ಬಸ್-ಲಾರಿ ಡಿಕ್ಕಿ; ಓರ್ವ ವಿದ್ಯಾರ್ಥಿ ಗಂಭೀರ
ಕುಂದಾಪುರ: ಖಾಸಗಿ ಬಸ್ಸಿಗೆ ಲಾರಿಯೊಂದು ಹಿಂದಿನಿಂದ ರಭಸವಾಗಿ ಬಂದು ಢಿಕ್ಕಿ ಹೊಡೆದ ಘಟನೆ ರಾಷ್ಟ್ರೀಯ ಹೆದ್ದಾರಿ ೬೬ ರ ತಲ್ಲೂರಿನ ಪ್ರವಾಸಿ ಹೋಟೆಲ್ ಎದುರು ಆ.೧೦ರ ಶನಿವಾರ ಬೆಳಗ್ಗೆ ಸಂಭವಿಸಿದೆ.
ಅಪಘಾತದ ಪರಿಣಾಮ ಬಸ್ಸಿಲ್ಲಿದ್ದ ಓರ್ವ ವಿದ್ಯಾರ್ಥಿ ಗಂಭೀರ ಗಾಯಗೊಂಡಿದ್ದು, ೭-೮ ಮಂದಿ ವಿದ್ಯಾರ್ಥಿಗಳ ಸಹಿತ ಹಲವರಿಗೆ ಗಾಯವಾಗಿದೆ. ಲಾರಿಯ ಚಾಲಕ, ನಿರ್ವಾಹಕ ಕೂಡಾ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಸ್ ಬೈಂದೂರಿಂದ ಕುಂದಾಪುರಕ್ಕೆ ಬರುತ್ತಿತ್ತು. ಅಪಘಾತದ ತೀವ್ರತೆಗೆ ಬಸ್ಸಿನ ಹಿಂಬದಿ ಹಾಗೂ ಲಾರಿಯ ಮುಂಭಾಗ ನಜ್ಜುಗುಜ್ಜಾಗಿದೆ.