ಜೀವನದ ಸರ್ವತೋಮುಖ ಬೆಳವಣಿಗೆಗೆ ಯೋಗ ಸಹಕಾರಿಪತಂಜಲಿ ಯೋಗ ಸಮಿತಿಯ ರಾಜ್ಯ ಪ್ರಭಾರಿ ಭವರಲಾಲ್ ಅಭಿಪ್ರಾಯ
ಸಂಜೆವಾಣಿ ವಾರ್ತೆ
ಹೊಸಪೇಟೆ: ಸದೃಢ ದೇಹದಂತೆ ಸದೃಢ ಭಾರತ ನಿರ್ಮಾಣ ದೇಶಿಯ ಪ್ರತಿ ನಾಗರಿಕರ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪ್ರಯತ್ನಶೀಲರಾಗಬೇಕು ಎಂದು ಪತಂಜಲಿ ಯೋಗ ಸಮಿತಿಯ ರಾಜ್ಯ ಪ್ರಭಾರಿ ಹಾಗೂ ಅಂತರರಾಷ್ಟ್ರೀಯ ಯೋಗ ಗುರು ಭವರಲಾಲ್ ಆರ್ಯ ಹೇಳಿದರು.
ನಗರದ ಜಗದ್ಗುರು ಶ್ರೀ ಕೊಟ್ಟೂರುಸ್ವಾಮಿ ಸಂಸ್ಥಾನಮಠದಲ್ಲಿ 25 ದಿನಗಳ ಕಾಲ ನಡೆಸಿದ ಸಹ ಶಿಕ್ಷಕರ ಯೋಗ ತರಬೇತಿ ಕಾರ್ಯಕ್ರಮದ ಸಮಾರೋಪದಲ್ಲಿ ಶನಿವಾರ ಮಾತನಾಡಿದರು. ಸನಾತನ ಧರ್ಮ ಹೊಂದಿದ ಭಾರತ, ಸಂಸ್ಕøತಿ – ಸಂಪ್ರದಾಯಗಳ ತಳಹದಿಯ ಮೇಲೆ ಮಾನವೀಯ ಧರ್ಮ ಕಟ್ಟುವ ಆಶಾದೀವಿಗೆ ಆಗಿದೆ. ಅಂಧ ವಿಚಾರಗಳೊಂದಿಗೆ ದೇಶವನ್ನು ಛಿದ್ರಿಸುವ ಕನಸು ಹೊತ್ತವರಿಗೆ ನಮ್ಮ ಸಂಘಟನೆ ಹಾಗೂ ಸ್ವಾಸ್ಥ್ಯ ಸಮಾಜ ರೂಪಿಸುವ ಮೂಲಕ ಉತ್ತರಿಸಬೇಕಿದೆ ಎಂದರು.
25 ದಿನಗಳ ತರಬೇತಿ ಶಿಬಿರ ಯುವ ಪೀಳಿಗೆಯ ವಿಕಸನಕ್ಕೆ ನಾಂದಿಯಾಗಬೇಕಿಗಿದ್ದು, ತರಬೇತಿ ಪಡೆದವರು ಜವಾಬ್ದಾರಿ ಹಾಗೂ ಇಚ್ಛಾಶಕ್ತಿಯೊಂದಿಗೆ ಕಾರ್ಯದ ಸಾರ್ಥಕಗೊಳಿಸಬೇಕು. ನಮ್ಮ ಜೀವನದ ಸರ್ವತೋಮುಖ ಬೆಳವಣಿಗೆಗೆ ಯೋಗ ಸಹಕಾರಿಯಾಗಿದೆ. ಹೊಸಪೇಟೆಯಲ್ಲಿ ಭವ್ಯವಾದ ಯೋಗ ಭವನ ನಿರ್ಮಾಣ ಸಾಧ್ಯವಿದ್ದು, ಇಲ್ಲಿರುವ ಎಲ್ಲರೂ ಮನಸ್ಸು ಮಾಡಿದರೆ ಬರುವ ಗುರುಪೌರ್ಣಿಮೆಗೆ ಗುರುಕಾಣಿಕೆಯ ಪ್ರತೀಕವಾಗುವುದರಲ್ಲಿ ಆಶ್ಚರ್ಯವಿಲ್ಲ ನಾವು ನಗರದ 35 ವಾರ್ಡ್‍ಗಳಲ್ಲಿಯೂ ಒಂದೊಂದು ಯೋಗ ಕೇಂದ್ರಗಳನ್ನು ಆರಂಭಿಸಿ, ಯೋಗ ಹೊಸಪೇಟೆ ನಿರ್ಮಾಣ ಮಾಡಬೇಕಿದೆ, 35 ಪ್ರಭಾರಿಗಳನ್ನು ಗುರುತಿಸುವ ಕಾರ್ಯ ಆದಷ್ಟು ಬೇಗ ಆಗಲಿ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ವಿಜಯನಗರ ಜಿಲ್ಲಾ ಅಧ್ಯಕ್ಷರಾದ ಕೆ.ಸತ್ಯನಾರಾಯಣ ಮಾತನಾಡಿ, ಯೋಗ ಕೇವಲ ದೈಹಿಕ ಸ್ವಾಸ್ಥ್ಯ ಮಾತ್ರವಲ್ಲದೇ ಮಾನಸಿಕ ಸ್ವಾಸ್ಥ್ಯವೂ ಕಾಪಾಡುತ್ತಿದ್ದು, ಮನುಷ್ಯ ನಿರೋಗಿಯಾಗಿರಲು ಅತ್ಯಂತ ಉಪಯುಕ್ತವಾಗಿದೆ. ಸಮುದಾಯದಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲು ಮಾಧ್ಯಮವೂ ಸದಾಪ್ರಯತ್ನಶೀಲವಾಗಿದೆ ಎಂದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಯೋಗ ಅಧ್ಯಯನ ಕೇಂದ್ರದ ಮುಖ್ಯಸ್ಥರೂ, ವಿಜಯನಗರ ಜಿಲ್ಲಾ ಉಸ್ತುವಾರಿಯಾಗಿದ್ದ ಡಾ.ಎಫ್.ಟಿ.ಹಳ್ಳಿಕೇರಿಯವರನ್ನು ಪತಂಜಲಿ ಯೋಗ ಸಮಿತಿಯ ರಾಜ್ಯ ಸಭೆಯ ಸದಸ್ಯರನ್ನಾಗಿ ಅಂತರರಾಷ್ಟ್ರೀಯ ಯೋಗ ಗುರು ಭವರಲಾಲ್ ಆರ್ಯ ಘೋಷಿಸಿದರು.
ಶಿಬಿರಾರ್ಥಿ ಪತ್ರಕರ್ತ ಬಾಲಕೃಷ್ಣ, ಸುಜಾತಾ ಕರ್ಣಂ, ಡಾ.ಮಲ್ಲಿಕಾರ್ಜುನ ಯೋಗಶಿಬಿರದ ತಮ್ಮ ಅಭಿಪ್ರಾಯ ಹಂಚಿಕೊಂಡರು. ಯೋಗ ಶಿಕ್ಷಕ ಹಾಗೂ ಪತಂಜಲಿ ಯೋಗ ಸಮಿತಿಯ ರಾಜ್ಯ ಸಮಿತಿ ಸದಸ್ಯರೂ ಆಗಿರುವ ಗದಗ ಮತ್ತು ವಿಜಯನಗರ ಜಿಲ್ಲೆಗಳ ಉಸ್ತುವಾರಿ ಡಾ.ಎಸ್.ಬಿ.ಹಂದ್ರಾಳ ಸಮಾರೋಪಕ್ಕೂ ಮುನ್ನ ಯೋಗದ ಮಹತ್ವÀದ ಜೊತೆಗೆ ಯೋಗಾಭ್ಯಾಸ ತಿಳಿಸಿ ಕೊಟ್ಟರು. ಶಿಬಿರಾರ್ಥಿಗಳಿಗೆ ಅಭಿನಂದನಾ ಪತ್ರ ವಿತರಿಸಲಾಯಿತು.
ಸನ್ಮಾನ: ದಿನವಹಿ ಸಮಾಚಾರಗಳನ್ನು ಸಾರ್ವಜನಿಕರಿಗೆ ಸಕಾಲಕ್ಕೆ ತಿಳಿಸುವ ಸ್ಥಳೀಯ ಪತ್ರಕರ್ತರಾದ ಕೆ.ಸತ್ಯನಾರಾಯಣ, ಕೆ.ಲಕ್ಷ್ಮಣ, ವೆಂಕಟೇಶ, ಶ್ರೀಮತಿ ರೇಖಾ, ಬಾಲಕೃಷ್ಣ, ಅನೂಪ್, ಬಾಬುಕುಮಾರ, ವೀರೇಂದ್ರ ನಾಗಲದಿನ್ನಿ, ಬಿ.ಎಚ್.ಎಸ್.ರಾಜು ಇತರರನ್ನು ಅಂತರರಾಷ್ಟ್ರೀಯ ಯೋಗ ಗುರು ಭವರ್ಲಾಲ್ ಆರ್ಯ ಇದೇ ಸಂದರ್ಭ ಸನ್ಮಾನಿಸಿದರು.
ಯುವ ಭಾರತ ಜಿಲ್ಲಾ ಪ್ರಭಾರಿ ವೀರೇಶ್, ಹಿರಿಯ ಯೋಗ ಸಾಧಕರಾದ ಬಾಲಚಂದ್ರ ಶರ್ಮಾ, ಕೃಷ್ಣ ನಾಯ್ಕ್, ಮಂಗಳಕ್ಕ, ಅನಂತ ಜೋಷಿ, ಶ್ರೀನಿವಾಸ ಮಂಚಿಕಟ್ಟ, ಶ್ರೀರಾಮ, ಪ್ರಮೀಳಮ್ಮ, ಜಿಲ್ಲಾ ಮಹಿಳಾ ಮುಖ್ಯಸ್ಥೆ ಕೂಡ್ಲಿಗಿಯ ಗೌರಮ್ಮ, ವೀರೇಶ್, ಚಂದ್ರಿಕಾ ಸೇರಿದಂತೆ ನಿರಂತರ ಕೇಂದ್ರಗಳ ಸಂಚಾಲಕರು ಇದ್ದರು. ಯೋಗ ಶಿಭಿರಾರ್ಥಿ ಕೆ.ಸುಮ ಪ್ರಾರ್ಥಿಸಿದರು. ಪತಂಜಲಿ ಯೋಗ ಸಮಿತಿ ಯುವ ಭಾರತ ರಾಜ್ಯ ಪ್ರಭಾರಿ ಕಿರಣ್ ಕುಮಾರ ಕಾರ್ಯಕ್ರಮ ನಿರ್ವಹಿಸಿದ್ದರು,