ತಾಲೂಕಾ ವೀರಮಹೇಶ್ವರ ಜಂಗಮ ಸಮಾಜದ ಅಧ್ಯಕ್ಷರಾಗಿ ಆಯ್ಕೆ
ಸಂಜೆವಾಣಿ ವಾರ್ತೆ
ಯಲಬುರ್ಗಾ:ಅ,10-ಚಿಕ್ಕಮ್ಯಾಗೇರಿ ಗ್ರಾಮದ  ಹಂಪಯ್ಯಸ್ವಾಮಿ ಹಿರೇಮಠ  ಇವರು ಯಲಬುರ್ಗಾ ತಾಲ್ಲೂಕು ವೀರ  ಮಹೇಶ್ವರ ಜಂಗಮ ಸಮಾಜದ  ಅಧ್ಯಕ್ಷರಾಗಿ ಆಯ್ಕೆ ಆಗಿರುವುದಕ್ಕೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ   ಬಸವರಾಜ ರಾಯರೆಡ್ಡಿ ಯವರು ಸನ್ಮಾನಿಸಿ ಗೌರವಿಸಲಾಯಿತು .
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಬಸವರಾಜ ಉಳ್ಳಾಗಡ್ಡಿ, ಕಾಂಗ್ರೇಸ್ ವಕ್ತರ ಶಿವನಗೌಡ ದಾನರಡ್ಡಿ,ತಾಲೂಕಾ ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಸುಧೀರ್ ಕೊರ್ಲಹಳ್ಳಿ,ಕುಕನೂರ ತಾಲೂಕಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಸಂಗಮೇಶ್ ಗುತ್ತಿ,ಜಿಲ್ಲಾ ಗ್ಯಾರಂಟಿ ಸಮಿತಿ ಸದಸ್ಯ ಮಲ್ಲು ಜಕ್ಕಲಿ ಮುಖಂಡರಾದ ಶರಣಪ್ಪ ಗಾಂಜಿ, ಮಂಜುನಾಥ ಕಡೇಮನಿ,ಬಿ.ಎಂ. ಶಿರೂರ ವಕೀಲರು, ಸಿದ್ದು ಪೊಲೀಸ್ ಪಾಟೀಲ್, ಶರಣಗೌಡ ಬಸಾಪುರ, ನಿಂಗಪ್ಪ ಕಮತರ್,ರಫಿ ಮಂಡ್ಲಗಿರಿ ಮತ್ತು ತಾಲೂಕಿನ ಎಲ್ಲಾ ಮುಖಂಡರು  ಭಾಗಿಯಾಗಿದ್ದರು.