ಪುಡ್ ಪಾಯಿಸನ್- ೨೦ ವಿದ್ಯಾರ್ಥಿಗಳು ಅಸ್ವಸ್ಥ
ಕೋಲಾರ,ಆ,೧೦:ವಿದ್ಯಾರ್ಥಿ ನಿಲಯದಲ್ಲಿ ಶುಕ್ರವಾರ ಬೆಳಿಗ್ಗೆ ನೀಡಿದ್ದ ತಿಂಡಿ ತಿಂದು ೨೦ ವಿದ್ಯಾರ್ಥಿಗಳು ಪುಡ್ ಪಾಯಿಸನ್ ಅಗಿ ಅಸ್ವಸ್ತಗೊಂಡಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ತಾಲ್ಲೂಕಿನ ವೇಮಗಲ್ ಹೋಬಳಿಯ ಅಮ್ಮನಲ್ಲೂರು ಡಾ.ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಸರ್ಕಾರಿ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ನಡೆದಿದೆ.
ವಿದ್ಯಾರ್ಥಿಗಳು ಅಸ್ವಸ್ತಗೊಂಡ ಮಾಹಿತಿ ಬಂದ ಕೊಡಲೇ ಸಮಾಜ ಕಲ್ಯಾಣ ಇಲಾಖೆಯ ನಿರ್ದೆಶಕ ಶ್ರೀನಿವಾಸ್ ಹಾಗೂ ಇತರೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ.
ಶುಕ್ರವಾರ ಬೆಳಿಗ್ಗೆ ಅಡುಗೆಯ ಸಿಬ್ಬಂದಿಗಳು ಮಾಡಿದ್ದ ದೋಸೆ ಹಾಗೂ ಜಮೂನ್ ಮಧ್ಯಾಹ್ನವು ತಿಂದ ನಂತರ ವಿದ್ಯಾರ್ಥಿಗಳು ಅಸ್ಥವ್ಯಸ್ತ ಗೊಂಡರು. ವಿದ್ಯಾರ್ಥಿಗಳು ಸೇವಿಸಿದ್ದ ದೋಸೆಯನ್ನು ಆಹಾರದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು. ದೋಸೆಯ ಹಿಟ್ಟು ಮೂರು ದಿನದ್ದು ಅಗಿತ್ತು, ದೋಸೆಗೆ ಹಳೆಯ ಎಣ್ಣೆಯನ್ನು ಬಳಿಸಿದ್ದರು. ಜಮೂನಿಗೆ ಇರುವೆಗಳು ತುಂಬಿದ್ದವು. ಇದರಿಂದ ಆಹಾರವು ಕೆಟ್ಟು ಹೋಗಿ ಪುಡ್ ಪಾಯಿಸನ್ ಅಗಿದ್ದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳಿಗೆ ಹೊಟ್ಟೆನೋವು, ವಾಂತಿ-ಭೇದಿಗಳಾಗಿ ದೇಹದಲ್ಲಿ ಶಕ್ತಿನಿತ್ರಾಣಗೊಂಡ ಹಿನ್ನಲೆಯಲ್ಲಿ ಕುಸಿದು ಬಿದ್ದಿದ್ದಾರೆ. ಕೊಡಲೇ ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ಚೌಡೇಶ್ವರಿ ಶಾಲ ಶಿಕ್ಷಕರು ಚಿಂತಾಮಣಿ ಮತ್ತು ಅಮ್ಮನಲ್ಲೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ..ವೈದ್ಯರು ಯಾರಿಗೂ ಪ್ರಾಣಾಪಾಯದ ಭೀತಿ ಇಲ್ಲವೆಂದು ಸ್ಥಳಕ್ಕೆ ಅಗಮಿಸಿದ ವಿದ್ಯಾರ್ಥಿಗಳ ಪೋಷಕರಿಗೆ ಹಾಗೂ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ವಿದ್ಯಾರ್ಥಿನಿಲಯದಲ್ಲಿ ಸ್ವಚ್ಚತೆ ಮತ್ತು ಶುದ್ದತೆಗೆ ಪ್ರಥಮ ಅದ್ಯತೆ ನೀಡಲಾಗುವುದು, ಗುಣಮಟ್ಟದ ಆಹಾರವನ್ನು ನೀಡಲು ಕಟ್ಟುನಿಟ್ಟಿನ ಸೂಚನೆಯನ್ನು ನೀಡಲಾಗುವುದು. ಅಡುಗೆಯವರ ನಿರ್ಲಕ್ಷತೆ ವಿರುದ್ದ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯಾರ್ಥಿ ನಿಯಲಯ ನರಸಿಂಹ ಮತ್ತು ಶ್ರೀನಿವಾಸಪ್ಪ ನಡುವೆ ವೈಮನಸ್ಸಿ ನಿಂದ ವಿದ್ಯಾರ್ಥಿಗಳು ಬಲಿ ಪಶುಗಳಾಗುತ್ತಿದ್ದರು. ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಸಿ ಹೆದರಿಸಿ ಬೆದರಿಸಿ ವಿದ್ಯಾರ್ಥಿಗಳು ಏನೊಂದು ಪ್ರಶ್ನಿಸಿದಂತೆ ಭಯ ಬೀತಿ ಉಂಟು ಮಾಡಿದ್ದರು, ವಾರ್ಡನ್ ಗುರು ಶಾಂತಪ್ಪ ಅವರಿಗೆ ದೂರಿನದರೂ ಯಾವೂದೇ ಕ್ರಮ ಕೈಗೊಳ್ಳುತ್ತಿರಲಿಲ್ಲ ಎಂಬ ಆರೋಪದ ಹಿನ್ನಲೆಯಲ್ಲಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.