ಅಂಬಾಭವಾನಿ ಜಾತ್ರಾ ಪ್ರಯುಕ್ತ ಜಾತ್ರಾ ವಿಶೇಷ ವಾಹನಗಳ ಕಾರ್ಯಾಚರಣೆ
ಕಲಬುರಗಿ:ಸೆ.30:ತುಳಜಾಪುರದ ಮಾತಾ ಅಂಬಾ ಭವಾನಿ ಜಾತ್ರಾ ಪ್ರಯುಕ್ತ ಜಾತ್ರೆಗೆ ತೆರಳುವ ಭಕ್ತಾದಿಗಳ ಅನುಕೂಲಕ್ಕಾಗಿ ಇದೇ ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 22 ರವರೆಗೆ ಕ.ಕ.ರ.ಸಾ.ನಿಗಮದ ಕಲಬುರಗಿ ವಿಭಾಗ-1, ಕಲಬುರಗಿ ವಿಭಾಗ-2 ಹಾಗೂ ಬೀದರ ವಿಭಾಗದಿಂದ ಒಟ್ಟು 255 ಜಾತ್ರಾ ವಿಶೇಷ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದ್ದು, ಸಾರ್ವಜನಿಕ ಪ್ರಯಾಣಿಕರು ಈ ಸಾರಿಗೆಯ ಸೌಲಭ್ಯದ ಸದುಪಯೋಗಪಡಿಸಿಕೊಳ್ಳಬೇಕೆಂದು ಎಂದು ಕಲಬುರಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.