ಮಣಿಪಾಲ್ ಆಸ್ಪತ್ರೆಯಿಂದ ಯಶಸ್ವಿ ಮೂತ್ರಪಿಂಡ ಚಿಕಿತ್ಸೆ
ಸಂಜೆವಾಣಿ ನ್ಯೂಸ್
ಮೈಸೂರು: ಆ.10:- ಒಂದು ಪ್ರಮುಖ ರಕ್ತನಾಳ ಮತ್ತು ಲಿಂಫ್ ನೋಡ್ ಒಳಗೊಂಡಿರುವ 3 ನೇ ಹಂತದ ಮೂತ್ರಪಿಂಡದ ಕ್ಯಾನ್ಸರ್‍ಗೆ ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಚಿಕಿತ್ಸೆ ನೀಡಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಮಣಿಪಾಲ ಆಸ್ಪತ್ರೆಯ ಆಂಡ್ರೊಲಜಿ ಮತ್ತು ಕಿಡ್ನಿ ಟ್ರಾನ್ಸ್‍ಪ್ಲಾಂಟ್ ಸರ್ಜನ್ ಮತ್ತು ಯುರಾಲಜಿ ಸಲಹೆಗಾರರಾದ ಡಾ.ಟಿ.ಪಿ.ದಿನೇಶ್ ಕುಮಾರ್ ಮಾತನಾಡಿ, ಮಣಿಪಾಲ್ ಆಸ್ಪತ್ರೆಯು ಇತ್ತೀಚೆಗೆ 71 ವರ್ಷದ ರೋಗಿಯಲ್ಲಿ ದೊಡ್ಡ ಗಾತ್ರದ ಟ್ಯೂಮರ್ ಥ್ರಂಬಸ್ ಮತ್ತು ಇನ್ಫಿರಿಯರ್ ವೆನಾ ಕ್ಯಾವಾ (ಕಾಲುಗಳು ಮತ್ತು ಹೊಟ್ಟೆಯಿಂದ ಹೃದಯಕ್ಕೆ ರಕ್ತವನ್ನು ಹಿಂದಿರುಗಿಸುವ ದೊಡ್ಡ ರಕ್ತನಾಳ) ಜೊತೆಗೆ ಕಿಡ್ನಿ ಕ್ಯಾನ್ಸರ್‍ನ ಸಂಕೀರ್ಣ ಪ್ರಕರಣದ ಬಗ್ಗೆ ಜಾಗೃತಿ ಮೂಡಬೇಕಿದೆ ಎಂದರು.
ಈ ಅಪರೂಪದ ಮತ್ತು ಕಷ್ಟಕರವಾದ ಪ್ರಕರಣಕ್ಕೆ ಅನುಭವಿ ತಜ್ಞರ ತಂಡವು ಒಟ್ಟಾಗಿ ಕೆಲಸ ಮಾಡಿ, ಆ ಮೂಲಕ ರೋಗಿಗೆ ಹೊಸ ಜೀವನವನ್ನು ನೀಡಲಾಗಿದೆ. ಮೈಸೂರಿನ 71 ವಯಸ್ಸಿನ ಶ್ರೀ ಚಂದ್ರು (ಹೆಸರು ಬದಲಾಯಿಸಲಾಗಿದೆ) ಮೂತ್ರದಲ್ಲಿ ರಕ್ತ (ವೈದ್ಯಕೀಯವಾಗಿ ಹೆಮಟೂರಿಯಾ ಎಂದು ಕರೆಯಲಾಗುತ್ತದೆ) ಕಾಣಿಸಿಕೊಂಡು ಕಳೆದ ಎರಡು ತಿಂಗಳುಗಳಿಂದ ಸಾಕಷ್ಟು ತೂಕ ಕಳೆದುಕೊಂಡಿದ್ದರಿಂದ ಅಧಿಕ ರಕ್ತದೊತ್ತಡ ಮತ್ತು ಶ್ವಾಸಕೋಶದ ಕಾಯಿಲೆಗೆ ತುತ್ತಾಗಿದ್ದರು. ಪರೀಕ್ಷೆಯ ಸಮಯದಲ್ಲಿ ವೈದ್ಯರು ಅವರ ಬಲಭಾಗದ ಪಾಶ್ರ್ವದಲ್ಲಿ ದೊಡ್ಡ ಗಾತ್ರದ ಟ್ಯೂಮರ್ ಅನ್ನು ಕಂಡುಹಿಡಿದರು.
ಬಳಿಕ ಯುರೋಲಾಜಿ ಕನ್ಸಲ್ಟೆಂಟ್ ಗಳಾಸ ಡಾ.ಕೆ.ಎ.ತಿಮ್ಮಯ್ಯ, ಡಾ.ಉಪೇಂದ್ರ ಶೆಣೈ, ಡಾ.ಪೈ.ಎಚ್. ವಾಸುದೇವ, ಚಂದ್ರು ಅವರ ನೇತೃತ್ವದ ತಂಡ ಯಶಸ್ವಿಯಾಗಿ ಚಿಕಿತ್ಸೆ ನಡೆಸಿದೆ ಎಂದು ಹೇಳಿದರು.