ಚಿತ್ತಾಪುರದಲ್ಲಿ ನಾಗರ ಪಂಚಮಿ ಆಚರಣೆ
ಚಿತ್ತಾಪುರ:ಆ.10: ತಾಲೂಕಿನಾದ್ಯಂತ ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿ ಸಡಗರ, ಸಂಭ್ರಮದಿಂದ ಶುಕ್ರವಾರ ಆಚರಿಸಿದರು.
ಪಟ್ಟಣದ ರಾಯಲ್ ಮೈದಾನದಲ್ಲಿ ಮಹಿಳೆಯರು ಕಲ್ಲುನಾಗರಕ್ಕೆ ಹಾಲೆರೆದು ಪೂಜೆ ಸಲ್ಲಿಸಿದರು. ಮಹಿಳೆಯರು, ಮಕ್ಕಳು ಹೊಸ ಬಟ್ಟೆ ಧರಿಸಿ ದೇವಸ್ಥಾನಗಳಲ್ಲಿ ಪ್ರತಿಷ್ಠಾಪಿಸಿರುವ ನಾಗದೇವತೆಗಳ ಶಿಲಾ ಪ್ರತಿಮೆಗಳಿಗೆ ಹಾಗೂ ನಾಗರ ಹುತ್ತಗಳಿಗೆ ಹಾಲೆರೆದು ಕಡಲೆ, ಅಳ್ಳು, ತಂಬಿಟ್ಟು, ಉಂಡಿ ಸೇರಿದಂತೆ ಇನ್ನಿತರ ವಸ್ತುಗಳು ನೈವೈದ್ಯ ದೇವರಿಗೆ ಸಲ್ಲಿಸಿದರು. ಯುವತಿಯರು ಕೆಲಕಡೆ ಜೋಕಾಲಿ ಆಟ, ಯುವಕರು ಭಾರವಾದ ಚೀಲಗಳು ಹೊತ್ತು ಓಡುವುದು. ನಿಂಬೆಕಾಯಿ ಎಸೆಯುವುದು ಒಂದೇ ಕಾಲಿನಿಂದ ಕುಂಟುತ್ತ ನಡೆಯುವುದು. ಭಾರವಾದ ಕಲ್ಲುಗಳು ಎತ್ತುವುದು. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನಡೆಯುವುದು ಆಟಗಳು ಆಡಿ ಸಂಭ್ರವಿಸಿದರು.
ವಿಶ್ವ ಹಿಂದು ಪರಿಷತ್, ಬಜರಂಗ ದಳದ ತಾಲೂಕು ಘಟಕದ ವತಿಯಿಂದ ಹಾಗೂ ಸಂಘದ ಸ್ವಯಂ ಸೇವಕರು ಶ್ರಮದಾನ ಮತ್ತು ನಾಗರ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿ ಅಭಿಷೇಕ ಮಾಡಿದರು.
ಮಂಜುನಾಥ ಶಾಸ್ತ್ರೀ ಸಂಗಡಿಗರು ವಿಶೇಷ ಆರ್ಚನೆ, ಮಂತ್ರ ಪಠಣ ಮಾಡಿದರು.
ಮಹಾದೇವ ಅಂಗಡಿ, ಅಂಬ್ರೀಶ ಸುಲೇಗಾಂವ, ಅಶ್ವಥ ರಾಠೋಡ, ಸಾಬಣ್ಣ ಪೂಜಾರಿ, ಮಲ್ಲಿಕಾರ್ಜುನ ಉಪ್ಪಾರ, ಶ್ಯಾಮ ಮೇಧಾ, ಮೇಘರಾಜ ಗುತ್ತೇದಾರ, ಲಕ್ಷ್ಮೀ ಸೇರಿದಂತೆ ಅನೇಕ ಮಹಿಳಯರು ಇದ್ದರು.