ಮಹಿಳಾ ಸಂಚಾರಿ ನಿಯಂತ್ರಕರಿಗೆ ಸನ್ಮಾನ
ಸಂಜೆ ವಾಣಿ ವಾರ್ತೆ 10/8/2024
ಕೊಟ್ಟೂರು:   ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹೊಸಪೇಟೆ ವಿಭಾಗ ಕೂಡ್ಲಿಗಿ ಘಟಕ ಕೊಟ್ಟೂರು ಬಸ್ ನಿಲ್ದಾಣದ ಸಾರಿಗೆ ಸಂಚಾರಿ ಮಹಿಳಾ ನಿಯಂತ್ರಕರಾಗಿ ಭಾಗ್ಯಮ್ಮ ಮತ್ತು ಮಹಾಲಕ್ಷ್ಮಿ  ಸೇವೆ ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ಹಸಿರು ಹೊನಲು ಸೇವಾ ಸಂಸ್ಥೆ ವತಿಯಿಂದ ಅವರಿಗೆ ಶಾಲು ಹೊದಿಸಿ ಹಾರ ಹಾಕಿ ಸನ್ಮಾನ ಮಾಡಲಾಯಿತು.
        ಇವರಿಬ್ಬರು ಅನೇಕ ವರ್ಷಗಳಿಂದ ಕಂಡಕ್ಟರ್ ಆಗಿ ಸೇವೆ ಸಲ್ಲಿಸಿದ್ದರು. ನಂತರ ಪದನ್ನೋತಿ ಹೊಂದಿ ಕೊಟ್ಟೂರು ಬಸ್ ನಿಲ್ದಾಣದ ಸಾರಿಗೆ ಸಂಚಾರಿ ಮಹಿಳಾ ನಿಯಂತ್ರಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
 ಸಂಚಾರಿ ನಿಯಂತ್ರಕ ದುರುಗಪ್ಪ ಅವರನ್ನು ಸಂಪರ್ಕಿಸಿದಾಗ
ಇದಕ್ಕೂ ಮುಂಚೆ ಸುಮಾರು 1 ವರ್ಷಗಳ ಕಾಲ  ಪಾಸ್‌ ವಿಭಾಗ ಮಹಿಳಾ ಸಂಚಾರಿ  ನಿಯಂತ್ರಣಕರಾಗಿ ಬೊಮ್ಮಗಟ್ಟ ರತ್ನಮ್ಮ ಅವರು ಸೇವೆ ಸಲ್ಲಿಸಿದ್ದಾರೆ ಎಂದು ಪತ್ರಿಕೆಗೆ ತಿಳಿಸಿದರು.