ಪತ್ರಿಕಾ ದಿನಾಚರಣೆ ಕಾರ್ಯಕ್ರಮ
ಕಲಘಟಗಿ, ಆ10: ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಪತ್ರಿಕಾ ರಂಗ ಕಾರ್ಯ ನಿರ್ವಹಿಸುತ್ತಿರುವುದು ಶ್ಲ್ಯಾಘನೀಯ ಎಂದು ಡಾ.ಸಿ ಎಚ್ ವಿಎಸ್‍ವಿ ಪ್ರಸಾದ ಹೇಳಿದರು.
ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪಟ್ಟಣದ ಗುಡ್ ನ್ಯೂಸ್ ಕಾಲೇಜಿನಲ್ಲಿ ಹಮ್ಮಿಕೊಂಡ ಪತ್ರಿಕಾ ದಿನಾಚಾರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕವಿವಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಜೆ. ಎಂ. ಚಂದುನವರ ಮಾತನಾಡಿ, ಈ ಜಗತ್ತಿನ ಮೊದಲ ಪತ್ರಕರ್ತ ಅಂದರೆ ನಾರದ ಮುನಿಗಳು. ಅಂದಿನಿಂದಲೇ ಈ ಪತ್ರಿಕಾ ವೃತ್ತಿ ಆರಂಭಗೊಂಡಿದೆ. ಸ್ಥಳೀಯ ಸುದ್ದಿಗಳನ್ನು ಬಿತ್ತರಿಸಿ ನ್ಯಾಯ ಒದಗಿಸಿ ಕೊಡುವಲ್ಲಿ ಪತ್ರಕರ್ತರ ಪಾತ್ರ ಹಿರಿದಾಗಿದೆ. ಕೇವಲ ಸುದ್ದಿಗಳನ್ನು ಬಿತ್ತರಿಸುವುದಷ್ಟೇ ಅಲ್ಲದೆ, ತಪ್ಪನ್ನು ಎತ್ತಿ ತೋರಿಸುವುದು ಮತ್ತು ಒಳ್ಳೆಯದನ್ನು ಪ್ರಚಾರಿಸುವ ಕಾಯಕವೇ ಪತ್ರಿಕಾ ವೃತ್ತಿ ಎಂದು ಹೇಳಿದರು.
ಸಮಾರಂಭ ಅದ್ಯಕ್ಷತೆಯನ್ನು ಕಲ್ಲಪ್ಪಾ ಮಿರ್ಜಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಪ್ರಹ್ಲಾದ ಗೌಡ, ಈರಪ್ಪ ನಾಯಕರ್ ಹಾಗೂ ತಾಲೂಕಿನ ಪತ್ರಿಕಾ ವಿತರಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯ ಮೆಲೆ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಲೊಚನೇಶ ಹೂಗರ, ಕಾರ್ಯದರ್ಶಿಗಳಾದ ಸುಶಿಲೆಂದ್ರಾಚಾರ್ಯ ಕುಂದರಗಿ, ರೆ ಬ ವರ್ಗಿಸ್ ಕೆ ಜೆ., ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಂಜುನಾಥ ಮುರಳ್ಳಿ, ಸೊಮನ್ನಾ ಬೆನ್ನುರ, ಅಣ್ಣಪ್ಪಾ ಒಲೆಕಾರ, ಪರಮಾನಂದ ಒಡೆಯರ್, ಆರ್. ಎಮ್. ಹೊಲ್ತಿಕೊಟಿ, ಪತ್ರಕರ್ತರಾದ ಪ್ರಕಾಶ ಲಮಾಣಿ, ರಾಕೆಶ ಅಳಗವಾಡಿ, ವಿರೇಶ್ ಹಾರುಗೆರಿ, ಗಿರಿಶ್ ಮುಕ್ಕಲ್, ರವಿ ಬಡಿಗೇರ, ರಮೆಶ್ ಸೊಲಾರಗೊಪ್ಪ, ಉಮೆಶ್ ಜೊಶಿ, ಪ್ರಹ್ಲಾದ ಗೊಲ್ಲಗೊಡ್ರ, ಪ್ರಕಾಶ ದುಪದ, ಉದಯ, ಪ್ರಭಾಕರ ನಾಯಕ, ಸುಭಾಷ್ ಸುಣಗಾರ, ವಿನಾಯಕ ಭಟ್ಟ, ಶಶಿಕುಮಾರ ಕಟ್ಟಿಮನಿ ಮತ್ತಿತರರು ಉಪಸ್ಥಿತರಿದ್ದರು.