ರಸ್ತೆಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಒತ್ತಾಯ
ಕೋಲಾರ,ಆ,೧೦- ನಗರ ಮತ್ತು ಹೊರವಲಯದ ರಸ್ತೆಗಳಲ್ಲಿ ರಸ್ತೆಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ವತಿಯಿಂದ ಅಪರ ಜಿಲ್ಲಾಧಿಕಾರಿ ಮಂಗಳ ಹಾಗೂ ಅಡಿಷನಲ್ ಎಸ್ಪಿ ರವಿಶಂಕರ್ ಅವರಿಗೆ ಮನವಿ ಪತ್ರಗಳನ್ನು ಸಲ್ಲಿಸಲಾಯಿತು.
ಕೋಲಾರ ಜಿಲ್ಲೆಯ ನಗರ ಮತ್ತು ಹೊರ ರಸ್ತೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಅಪಫಾತಗಳಿಗೆ ರಸ್ತೆಯ ಸುರಕ್ಷತಾ ಕ್ರಮಗಳು ತೆಗೆದುಕೊಳ್ಳದೇ ಇರುವುದೇ ಕಾರಣಗಳಾಗಿದೆ. ರಸ್ತೆಗಳಲ್ಲಿ ಸಾಕಷ್ಟು ಅಂಕುಡೊಂಕುಗಳು ಹಳ್ಳದಿನ್ನೆಗಳು ಏರ್ಪಾಡಾಗಿದ್ದು, ಈ ರಸ್ತೆಗಳನ್ನು ಸರಿಪಡಿಸುವಲ್ಲಿ ನಿಮ್ಮ ವ್ಯಾಪ್ತಿಗೆ ಬರುವ ಅಧಿಕಾರಿಗಳು ತೀರಾ ನಿರ್ಲಕ್ಷ ವಹಿಸಿರುವುದರಿಂದ ಜನರ ಆರೋಗ್ಯ ಪರಿಪೂರ್ಣವಾಗಿ ಹದಗೆಟ್ಟಿದ್ದು, ಪ್ರಾಣಾಪಾಯಗಳು ಸಹ ಆಗುತ್ತಿರುತ್ತದೆ.
ಇವುಗಳನ್ನು ನಿಯಂತ್ರಣ ಮಾಡಬೇಕಾಗಿರುವ ಪೋಲೀಸ್ ಮತ್ತು ಆರ್.ಟಿ.ಓ.ಇಲಾಖೆ ಕಣ್ಣಿದ್ದು ಕುರುಡರಾಗಿರುತ್ತಾರೆ. ಮತ್ತು ಇಂತಹ ವಾಹನಗಳನ್ನು ತಡೆದು ವಸೂಲಿ ದಂಧೆಯಲ್ಲಿ ತೊಡಗಿರುತ್ತಾರೆ. ಆದ್ದರಿಂದ ತುರ್ತಾಗಿ ತಾವು ರಸ್ತೆ ಸುರಕ್ಷತಾ ಸಭೆಯನ್ನು ನಡೆಸಿ ಮೇಲ್ಕಂಡ ವಿಷಯವನ್ನು ಪರಾಂಭರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಬೇಕಾಗಿ ಒತ್ತಾಯಿಸಿದ್ದಾರೆ.
ಕೋಲಾರ ನಗರದ ಸರ್ವಜ್ಞಪಾರ್ಕ ಅಂದರೆ ಕಾಲೇಜು ರಸ್ತೆಯಲ್ಲಿ ವಿಶಾಲವಾಗಿದ್ದಂತಹ ರಸ್ತೆ ಮತ್ತು ಇದಕ್ಕೆ ಹೊಂದಿಕೊಂಡಿರುವ ಪಾದಚಾರಿ ರಸ್ತೆ ಸ್ಥಳದಲ್ಲಿ ಅವೈಜ್ಞಾನಿಕವಾಗಿ ಶೆಡ್‌ಗಳನ್ನು ನಿರ್ಮಾಣ ಮಾಡಿ ಟ್ರಾಫಿಕ್ ಸಮಸ್ಯೆಯನ್ನು ಉಂಟುಮಾಡುತ್ತಿರುವ ವ್ಯವಸ್ಥೆಗೆ ತಕ್ಷಣ ತಡೆ ನೀಡಿ ಇಂತಹ ದೊಡ್ಡ ರಸ್ತೆಗಳಲ್ಲಿ ಯಾವುದೇ ತರವಾದ ಟ್ರಾಫಿಕ್ ಸಮಸ್ಯೆ ಬಾರದ ರೀತಿ ಯಾವುದೇ ಕಟ್ಟಡ ಶೆಡ್‌ಗಳನ್ನು ನಿರ್ಮಾಣ ಮಾಡದೆ ಕ್ರಮವಹಿಸಲು ಕೋರುತ್ತೇವೆ.
ನಿಯೋಗದಲ್ಲಿ ಕರವೇ ಜಿಲ್ಲಾಧ್ಯಕ್ಷ ಚಂಬೆ ರಾಜೇಶ್, ತಾಲೂಕು ಅಧ್ಯಕ್ಷ ದಿಂಬ ನಾಗರಾಜ್‌ಗೌಡ, ಹೊಳಲಿ ಪ್ರಕಾಶ್, ಜಿಲ್ಲಾ ಉಪಾಧ್ಯಕ್ಷ ಮಂಗಸಂದ್ರ ನಾಗೇಶ್, ಆರ್.ವಿ.ಆರ್ ವೇಣುಗೋಪಾಲ್, ತಾಲೂಕು ಗೌರವಾಧ್ಯಕ್ಷ ರವಿಶಂಕರ್, ಯುವ ಘಟಕ ಉಪಾಧ್ಯಕ್ಷ ಪ್ರಿನ್ಸ್, ನಗರ ಅಧ್ಯಕ್ಷ ಅವಿನಾಶ್ ನಾರಾಯಣ್, ಜಿಲ್ಲಾ ಉಪಾಧ್ಯಕ್ಷರಾದ ಬೈರಪ್ಪನಹಳ್ಳಿ ನಾರಾಯಣಸ್ವಾಮಿ, ಕೂತಂಡಹಳ್ಳಿ ಪಿ ನಾರಾಯಣಸ್ವಾಮಿ, ಕರವೇ ಮುಖಂಡರಾದ ಗೋಪಾಲ್‌ಗೌಡ ಇದ್ದರು.