ಶಾಸಕಿ ರೂಪಕಲಾಶಶಿಧರ್ ಮನೆ ಮುಂದೆ ದಲಿತರ ಪ್ರತಿಭಟನೆ
ಕೆಜಿಎಫ್:ಆ:೧೦: ಗ್ಯಾರೆಂಟಿ ಯೋಜನೆಗಳಿಗಾಗಿ ದಲಿತರ ಅನ್ನಕ್ಕೆ ಕನ್ನ ಹಾಕಿರುವ ಕಾಂಗ್ರೆಸ್ ಸರ್ಕಾರದಲ್ಲಿ ದಲಿತ ಶಾಸಕರು ಧ್ವನಿ ಎತ್ತದಿರುವುದನ್ನು ಪ್ರತಿಭಟಿಸುವ ಉದ್ದೇಶದಿಂದ ದಲಿತ ಪ್ರತಿರೋಧ ಪಡೆ ನೂರಾರು ಕಾರ್ಯಕರ್ತರು ಶಾಸಕಿ ರೂಪಕಲಾಶಶಿಧರ್ ಮನೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಸಾಹಿತಿ ಹಾಗೂ ಸಾಮಾಜಿಕ ಚಿಂತಕ ಕೋಟಿಗಾನಹಳ್ಳಿ ರಾಮಯ್ಯ ದಲಿತ ಸಮುದಾಯವು ಶಾಸಕರ ಮನೆ ಮುಂದೆ ಪ್ರತಿಭಟಿಸುವುದು ತಿಳಿದಿದ್ದರೂ ದಲಿತ ಸಮುದಾಯದ ಪರವಾಗಿ ಸ್ಥಳಕ್ಕೆ ಆಗಮಿಸಿ ಮನವಿ ಪತ್ರ ಸ್ವೀಕರಿಸದೆ ಕಾಂಗ್ರೆಸ್ ಪಕ್ಷದ ಮುಖಂಡರ ಗುಲಾಮರಂತೆ ವರ್ತತಿಸಿರುವುದು ಖಂಡನೀಯ. ರಾಜ್ಯದಲ್ಲಿ ದಲಿತರ ಅನುದಾನಗಳು ಅವಕಾಶಗಳು ಕೇವಲ ರಾಜಕೀಯ ಕ್ಷೇತ್ರದಲ್ಲಿ ಪ್ರಭಲರಾಗಿರುವವರ ಪಾಲು ಆಗಿದೆ ಅದರಲ್ಲೂ ಮಲ್ಲಿಕಾರ್ಜುನ್‌ಖರ್ಗೆ, ಕೆಹೆಚ್.ಮುನಿಯಪ್ಪ ಮಹದೇವಪ್ಪ ಹೀಗೆ ಸರ್ಕಾರದಲ್ಲಿರುವ ಮಂತ್ರಿಗಳು ಶಾಸಕರ ಕುಟುಂಭಸ್ಥರಿಗೆ ಮೀಸಲುಗೊಂಡಿದೆ ಇದು ದುರದೈವದ ಸಂಗತಿಯಾಗಿದ್ದು ದಲಿತ ಸಮುದಾಯವು ಎಚ್ಚೇತುಕೊಳ್ಳಬೇಕಿದೆ ಎಂದು ಹೇಳಿದರು.
ಮಾವಳ್ಳಿ ಶಂಕರ್ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರ ದಲಿತ ಸಮುದಾಯದ ಕತ್ತು ಹಿಸುಕುವ ಕೆಲಸವನ್ನು ಹೊರಟಿದಿದ್ದರಿಂದ ರಾಜ್ಯದಲ್ಲಿ ದಲಿತರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಅಧಿಕಾರಕ್ಕೆ ಏರಲು ಸಹಕಾರಿಯಾಗಿತ್ತು ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಮುಖ್ಯಮಂತ್ರಿಯಾದ ನಂತರ ದಲಿತರ ಪರವಾದ ಮಸೂದೆ ಮಂಡನೆ ಮಾಡಿ ಒಂದು ಕಡೆ ದಲಿತರ ಪರ ಎಂಬಂತೆ ತೊರಿಸಿಕೊಂಡು ಮತ್ತೋಂದು ಕಡೆ ದಲಿತರ ಹಣವನ್ನು ಕೊಳ್ಳೆ ಹೋಡೆಯುತ್ತಿದ್ದಾರೆ ಆದ್ದರಿಂದ ಮುಖ್ಯಮಂತ್ರಿಗಳು ರಾಜೀನಾಮೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ಶಾಸಕಿ ರೂಪಕಲಾಶಶಿಧರ್ ಗೈರು ಹಾಜರು ಆಗಿದ್ದರಿಂದ ತಹಶೀಲ್ದಾರ್ ನಾಗವೇಣಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಸಂಗಸಂದ್ರ ವಿಜಿಕುಮಾರ ಶ್ರೀನಾಥ್, ಹಾರೋಹಳ್ಳಿ ರವಿ, ವೆಂಕಟೇಶ್ ,ಪಿಚ್ಚಹಳ್ಳಿಮಂಜುನಾಥ್, ಕೃಷ್ಣಮೂರ್ತಿ ,ದೇವರಾಜ್ ,ಜೈಬಿಮ್ ಶ್ರೀನಿವಾಸ್ ಹಾಗೂ ಇತರರು ಹಾಜರಿದ್ದರು.
ಚಿತ್ರ:೦೧: ಶಾಸಕಿ ರೂಪಕಲಾಶಶಿಧರ್ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿರುವ ದಲಿತ ಪ್ರತಿರೋದ ಪಡೆ