ಜಯನಗರ ಶಿವಮಂದಿದಲ್ಲಿ ಶರಣಬಸವೇಶ್ವರರ ತೊಟ್ಟಿಲು ಕಾರ್ಯಕ್ರಮ
ಕಲಬುರಗಿ,ಆ.೧೦-ಶ್ರಾವಣ ಮಾಸ ನಿಮಿತ್ತ ಜಯನಗರದ ಶಿವಮಂದಿರದಲ್ಲಿ ಒಂದು ತಿಂಗಳು ಕಲಬುರಗಿಯ ಆರಾಧ್ಯ ದೈವ ಮಹಾದಾಸೋಹಿ ಶರಣಬಸವೇಶ್ವರ ಪುರಾಣ ಕಾರ್ಯಕ್ರಮದ ೭ ನೆಯ ದಿನವಾದ ಆ. ೧೧ ರಂದು ರವಿವಾರ ರಾತ್ರಿ ೮ ಗಂಟೆಗೆ ಶರಣಬಸವೇಶ್ವರರ ತೊಟ್ಟಿಲು ಕಾರ್ಯಕ್ರಮ ನಡೆಯಲಿದೆ ಎಂದು ಜಯನಗರ ಶಿವ ಮಂದಿರ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಅವರು ತಿಳಿಸಿದ್ದಾರೆ.
ಪುರಾಣ ಪ್ರಾರಂಭ ಯಶಸ್ವಿಯಾಗಿ ೬ ದಿನಗಳು ಕಳೆದಿವೆ. ಪುರಾಣ ಪಂಡಿತ ಮಲ್ಲಿಕಾರ್ಜುನ ಶಾಸ್ತ್ರೀ ನಿತ್ಯ ಪುರಾಣ ನಡೆಸಿಕೊಡುತ್ತಿದ್ದಾರೆ. ಅಪಾರ ಸಂಖ್ಯೆಯಲ್ಲಿ ಭಕ್ತರು, ಸಾರ್ವಜನಿಕರು ಶಿವಮಂದಿರಕ್ಕೆ ಆಗಮಿಸಿ ಪುರಾಣ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಪುರಾಣದ ನಂತರ ಭಕ್ತರು ನೀಡಿದ ದೇಣಿಗೆಯಿಂದ ದಿನ ನಿತ್ಯ ಪ್ರಸಾದ ದಾಸೋಹ ಹಮ್ಮಿಕೊಳ್ಳಲಾಗುತ್ತಿದೆ. ಶ್ರೀ ಶರಣಬಸವೇಶ್ವರರ ಜೀವನ ಚರಿತ್ರೆ ಕಥಾ ರೂಪದಲ್ಲಿ ಪ್ರಾರಂಭ ವಾಗಿದ್ದು, ರವಿವಾರ ಬಾಲಕ ಶರಣಬಸವೇಶ್ವರರ ತೊಟ್ಟಿಲು ತೂಗುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದು ಭಕ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು ಎಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.