ಭಾಷಾಂತರದಿಂದ ಭಾಷೆ ಹಾಗೂ ಸಾಹಿತ್ಯ ಬೆಳವಣಿಗೆ, ಗ್ರಹಿಕೆ ಸರಳ
ಕಲಬುರಗಿ:ಸೆ.30: ಕೆಲವೇ ಭಾಷೆಗಳು ಎಲ್ಲೆಡೆ ಬಳಕೆ ಮಾಡಿದರೆ ಜನಸಾಮಾನ್ಯರಿಗೆ ಅರ್ಥವಾಗುವುದಿಲ್ಲ. ಅವುಗಳನ್ನು ಮಾತೃಭಾಷೆಗೆ ಪರಿವರ್ತಿಸುವುದು ಅಗತ್ಯ. ಇದರಿಂದ ಮಾತೃಭಾಷೆ, ಸಾಹಿತ್ಯ ಬೆಳವಣಿಗೆಯಾಗುವುದರ ಜೊತೆಗೆ ಜನಸಾಮಾನ್ಯರಗಿಗೆ ಗ್ರಹಿಕೆ ಸುಲಭವಾಗುತ್ತದೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಸಂತೋಷ ಕಾಲನಿ ಕ್ರಾಸ್ ಸಮೀಪವಿರುವ ‘ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದಿಂದ ಸೋಮವಾರ ಏರ್ಪಡಿಸಲಾಗಿದ್ದ ‘ಅಂತಾರಾಷ್ಟ್ರೀಯ ಭಾಷಾಂತರ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಜಗತ್ತಿನ ಭಾಷಾಂತರಿಗೆ ಗೌರವ ಸಲ್ಲಿಸುವುದು ದಿನಾಚರಣೆ ಉದ್ದೇಶವಾಗಿದೆ. ವಿವಿಧ ದೇಶ, ಸಂಸ್ಕøತಿಯನ್ನು ಬೆಸೆಯುವಲ್ಲಿ ಭಾಷಾಂತಕಾರರ ಪಾತ್ರ ಪ್ರಮುಖವಾಗಿದೆ. ಮೂರನೇ ಶತಮಾನದ ಜೆರೋಮ್ ಬೈಬಲ್ ಅವರ ಸ್ಮರಣಾರ್ಥ ಈ ದಿನವನ್ನು ಆಚರಿಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಸಂಸ್ಥೆಯ ಅಧ್ಯಕ್ಷ ದತ್ತು ಹಡಪದ, ಶರಣಕುಮಾರ ಜ್ಯೋತಿ, ಅನಮೋಲ್ ಮಾಲಿ ಪಾಟೀಲ, ವೆಂಕಟೇಶ್ ಸುತಾರ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.