ಔಷಧಿ ಅಂಗಡಿಗಳ ಪರಿಶೀಲನೆ
ಲಕ್ಷ್ಮೇಶ್ವರ,ಆ.10: ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಶುಕ್ರವಾರ ಗದಗ ಜಿಲ್ಲಾ ಸಹಾಯಕ ಔಷಧಿ ನಿಯಂತ್ರಕರು ಮತ್ತು ತಾಲೂಕ ವೈದ್ಯಾಧಿಕಾರಿಗಳು ಔಷಧಿ ಅಂಗಡಿಗಳ ಪರಿಶೀಲನೆ ನಡೆಸಿದರು.
ಗ್ರಾಮದ ಔಷಧ ಅಂಗಡಿಯಲ್ಲಿ ಸಹಾಯಕ ಔಷಧಿ ನಿಯಂತ್ರಕರಾದ ಧನಂಜಯ್ ಅವರು ಅಂಗಡಿಯ ಮಾಲೀಕರೊಂದಿಗೆ ಭ್ರೂಣ ಹತ್ಯೆ ಮತ್ತು ಗರ್ಭಪಾತಕ್ಕೆ ಸಂಬಂಧಪಟ್ಟಂತೆ ಕಾನೂನುಬಾಹಿರವಾಗಿ ಹಾಗೂ ಅನಧಿಕೃತವಾಗಿ ಔಷಧಿಗಳನ್ನು ಮಾರಲಾಗುತ್ತಿದೆಯೇ? ಎಂದು ಪರಿಶೀಲಿಸಿದರು.
ಬಳಿಕ ಅವರು ಎಲ್ಲಿಯಾಗಲಿ ಅಂತಹ ಪ್ರಕರಣಗಳು ಕಂಡು ಬಂದರೆ ಭ್ರೂಣ ಹತ್ಯೆ ನಿಷೇಧ ಕಾನೂನು ಅನ್ವಯ ಕಠಿಣ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕ ವೈದ್ಯಾಧಿಕಾರಿ ಸುಭಾಷ್ ದಾಯಗೊಂಡ ಇದ್ದರು.