ನಗರದಲ್ಲಿ ಮೌನೇಶ್ವರರ ಪುರಾಣ ಪ್ರವಚನ ಆರಂಭ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಅ,10- ನಗರದ ಕಾಳಮ್ಮ ಬೀದಿಯಲ್ಲಿರುವ ಶ್ರೀ ಕಾಳಿಕಾ ಕಮಟೇಶ್ವರ ದೇವಸ್ಥಾನದಲ್ಲಿ 25ನೇ ವರ್ಷದ ವಿಶ್ವಕರ್ಮ ಶ್ರೀ ಸದ್ಗುರು ತಿಂತನಿ ಮೌನೇಶ್ವರರ ಪುರಾಣ ಪ್ರವಚನ  ಪ್ರಾರಂಭವಾಗಿದೆ.
ವಿಶ್ವಕರ್ಮ ಸಮಾಜದ ಮುಖಂಡರಾದ ವಿದ್ಯಾಪತಿ ಆಚಾರಿ, ವೆಂಕಟೇಶ್ ಬಡಿಗೇರ, ವಿರಾಚಾರಿ, ನಾರಾಯಣ ಅಥಣಿ ಆಚಾರಿ, ಗಣೇಶ್ ಆಚಾರಿ, ಮೌನೇಶ್ ಎರಂಗಳಿ, ಪ್ರಕಾಶ್ ಪತ್ತಾರ್ ಹಾಗೂ ವಿಶ್ವಕರ್ಮ ಸಮಾಜದ ಇನ್ನಿತರ ಮುಖಂಡರು ಭಾಗವಸಿದ್ದರು.
ದೇವಲಾಪುರದ ಶಿವಾನಂದ ಶಾಸ್ತ್ರಿಗಳು ಪ್ರವಚನ ನೀಡುತ್ತಿದ್ದಾರೆ. ಈ ತಿಂಗಳ 19 ವರೆಗೆ ಪ್ರತಿದಿನ ಸಂಜೆ 6 ರಿಂದ 8.30 ರ ವರೆಗೆ ನಡೆಯುತ್ತದೆ.
ನಾಳೆ ಆ ,11 ರಂದು ಬೆಳಿಗ್ಗೆ 9 ಕ್ಕೆ ಮೌನೇಶ್ವರರ ಭಾವಚಿತ್ರದ ಮೆರವಣಿಗೆ ಹಮ್ಮಿಕೊಂಡಿದೆ. ನಂತರ ಪ್ರಸಾದ ವ್ಯವಸ್ಥೆ ಮಾಡಿದೆ. ಸಾರ್ವಜನಿಕರು ಭಾಗವಹಿಸಿ ಮೌನೇಶ್ವರರ ಕೃಪೆಗೆ ಪಾತ್ರರಾಗಲು ವೆಂಕಟೇಶ್ ಬಡಿಗೇರ ಅವರು  ಕೋರಿದ್ದಾರೆ.