ಮಕ್ಕಳ ಶೈಕ್ಷಣಿಕ ಗುಣಮಟ್ಟ ಸುಧಾರಣೆ ಅಗತ್ಯ
ನವಲಗುಂದ,ಆ10 : ಶಾಲಾ ಮೂಲ ಸೌಕರ್ಯ ಹೆಚ್ಚಿಸುವುದು, ಅನಿಯಮಿತ ಗೈರು ಹಾಜರಿ, ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ಕರೆತರುವ ಪ್ರಯತ್ನ ಮಾಡುವುದು, ಮಕ್ಕಳ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಎಸ್ ಡಿ ಎಂ ಸಿ ಹಾಗೂ ಶಿಕ್ಷಕರ, ಪಾಲಕರ ಜವಾಬ್ದಾರಿ ಮಹತ್ವದ್ದಾಗಿದೆ ಎಂದು ನೂತನ ಎಸ್ ಡಿ ಎಂ ಸಿ ಅಧ್ಯಕ್ಷ ಉಮೇಶ ನವಲಗುಂದ ಹೇಳಿದರು.
ತಾಲ್ಲೂಕಿನ ಪಡೆಸೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಎಸ್,ಡಿ,ಎಂಸಿ ಪದಾಧಿಕಾರಿಗಳ ಆಯ್ಕೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಭಿವೃದ್ಧಿಗೆ ಶಿಕ್ಷಣ ಮುಖ್ಯ ಎಂಬುದನ್ನು ಅರಿತು ಕೆಲಸ ಮಾಡಬೇಕು. ನಮ್ಮ ಶಾಲೆಗೆ ಮುಂದಿನ ದಿನಗಳಲ್ಲಿ ಎಲ್ಲಾ ಕೆಲಸಗಳಿಗೆ ಒತ್ತು ಕೊಡುತ್ತೇವೆ ಹಾಗೂ ಶಾಲೆಯನ್ನು ಅಭಿವೃದ್ಧಿ ಪಡಿಸಲು ಎಲ್ಲರೂ ಸೇರಿ ಶ್ರಮಿಸೋಣ ಎಂದರು.
ಮುಖ್ಯ ಶಿಕ್ಷಕ ಎಸ್ ಎಂ ಮೆಣಸಿನಕಾಯಿ ಮಾತನಾಡಿ ಶಾಲಾಭಿವೃದ್ಧಿ ಮತ್ತು ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಶಾಲಾ ಮೇಲುಸ್ತುವಾರಿ ಸಮಿತಿಯ ಪಾತ್ರ ಮಹತ್ವದ್ದು ಹಾಗಾಗಿ ಶಾಲೆಯ ಶೈಕ್ಷಣಿಕ ಹಾಗೂ ಭೌತಿಕ ಸೌಲಭ್ಯಗಳ ಅಭಿವೃದ್ದಿಗೆ ತಮ್ಮ ಸೇವೆಯು ಮುಡಿಪಾಗಿರಲೆಂದು ಮನವಿ ಮಾಡಿದರು.
ಉಪಾಧ್ಯಕ್ಷೆ ಕವಿತಾ ತಳವಾರ ಸದಸ್ಯರಾದ ಹನಮಪ್ಪ ತೋಟದ, ಮಹಾದೇವಪ್ಪ ಸವದಿ, ವಿರುಪಾಕ್ಷಪ್ಪ ಅಂಗಡಿ, ಹುಲಗಪ್ಪ ಹುಣಸಿಕಾಯಿ, ಶಿವಪ್ರಕಾಶ ಹಿರೇಮಠ, ವಿಠ್ಠಲ ಕೊಳ್ಳನ್ನವರ, ಶಂಕ್ರಪ್ಪ ಮುಂದಿನಮನಿ, ಅಪೂರಸಾಬ ಮುಲ್ಲಾನವರ, ಹೇಮಲತಾ ತೋಟದ, ರತ್ನಾ ಬಂಕುಣಕಿ, ಗೀತಾ ಬೆಟಗೇರಿ, ಗಂಗವ್ವ ಸುಳ್ಳದ, ಕಲ್ಪನಾ ತಿರ್ಲಾಪೂರ, ರುಕ್ಮೀಣಿ ಬರಗುಂಡಿ, ಮಂಜುಳಾ ಕೆಳಗಿನಮನಿ, ಲಕ್ಷ್ಮವ್ವ ಚಲವಾದಿ ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರು ಉಪಸ್ಥಿತರಿದ್ದರು.