ಗೊಟೂರದಲ್ಲಿ ಗ್ರಾಮೀಣ ಕ್ರೀಡೆ ಮೆರಗು
ಕಾಳಗಿ :ಆ.10: ಗೋಟೂರ ಗ್ರಾಮದಲ್ಲಿ ನಾಗರ ಪಂಚಮಿ ನಿಮಿತ್ಯ ವಿಶೇಷ ಗ್ರಾಮೀಣ ಕ್ರೀಡೆಗಳು ಆಡುವ ಮೂಲಕ ವಿಶೇಷ ನಾಗರ ಪಂಚಮಿ ಹಬ್ಬವು ಆಚರಿಸಲಾಯಿತು.
ಗ್ರಾಮದಲ್ಲಿ ಪ್ರಮುಖ ದೇವಸ್ಥಾನಗಲ್ಲಿ ದೇವರ ಮೂರ್ತಿಗಳಿಗೆ ಬಿಲ್ಲುಪತ್ತೆ, ಹೂವು ಬಾಳೆ, ತೆಂಗಿನ ಮರಗಳಿಂದ ಅಲಂಕಾರ ಮಾಡಿ ವಿಶೇಷ ಪೂಜೆ ನೆರವೇರಿಸಿದರು.
ನಾಗರ ಪಂಚಮಿ ಅಂಗವಾಗಿ ಗೊಟೂರ್ ಗ್ರಾಮದ ಯುವಕರಿಗಾಗಿಯೇ ಗ್ರಾಮೀಣ ಕ್ರೀಡಾಕೂಟ ಆಯೋಜಿಸಿ 9 ತಂಡಗಳನ್ನು ರಚಿಸಿ ಹಾಗಜಗ್ಗಾಟ, ಗೋಣಿ ಚೀಲದಾಟ, ಮಂಗದಾಟ, ಬಲೂನ್ ವಡೆಯುವ ಆಟ, ಕುರ್ಚಿ ಆಟ, ಬೊಗಸೆಯಿಂದ ನೀರು ತುಂಬುವಟ, ಇಟ್ಟಂಗಿಮೇಲೆ ನಡೆಯುವ ಆಟ, ಕಾಲಿಗೆ ಕಟ್ಟಿಗೆ ಕಟ್ಟಿಗೆ ಸುತ್ತಿ ಓಡುವ ಆಟ ಸೇರಿದಂತೆ ಗ್ರಾಮೀಣ ಕ್ರೀಡೆಗಳು ಆಯೋಜಿಸಿ ಸ್ಪರ್ಧೆಯಲ್ಲಿ ವಿಜೇತರಾದ ತಂಡಗಳಿಗೆ ಶಕ್ತಿ ಮೋಟರ್ಸ್ ಮಾಲೀಕ ದತ್ತುಕುಮಾರ ಸಾವಳಗಿ ಪ್ರಯೋಜಕತ್ವದಲ್ಲಿ ಗ್ರಾಂ ಪಂಚಾಯತ್ ಅಧ್ಯಕ್ಷ ಶಿವುಕುಮಾರ ಕಾಮಕನೂರ್ ಬಹುಮಾನ ವಿತರಿಸಿದ್ದರು.
ಈ ಸಂಧರ್ಭದಲ್ಲಿ ಗ್ರಾಂ ಪಂಚಾಯತ್ ಅಧ್ಯಕ್ಷ ಶಿವುಕುಮಾರ ಕಾಮಕನೂರ್, ಮುಖಂಡರಾದ ಗುರುಶಾಂತ ಮುತಗಿ, ವಿಶ್ವನಾಥ ರೆಡ್ಡಿ ಕಾಮರೆಡ್ಡಿ, ಮಲ್ಲಿಕಾರ್ಜುನ ಸಿಂಗೆ, ದತ್ತು ಕುಮಾರ ಸಾವಳಗಿ, ಸಿಧಾರ್ಥ ಸಾಗರ ಶಂಕ್ರಪ್ಪ ತಾಂಡೂರು, ಪ್ರಭಾಕರ ಪೂಜಾರಿ, ಇಸ್ಮಾಯಿಲ್ ಪಾಸ್ತಾಪುರ ಜಾವಿದ್ ಮಂಗಲಗಿ, ಮಲಕಪ್ಪ ಜಮಾದಾರ, ರವಿ ಚಟ್ಟಿ, ಲಕ್ಷ್ಮಿಪುತ್ರ ಮಡಿವಾಳ, ನಾಗರಾಜ ಜಮಾದಾರ, ಇತರರು ಇದ್ದರು.