ಜನ ಸೇವಾ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನೋಟ್ ಬುಕ್ ವಿತರಣೆ
ಸಂಜೆವಾಣಿ ವಾರ್ತೆ 
ಹಗರಿಬೊಮ್ಮನಹಳ್ಳಿ. ಆ.10 ತಾಲೂಕಿನ ಹಂಪಾಪಟ್ಟಣ ಗ್ರಾಮದಲ್ಲಿ ಜನ ಸೇವಾ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್ ವಿತರಣಾ ಕಾರ್ಯಕ್ರಮ ಶುಕ್ರವಾರ  ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಾಣ ಅನಿಲ್ ಕುಮಾರ್ ಭಾಗವಹಿಸಿ ಮಾತನಾಡಿ ಸಂಘ ಸಂಸ್ಥೆಗಳು ನೀಡುವ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಸದುಪಯೋಗ ಪಡೆದುಕೊಳ್ಳುವ ಮೂಲಕ ತಂದೆ ತಾಯಿಗಳಿಗೆ ಮತ್ತು ಸಮಾಜಕ್ಕೆ ಒಳ್ಳೆಯ ಹೆಸರನ್ನು ತರಬೇಕು. ಕಠಿಣ ಶ್ರಮದೊಂದಿಗೆ ಉನ್ನತ ಹುದ್ದೆಗಳನ್ನು ಪಡೆಯುವ ಮೂಲಕ ಗ್ರಾಮಕ್ಕೆ ಹೆಸರು ತರುವಂತ ಕೆಲಸವಾಗಬೇಕು. ಜನ ಸೇವಾ ಟ್ರಸ್ಟ್ ಸಮಾಜಮುಖಿ ಕಾರ್ಯ ಎಲ್ಲರಿಗೂ ಮಾದರಿಯಾಗಲಿ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ರಾಜಕಾರಣಿ ಕನ್ನಳ್ಳಿ ಚಂದ್ರಶೇಖರ್ ಮಾತನಾಡಿ ಶಾಲೆ ಕಲಿಯಬೇಕೆಂಬ ವಿದ್ಯಾರ್ಥಿಗಳಿಗೆ ಕೆಲವು ಬಾರಿ ಪುಸ್ತಕಗಳು ಖರೀದಿ ಮಾಡಲು ಹಣ ಇರುವುದಿಲ್ಲ. ಅಂತಹ ವಿದ್ಯಾರ್ಥಿಗಳಿಗೆ ಜನ ಸೇವಾ ಟ್ರಸ್ಟ್ ನವರು ಸಮಾಜ ಕಳಕಳಿ ಇಟ್ಟುಕೊಂಡು ವಿದ್ಯಾರ್ಥಿಗಳ ಭವಿಷ್ಯ ಉಜ್ವಲ ವಾಗಲಿ ಎಂದು ಉಚಿತವಾಗಿ ವಿತರಿಸುತ್ತಿರುವುದು ಶ್ಲಾಘನೀಯ ಎಂದರು. 
ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾ ಪಂ ಅಧ್ಯಕ್ಷ ನಾಗರಾಜ್ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ನೆರಳುಪತ್ರಿಕೆಯ ಸಂಪಾದಕ  ಬುಡ್ಡಿ ಬಸವರಾಜ್ ಪ್ರಸ್ತಾವಿಕ  ಮಾತನಾಡಿ ಸತತವಾಗಿ ಮೂರು ವರ್ಷಗಳಿಂದ ಜನ ಸೇವಾ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್ ವಿತರಣೆ ಮಾಡುತ್ತಾ ಬಂದಿದೆ. ನಾವು ಕಲಿಯುವ ಸಂದರ್ಭದಲ್ಲಿ ಒಂದು ಪುಸ್ತಕಕ್ಕೆ ಪರದಾಡುವಂಥ ಪರಿಸ್ಥಿತಿ ಇತ್ತು. ಈಗ ಹಲವಾರು ಸಂಘ ಸಂಸ್ಥೆಯವರು ಸರ್ಕಾರದವರು ಸಾಮಗ್ರಿಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ. ಇದರ ಉಪಯೋಗವನ್ನು ಪಡೆದು ಒಳ್ಳೆಯ ವಿದ್ಯಾವಂತರಾಗಿ ಸಮಾಜಕ್ಕೆ ಮತ್ತು ಗ್ರಾಮಕ್ಕೆ ಹೆಸರು ತರುವಂತರಾಗಿರಿ ಎಂದರು.
 ಈ ಸಂದರ್ಭದಲ್ಲಿ . ಎಂ ಶಿವರಾಜ್. ಕಿಟಕಿ ರಾಮಣ್ಣ . ಕಾನಿಪ ಅಧ್ಯಕ್ಷ ಉಮಾಪತಿ ಶೆಟ್ಟರ್. ಸಿ ಶಿವಾನಂದ .ಸಿ.ಎಲ್ ಕುಮಾರ್. ಎನ್ ನಾಗರಾಜ. ತಿಪ್ಪೇಗುಂಡಿ ಮಂಜುನಾಥ .ಸಿದ್ದರ ಗಾಳಪ್ಪ. ಜಿ ಅಂಜಿನಪ್ಪ. ಕೂರವರ ಸೋಮಣ್ಣ. ಜಿ ಶ್ರೀನಿವಾಸ ಶೆಟ್ಟಿ. ಯು ಕೇಶವಮೂರ್ತಿ ವಿ ಗೋವಿಂದ್ ಮಾಲ್ವಿ ಕೃಷ್ಣಪ್ಪ.. ಹರೀಶ್ ರಾಜ್ ನವೋದಯ ಸಂಘದ ಅಧ್ಯಕ್ಷ ವಿ. ಹನುಮಂತ.. ಕೆ ಕಡ್ಳೆಪ್ಪ. ಪೂಜಾರ್ ಸೋಮನಾಥ. ಗೊಂದಲಿ ರಾಘವೇಂದ್ರ .ಜಿ. ಫಕೀರಪ್ಪ. ಇತರರು ಇದ್ದರು.
ಬಾರಿಕರ ಹುಲುಗಪ್ಪ ಕಾರ್ಯಕ್ರಮ ನಿರೂಪಿಸಿದರು
ಕಾರ್ಯಕ್ರಮದಲ್ಲಿ ಒಟ್ಟು 240 ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಯಿತು.
One attachment • Scanned by Gmail