ಸರ್ಕಾರದ ರೈತ ವಿರೋಧಿ ನೀತಿ ವಿರುದ್ದಆ. 15 ರಂದು ರೈತರಿಂದ ಟ್ರಾಕ್ಟರ್ ಱ್ಯಾಲಿ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಅ,10 ದೇಶದ ಬೆನ್ನೆಲುಬು ರೈತರು ಎನ್ನುವ ಸರ್ಕಾರದಿಂದ  ರೈತರಗೆ ಇನ್ನು ಸ್ವಾತಂತ್ರ್ಯ ಸಿಕ್ಕಿಲ್ಲ. ಅದಕ್ಕಾಗಿ ಆಗಷ್ಟ್ 15 ರಂದು ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳ ವಿರುದ್ದ  ಟ್ರಾಕ್ಟರ್ ಱ್ಯಾಲಿ ಮಾಡಲಿದೆಂದು  ರಾಜ್ಯ ರೈತ ಸಂಘಟನೆಗಳ ಒಕ್ಕೂಟದಿಂದ ಟ್ರಾಕ್ಟರ್ ಱ್ಯಾಲಿ ಮಾಡಲಿದೆಂದು ಒಕ್ಕೂಟದ ಮುಖಂಡ ಕುರೂಬರು ಶಾಂತಕುಮಾರ್ ಹೇಳಿದ್ದಾರೆ.
ಅವರು ಇಂದು‌ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಕೃಷಿ ಪಂಪ್ ಸೆಟ್ ಗಳಿಗೆ   ಆಧಾರ ಲಿಂಕ್ ಮಾಡಬೇಡಿ,  ಅಕ್ಕಿ ರಫ್ತು ನಿಯಮವನ್ನು ಸಡಿಸಲಿಸಬೇಕು. ಕನಿಷ್ಟ ಬೆಂಬಲ ಬೆಲೆ ನಿಗಧಿಗೆ  ಸ್ವಾಮಿನಾಥನ್ ವರದಿಯಂತೆ ಜಾರಿಗೆ ತರಬೇಕು.
ಈ ಕೆಲಸ ಆಗಿಲ್ಲ. ಈಗಿನ  ರಸಗೊಬ್ಬರ, ಕ್ರಿಮಿನಾಶಕಗಳ ಬೆಲೆ ಏರಿಕೆ, ಉತ್ಪಾದನಾ ವೆಚ್ಚ ಹೆಚ್ಚಿದ್ದರೂ ಬೆಳೆಗಳ  ಬೆಲೆ ಹೆಚ್ಚಳವಾಗದೆ ರೈತರಲ್ಲಿ ಸಂಕಷ್ಟದಲ್ಲಿ ಇರುವುದರಿಂದ ಸ್ವಾತಂತ್ರ್ಯ ದಿನದಂದು ಈ ಪ್ರತಿಭಟನೆ ಭಟನೆ ಹಮ್ಮಿಕೊಂಡಿದೆಂದು ತಿಳಿಸಿದರು. 
ಶರಣಪ್ಪ ಅವರು ಮಾತನಾಡಿ ಅಂದು ಬೆಳಿಗ್ಗೆ 11 ಗಂಟೆಗೆ ಟ್ರಾಕ್ಟರ್ ಱ್ಯಾಲಿ ಮಾಡಲಿದೆ. ನಗರದ ಗಡಗಿ ಚೆನ್ನಪ್ಪ ವೃತ್ತದಿಂದ ಜಿಲ್ಲಾಡಳಿತ ಭವನಕ್ಕೆ ತೆರಳಲಿದೆಂದು ತಿಳಿಸಿದರು.
ತುಂಗಭದ್ರ ಜಲಾಶಯದಲ್ಲಿನ ಹೂಳಿನ ಸಮಸ್ಯೆ ನಿವಾರಣೆಗೆ ಸಮಾನಾಂತರ ಜಲಾಶಯ ಮಾಡಬೇಕು ಈ ಬಗ್ಗೆ ಬರೀ ಹೇಳಿಕೆಗಳಿಂದ ಉಪಯೋಗವಿಲ್ಲ ಎಂದರು.
ಸುದ್ದಿಗೋಷ್ಟಿಯಲ್ಲಿ ಮುಖಂಡರುಗಳಾದ  ಲೇಪಾಕ್ಷಿ ಅಸುಂಡಿ, ಲಕ್ಷ್ಮೀದೇವಿ, ಶ್ರಿನಿಚಾಸ್ ಪಾಳ್ಯ, ಕೊಟ್ರೇಶ್ ಯಾದಗಿರಿ ಮೊದಲಾದವರು ಇದ್ದರು.