿಯ ವಾರ್ಡ್ 1ರ ಬಸವನಗರ ಬಡಾವಣೆಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಈಗಾಗಲೇ ಪಟ್ಟಿ ಸಿದ್ದಪಡಿಸಿಕೊಂಡಿದ್ದು ಮುಂದಿನ ದಿನಗಳಲ್ಲಿ ಸಿಸಿ ರಸೆ,್ತ ಒಳಚರಂಡಿ ಸಹಿತ ಇನ್ನಿತರ ಕಾರ್ಯಗಳಿಗೆ ಅನುದಾನ ಒದಗಿಸಿ ಅಭಿವೃದ್ಧಿಗೆ ಚಾಲನೆ ನೀಡಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಸಿ.ಫಕೃದ್ದೀನ್ ಸಾಬ್ ತಿಳಿಸಿದ್ದಾರೆ.
ಬಸವನಗರ ಸ್ಥಳೀಯ ನಿವಾಸಿಗಳು ಈಚೆಗೆ ಮೂಲಸೌಕರ್ಯಕ್ಕೆ ಒತ್ತಾಯಿಸಿ ಪುರಸಭೆಗೆ ಮನವಿ ಸಲ್ಲಿಸಿದ್ದರು. ಮನವಿಗೆ ಸ್ಪಂದಿಸಿ ಬಡಾವಣೆಗೆ ಭೇಟಿ ನೀಡಿದ ಮುಖ್ಯಾಧಿಕಾರಿಗಳು, ಕುಡಿಯುವ ನೀರಿನ ಟ್ಯಾಂಕ್, ಸಿಸಿ ರಸ್ತೆ, ಒಳಚರಂಡಿ ಹಾಗೂ ಅಗತ್ಯ ಸೌಲಭ್ಯಗಳ ಒದಗಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳಾದ ಲಕ್ಷ್ಮಿ ಕುಲಕರ್ಣಿ, ಗಂಗಮ್ಮ ಜಡಗಿ, ಬಾಲಮ್ಮ, ಆಶಾ ವಿಜ್ಜುಬಾಯಿ, ನಾಗಮ್ಮ ಬೋವಿ, ಪಾರ್ವತಿ ಗುತ್ತೇದಾರ, ಜಯಶ್ರೀ ಬೊಮನಹಳ್ಳಿ, ಚಾಂದಿಬಾಯಿ ರಾಠೋಡ, ಡಾ.ಸುರೇಶ ಕುಲಕರ್ಣಿ ಇದ್ದರು.