ಪರಿಶಿಷ ನೌಕರರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಿ
ಕೋಲಾರ,ಆ,೧೦:ಜಿಲ್ಲೆಯಾದ್ಯಂತ ಶಿಕ್ಷಣ ಇಲಾಖೆಯಲ್ಲಿ ನಡೆಯುತ್ತಿರುವ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಿ ನೆರವಾಗುವಂತೆ ಕರ್ನಾಟಕ ರಾಜ್ಯ ಎಸ್ ಸಿ./ಎಸ್.ಟಿ ಸರ್ಕಾರಿ ನೌಕರರ ಸಮನ್ವಯ ಸಮಿತಿ ರಾಜ್ಯ ಉಪಾಧ್ಯಕ್ಷ ಪ್ರದೀಪ್ ಆಗ್ರಹಿಸಿದರು.
ನಗರದ ಸಂಪೂರ್ಣ ಸಬಾಂಗಣದಲ್ಲಿಂದು ಜಿಲ್ಲಾ ಸಮಿತಿ ತಮಗೆ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು.ರಾಜ್ಯದ ವಿವಿದ ಕಡೆಗಳಲ್ಲಿ ಇದ್ದಂತೆ ಜಿಲ್ಲೆಯಲ್ಲೂ ಪರಿಶಿಷ ನೌಕರರಿಗೆ ಸಮಸ್ಯೆ ಗಳು ಇದ್ದು ಇದಕ್ಕೆ ಸೂಕ್ತ ಪರಿಹಾರ ಹುಡುಕುವ ನಿಟ್ಟಿನಲ್ಲಿ ನೌಕರರ ನ್ಯಾಯಯುತ ಮನವಿಗೆ ಸ್ಪಂದಿಸಬೇಕೆಂದರು.
ಜಿಲ್ಲೆಯಾದ್ಯಂತ ಸದಸ್ಯತ್ವ ಆಂದೋಲನ ಜಾರಿಯಲ್ಲಿದ್ದು ಪ್ರತಿಯೊಬ್ಬ ನೌಕರರು ಸದಸ್ಯರಾಗಿ ನೌಕರರ ಹಿತಚಿಂತನೆಗೆ ಪಾತ್ರರಾಗಬೇಕೆಂದರು.
ಜಿಲ್ಲೆಯಾದ್ಯಂತ ನೂತನ ತಾಲ್ಲೂಕು ಸಮಿತಿಗಳ ಪುನ ರಚನೆ ಕಾರ್ಯಕ್ಕೆ ಚಾಲನೆ ನೀಡಿದ್ದು, ಆಸಕ್ತರು ಜಿಲ್ಲಾದ್ಯಕ್ಷರನ್ನು ಮೊ.ನಂ ೯೭೪೩೬೬೪೫೪೭ ಸಂಪರ್ಕಿಸಲು ಕೋರಿದರು.ಇದೆ ಸಂದರ್ಭದಲ್ಲಿ ನೂತನ ಜಿಲ್ಲಾ ಉಪಾದ್ಯಕ್ಷರನ್ನಾಗಿ ದೇವರಾಯ ಸಮುದ್ರ ಸರ್ಕಾರಿ ಪಾಲಿಟೆಕ್ನಿಕನ ಎನ್ ಮುನಿರಾಜು ರವರನ್ನು ನೇಮಕ ಮಾಡಿ ಅಭಿನಂದಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಗೌರವಾದ್ಯಕ್ಷ ಜಿ.ಶ್ರೀನಿವಾಸ ವಹಿಸಿದ್ದು, ಜಿಲ್ಲಾದ್ಯಕ್ಷರಾದ ರಾಮಾಂಜನೇಯರವರು ವರ್ಗಾವಣೆಗೊಂಡ ನಿವೃತ್ತರಾದ ನೌಕರರನ್ನು ಅಭಿನಂದಿಸಿದರು. ಜಿಲ್ಲಾ ಕಾರ್ಯದರ್ಶಿ ಡಿ.ಎನ್.ಮುಕುಂದ ಖಜಾಂಚಿ ಪದ್ಮಾವತಿ, ಕೆ.ವಿ.ಜಗನ್ನಾಥ್ ಉಪಸ್ಥಿತರಿದ್ದರು.